ಮದುವೆಗೆ ಕರೆಯಲು ಹೋದ ಚಿಟ್ಟೆಗೆ ಸಿಗ್ತು ಸ್ಪೆಷಲ್ ಗಿಫ್ಟ್: ಭುವನ್ ಭಾವಿ ಪತ್ನಿಗೆ ಜಯಮಾಲ ಸರ್ಪ್ರೈಸ್!
ಮದುಮಗಳು ಹರ್ಷಿಕಾಗೆ ಜಯಮಾಲ ಕಿವಿಯೋಲೆ ಗಿಫ್ಟ್!
ಆಗಸ್ಟ್ 24ಕ್ಕೆ ಹಸೆಮಣೆ ಏರಲಿರೋ ಭುವನ್ ಹರ್ಷಿಕಾ..!
ಮಡಿಕೇರಿಯಲ್ಲಿ ನಡೆಯುತ್ತೆ ಸೆಲೆಬ್ರೆಟಿ ಜೋಡಿ ವಿವಾಹ..!
ಸ್ಯಾಂಡಲ್‌ವುಡ್‌ನಲ್ಲಿ ಈಗ ಮದುವೆ ಸಂಭ್ರಮ ಶುರುವಾಗಿದೆ. ಅದು ಕನ್ನಡ ಚಿತ್ರರಂಗದ ಫೇಮಸ್ ನಟಿ ಹರ್ಷಿಕಾ ಪೂಣಚ್ಚ(Harshika Poonacha) ಹಾಗೂ ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ(Bhuvann Ponnanna) ಪ್ರೀತಿಸಿ ಮದುವೆ ಆಗುತ್ತಿದ್ದಾರೆ. ಮೊನ್ ಮೊನ್ನೆಯಷ್ಟೆ ಲಗ್ನ ಪತ್ರಿಕೆ ಹಂಚಲು ಸ್ಯಾಂಡಲ್‌ವುಡ್‌ಗೆ ಸೆಲೆಬ್ರೆಟಿಗಳ ಮನೆಗೆ ಹೋಗಿದ್ದ ನವಜೋಡಿಗೆ ಈಗ ನಟಿ ಜಯಮಾಲಾ(Jayamala) ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ. ಹರ್ಷಿಕಾ ಹಾಗೂ ಭುವನ್ ಪೊನ್ನಣ್ಣ ಆಗಸ್ಟ್ 24ಕ್ಕೆ ಕೊಡಗಿನಲ್ಲಿ ಮದುವೆ(Marriage) ಆಗುತ್ತಿದ್ದಾರೆ. ಹೀಗಾಗಿ ಈ ಜೋಡಿ ಹಿರಿಯ ನಟಿ ಜಯಮಾಲ ಮನೆಗೆ ಮದುವೆ ಕರೆಯಲು ತೆರಳಿದ್ರು. ಆಗ ಈ ಜೋಡಿಯ ಲವ್ ಸ್ಟೋರಿ ಕೇಳಿ ಮೆಚ್ಚಿದ ನಟಿ ಜಯಮಾಲ ಹರ್ಷಿಕಾ ಪೂಣಚ್ಚಗೆ ಚಿನ್ನದ ಕಿವಿಯೋಲೆಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಮದುವೆ ಆಮಂತ್ರಣ ಪತ್ರಿಕೆ ಹಂಚುವಾಗಲೇ ವಿಶೇಷ ಉಡುಗೊರೆ ಕೊಟ್ಟು ಹರ್ಷಿಕಾ ಹಾಗೂ ಭುವನ್‌ಗೆ ಜಯಮಾಲಾ ಆಶೀರ್ವಾದ ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: 'ಯಶ್ 19' ಸಿನಿಮಾ ಅನೌನ್ಸ್‌ಗೆ ದಿನಾಂಕ ನಿಗದಿ: ರಾಕಿಯನ್ನ ಆಶೀರ್ವದಿಸುತ್ತಾಳೆ ವರಮಹಾಲಕ್ಷ್ಮಿ!