ಮಹೇಶ್ ಬಾಬು ಮಗಳ ಮೊದಲ ಸಂಭಾವನೆ ಎಷ್ಟು ಗೊತ್ತಾ ?: ಒಂದು ಜಾಹೀರಾತಿಗೆ ಇಷ್ಟೊಂದು ಪಡೆದ್ರಾ ?
ಮಹೇಶ್ ಬಾಬು ಪುತ್ರಿ ಸಿತಾರಾ ಇತ್ತೀಚೆಗೆ ಸಿಂಗಲ್ ಆಗಿ ಕಮರ್ಷಿಯಲ್ ಜಾಹೀರಾತನನ್ನು ಮಾಡಿ ಪ್ರಸಿದ್ಧ ಆಭರಣ ಬ್ರ್ಯಾಂಡ್‌ನ ರಾಯಭಾರಿಯಾಗಿದ್ದಾರೆ.
ಪ್ರಿನ್ಸ್ ಮಹೇಶ್ ಬಾಬು ಮಗಳು ಸಿತಾರಾ (Sitara) ಮೊಟ್ಟ ಮೊದಲ ಬಾರಿಗೆ ಜಾಹೀರಾತುವೊಂದರಲ್ಲಿ ನಟಿಸಿದ್ದಾರೆ. ಆದ್ರೆ ಅದಕ್ಕೆ ಅವರು ಪಡೆದಿರುವ ಸಂಭಾವನೆ ಎಷ್ಟು ಎಂದು ತಿಳಿದ್ರೆ, ನಿಮ್ಮ ತಲೆ ತಿರುಗುವುದು ಪಕ್ಕಾ. ಹೌದು, ಅಮೆರಿಕಾದಲ್ಲಿ ಅವರ ಜಾಹೀರಾತು ಕಾಣಿಸಿಕೊಂಡಿದೆ. ಒಡವೆ ಜಾಹೀರಾತಿನಲ್ಲಿ( Advertisment) ಸಿತಾರಾ ಕಾಣಿಸಿಕೊಂಡಿದ್ದಾರೆ. ಈ ಜಾಹಿರಾತಿಗೆ ಅವರು ಒಂದು ಕೋಟಿ ಸಂಭಾವನೆ ಪಡೆದಿದ್ದಾರೆ. 11 ನೇ ವಯಸ್ಸಿಗೆ ಸಿತಾರಾ ಈ ಸಾಧನೆ ಮಾಡಿದ್ದು, ಮಹೇಶ್ ಬಾಬು(Mahesh babu) ಈ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್‌ನನ್ನು ಹಂಚಿಕೊಂಡಿದ್ದಾರೆ.ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸಿತಾರಾ, ಯೂಟ್ಯೂಬ್‌ನಲ್ಲಿ ವಿಡಿಯೋ ಮಾಡುತ್ತಾ ತನ್ನದೇ ಆದ ಐಡೆಂಟಿಟಿಯನ್ನ ಕ್ರಿಯೇಟ್ ಮಾಡಿಕೊಂಡಿದ್ದಾರೆ.
ಇದನ್ನೂ ವೀಕ್ಷಿಸಿ: ‘D50’ ಸಿನಿಮಾ ಫಸ್ಟ್ ಲುಕ್ ವೈರಲ್: ನಟ ಧನುಷ್ ಫೋಸ್‌ಗೆ ಫ್ಯಾನ್ಸ್ ಫಿದಾ..