
ಪ್ರೇಮಿಗಳ ದಿನಕ್ಕೆ ಮತ್ತೆ ಬರ್ತಾರೆ ಸಂಜು ಗೀತಾ..!
‘ಸಂಜು ವೆಡ್ಸ್ ಗೀತಾ 2’ ಸಿನಿಮಾವನ್ನು ಮರು ಬಿಡುಗಡೆ ಮಾಡಲಿಕ್ಕೆ ಚಿತ್ರತಂಡ ಮುಂದಾಗಿದೆ.
ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ನಟನೆಯ ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಕಳೆದ ಜನವರಿ 17 ರಂದು ಬಿಡುಗಡೆ ಆಗಿತ್ತು. ಸಿನಿಮಾ ಅದ್ಭುತವಾಗಿ ಮೂಡಿಬಂದಿತ್ತು ಆದರೆ ಅದ್ಯಾಕೋ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಲಿಲ್ಲ. ಇದೀಗ ‘ಸಂಜು ವೆಡ್ಸ್ ಗೀತಾ 2’ ಸಿನಿಮಾವನ್ನು ಮರು ಬಿಡುಗಡೆ ಮಾಡಲಿಕ್ಕೆ ಚಿತ್ರತಂಡ ಮುಂದಾಗಿದೆ. ಜೊತೆಗೆ 20 ನಿಮಿಷದ ಹೆಚ್ಚುವರಿ ದೃಶ್ಯಗಳನ್ನ ಚಿತ್ರಕ್ಕೆ ಸೇರಿಸಿಲಾಗಿದ್ದು, ಫೆಬ್ರುವರಿ 14ಕ್ಕೆ ಪ್ರೇಮಿಗಳ ದಿನದಂದು ಸಂಜು ಮತ್ತು ಗೀತಾ ಮತ್ತೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ.