Asianet Suvarna News Asianet Suvarna News

ರಶ್ಮಿಕಾ, ಪೂಜಾ ಹೆಗ್ಡೆ, ಸಮಂಥಾರನ್ನ ಹಿಂದಿಕ್ಕಿದ ಶ್ರೀಲೀಲಾ: ನಟಿ ಹಿಂದೆಬಿದ್ದ 9 ಹೀರೋಗಳು!

ಪೆಳ್ಳಿಸಂದಡಿ ಸಿನಿಮಾ ಮೂಲಕ ಟಾಳಿವುಡ್‌ಗೆ ಕಾಲಿಟ್ಟ ನಟಿ ಶ್ರೀಲೀಲಾ  ಬಹಳ ಬೇಗ ತೆಲುಗು ಚಿತ್ರರಂಗಕ್ಕೆ ಹೊಂದಿಕೊಂಡಿದ್ದಾರೆ. ಸದ್ಯ ನಟಿ ಕೈಯಲ್ಲಿ 9 ಸಿನಿಮಾಗಳು ಇವೆ.

ನಟಿ ಶ್ರೀಲೀಲಾ ನಟನೆಯ ಧಮಾಕ ಸಿನಿಮಾ ರವಿತೇಜಾ ಜೊತೆ ಯಾವಾಗ ಬಿಗ್‌ ಹಿಟ್‌ ಆಯ್ತೋ, ಅಲ್ಲಿಂದ ಈ ನಟಿ ನಸೀಬೆ ಬದಲಾಯ್ತು. ಇದೀಗ 9 ತೆಲುಗು ಸ್ಟಾರ್‌ಗಳ ಸಿನಿಮಾಗಳಿಗೆ ಶ್ರೀಲೀಲಾ ನಾಯಕಿಯಾಗಿದ್ದಾರೆ. ಈ ಮೂಲಕ ಅತಿ ಹೆಚ್ಚು ಸಿನಿಮಾಗಳನ್ನು ಹೊಂದಿರೋ ಸ್ಟಾರ್ ನಟಿಯಾಗಿ ಹೊರಹೊಮ್ಮೆದ್ದಾರೆ ಶ್ರೀಲೀಲಾ. ಎಂಬಿಬಿಎಸ್ (MBBS) ಓದುತ್ತಿರೋ ಶ್ರೀಲೀಲಾ, ಏಜುಕೇಷನ್ ಜೊತೆ ನಟನೆ ಕೂಡ ಬ್ಯಾಲೆನ್ಸ್ ಮಾಡ್ತಿದ್ದಾರೆ. ಹಾಗಾದ್ರೆ ಶ್ರೀಲೀಲಾ ಕೈಯಲ್ಲಿ ಯಾವೆಲ್ಲಾ ಸಿನಿಮಾಗಳಿವೆ. ಇಲ್ಲಿದೆ ಮಾಹಿತಿ. ಮಹೇಶ್ ಬಾಬು ಸಿನಿಮಾ, ನಂದಮೂರಿ ಬಾಲಕೃಷ್ಣ, ರಾಮ್ ಪೋತಿನೇನಿ, ವಿಜಯ್ ದೇವರಕೊಂಡ, ಪವನ್ ಕಲ್ಯಾಣ್ ನಟನೆಯ ‘ಉಸ್ತಾತ್ ಭಗತ್ ಸಿಂಗ್’, ನಿತಿನ್ ಹೊಸ ಸಿನಿಮಾ, ನವೀನ್ ಪೊಲಿಸೆಟ್ಟಿ ಸಿನಿಮಾ, ಕಿರೀಟಿ ನಟನೆಯ ‘ಜೂನಿಯರ್’ ಸಿನಿಮಾ, ಪಂಜ ವೈಷ್ಣವ್ ತೇಜ್ ಅವರ ‘ಆದಿಕೇಶವ’ ಸಿನಿಮಾಗಳು ನಟಿಯ ಕೈಯಲ್ಲಿದೆ. ಕನ್ನಡ ಸೇರಿ ಒಟ್ಟು 9 ಸಿನಿಮಾಗಳಲ್ಲಿ ಶ್ರೀಲೀಲಾ ಲಿಸ್ಟ್‌ನಲ್ಲಿವೆ.

ಇದನ್ನೂ ವೀಕ್ಷಿಸಿ: ದೀಪಿಕಾ ದಾಸ್ ಬಿಕಿನಿ ಫೋಟೋ ಫುಲ್ ವೈರಲ್: ಬಿಗ್ ಬಾಸ್ ಬೆಡಗಿಯ ಫೋಟೋಗೆ ತಲೆಗೊಂದು ಕಮೆಂಟ್!

Video Top Stories