‘D50’ ಸಿನಿಮಾ ಫಸ್ಟ್ ಲುಕ್ ವೈರಲ್: ನಟ ಧನುಷ್ ಫೋಸ್‌ಗೆ ಫ್ಯಾನ್ಸ್ ಫಿದಾ..
ನಟ ಧನುಷ್ 50ನೇ ಸಿನಿಮಾ ದಿ 50 ಪೋಸ್ಟ್‌ರ್ ರಿವೀಲ್ ಆಗಿದೆ. ಆದ್ರೆ ಈ ಚಿತ್ರದ ಶೀರ್ಷಿಕೆ ಅಂತಿಮವಾಗಿಲ್ಲ.
ಖ್ಯಾತ ತಮಿಳು ನಟ ಧನುಷ್ (Dhanush) ವಿಭಿನ್ನ ಕತೆ ಆಯ್ಕೆಯಲ್ಲಿ ಯಾವಾಗಲೂ ಒಂದು ಹೆಜ್ಜೆ ಮುಂದೆ ಇರುತ್ತಾರೆ. ಈ ಬಾರಿಯೂ ಧನುಷ್ ತನ್ನ 50ನೇಸಿನಿಮಾಗಾಗಿ ಏನೋ ಡಿಫರೆಂಟ್ ಕತೆಯನ್ನು ಹುಡುಕಿ ತೆಗೆದಂದತಿದೆ. ಸದ್ಯ ಧನುಷ್ ದಿ 50( D50) ಪೋಸ್ಟರ್ ರಿವೀಲ್ (poster released)ಆಗಿದೆ. ಅವರು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಧನುಷ್ ಅವರು ಕ್ಯಾಮೆರಾಗೆ ಬೆನ್ನು ಹಾಕಿ ನಿಂತಿದ್ದಾರೆ. ಶರ್ಟ್ಲೆಸ್ ಆಗಿ ಅವರು ಪೋಸ್ ನೀಡಿದ್ದು, ತಲೆ ಬೋಳಿಸಿಕೊಂಡಂತಿದೆ. ಪೋಸ್ಟರ್ನಲ್ಲಿ ಕೆಂಪು ಬಣ್ಣ ಹೈಲೈಟ್ ಆಗಿದೆ. ಹಾಗಾಗಿ ಇದು ಭರ್ಜರಿ ಆ್ಯಕ್ಷನ್ ಸಿನಿಮಾ ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ. ಮತ್ತೊಂದು ವಿಶೇಷ ಏನೆಂದರೆ, ಈ ಸಿನಿಮಾವನ್ನು ಸ್ವತಃ ಧನುಷ್ ಅವರು ನಿರ್ದೇಶಿಸುತ್ತಿದ್ದಾರೆ. ‘ಸನ್ ಪಿಕ್ಚರ್ಸ್’ ಬ್ಯಾನರ್ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ.
ಇದನ್ನೂ ವೀಕ್ಷಿಸಿ: ಧೂಳೆಬ್ಬಿಸಿದ ಸಲಾರ್ ಟೀಸರ್!: ಮಹತ್ವದ ಸುಳಿವು ಪತ್ತೆ ಹಚ್ಚಿದ ಫ್ಯಾನ್ಸ್ !