
ಸಪ್ತ ಸಾಗರದಾಚೆ ಕಳೆದು ಹೋಗಿದ್ದೆಲ್ಲಿ ರಕ್ಷಿತ್ ಶೆಟ್ಟಿ? ಆಧ್ಯಾತ್ಮದ ಕಡೆಗೆ ಸಿಂಪಲ್ ಸ್ಟಾರ್‌ಗೆ ಸೆಳೆತ?
ಮೊದಲೇ ಒಬ್ಬಂಟಿ ಆಗಿರುವುದಕ್ಕೆ ಇಷ್ಟ ಪಡೋ ರಕ್ಷಿತ್ ಆದ್ಯಾತ್ಮದ ಕಡೆಗೆ ಹೋಗಿರೋದಕ್ಕೆ ಇಷ್ಟು ತಡವಾದರೂ ಸಿನಿಮಾ ಅನೌನ್ಸ್ ಮಾಡಿಲ್ಲ ಅಂತ ರೂಮರ್ಸ್ ಹರಿದಾಡ್ತ ಇವೆ.
ಸ್ಯಾಂಡಲ್‌ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅದೆಲ್ಲಿ ಕಾಣೆಯಾದರು ಅಂತ ಫ್ಯಾನ್ಸ್ ಹುಡುಕ್ತಾನೆ ಇದ್ದಾರೆ. ಸಪ್ತಸಾಗರದಾಚೆ ಎಲ್ಲೋ ಕಳೆದು ಹೋದ ರಕ್ಷಿತ್ ಬಣ್ಣದ ದುನಿಯಾ ಬಗ್ಗೆ ಇಂಟ್ರೆಸ್ಟ್ ಅನ್ನೇ ಕಳೆದುಕೊಂಡು ಬಿಟ್ಟಿದ್ದಾರೆ ಅನ್ನೋ ಗಾಸಿಪ್ ಹರಿದಾಡ್ತಾ ಇವೆ. ಹಾಗಾದ್ರೆ ನಿಜಕ್ಕೂ ರಕ್ಷಿತ್ ಎಲ್ಲಿದ್ದಾರೆ ಏನ್ ಮಾಡ್ತಾ ಇದ್ದಾರೆ..? ಇಲ್ಲಿದೆ ನೋಡಿ ಆ ಕುರಿತ ಎಕ್ಸ್ ಕ್ಲೂಸಿವ್ ಸ್ಟೋರಿ. ಸಪ್ತಸಾಗರದಾಚೆ ಎಲ್ಲೋ ಸೈಡ್ ಎ & ಬಿ ರಿಲೀಸ್ ಆಗಿ ಎರಡು ವರ್ಷ ಕಳೆದಾಯ್ತು. ಈಗಲೂ ರಕ್ಷಿತ್ ನಟನೆಯ ಮುಂದಿನ ಚಿತ್ರ ಅನೌನ್ಸ್ ಆಗಿಲ್ಲ. ಬೇರೆ ಸ್ಟಾರ್ ಗಳ ರೀತಿ ರಕ್ಷಿತ್ ಬೇರೆ ಕಲಾವಿದರ ಸಿನಿಮಾ ಇವೆಂಟ್ ಗಳಲ್ಲೂ ಕಾಣಿಸಿಕೊಳ್ಳಲ್ಲ.
ಏಕಾಂಗಿಯಾಗಿ ರಕ್ಷಿತ್ ಅದೆಲ್ಲಿ ಹೋದ್ರೂ ಅಂತ ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ದಾರೆ. ಹೌದು ರಕ್ಷಿತ್ ಇತ್ತೀಚಿಗೆ ಆಧ್ಯಾತ್ಮದ ಕಡೆಗೆ ಆಸಕ್ತಿ ಬೆಳೆಸಿಕೊಂಡಿದ್ದಾರೆ ಅಂತೆ. ಮೊದಲೇ ಒಬ್ಬಂಟಿ ಆಗಿರುವುದಕ್ಕೆ ಇಷ್ಟ ಪಡೋ ರಕ್ಷಿತ್ ಆದ್ಯಾತ್ಮದ ಕಡೆಗೆ ಹೋಗಿರೋದಕ್ಕೆ ಇಷ್ಟು ತಡವಾದರೂ ಸಿನಿಮಾ ಅನೌನ್ಸ್ ಮಾಡಿಲ್ಲ ಅಂತ ರೂಮರ್ಸ್ ಹರಿದಾಡ್ತ ಇವೆ. ಆದ್ರೆ ನಿಜ ವಿಷ್ಯ ಬೇರೇನೆ ಇದೆ. ರಕ್ಷಿತ್ ಮುಂದಿನ ಚಿತ್ರದ ತಯಾರಿಯನ್ನ ಮಾಡಿಕೊಳ್ತಾ ಇದ್ದಾರೆ. ಈ ಸಾರಿ ಬರಿ ನಟನೆ ಮಾತ್ರ ಅಲ್ಲ ನಿರ್ದೇಶನ ಕೂಡ ಮಾಡ್ತಾ ಇರೋದ್ರಿಂದ ರಕ್ಷಿತ್ ಇಷ್ಟೊಂದು ಸಮಯ ತೆಗೆದುಕೊಂಡಿದ್ದಾರೆ. ಇದೇ ದೀಪಾವಳಿಯಿಂದ ರಕ್ಷಿತ್ ನಟನೆ ನಿರ್ದೇಶನದ ಹೊಸ ಸಿನಿಮಾ ಶುರು ಆಗಲಿದೆ.
ಹೌದು ರಕ್ಷಿತ್ ಮುಂದಿನ ಸಿನಿಮಾ ಯಾವುದು ಅಂತ ಗೊತ್ತಾದ್ರೆ ನೀವು ಥ್ರಿಲ್ ಆಗ್ತೀರಾ. ಉಳಿದವರು ಕಂಡಂತೆ ಮೂವಿಯ ಪ್ರಿಕ್ವೆಲ್ ರಿಚರ್ಡ್ ಆ್ಯಂಟನಿಯನ್ನ ರಕ್ಷಿತ್ ತೆರೆಗೆ ತರಲಿದ್ದಾರೆ. ಮೂರು ವರ್ಷದ ಹಿಂದೆಯೇ ಇದನ್ನ ಅನೌನ್ಸ್ ಮಾಡಿದ್ದ ರಕ್ಷಿತ್ ಈಗ ಪೂರ್ಣ ತಯಾರಿ ಮಾಡಿಕೊಂಡು ದೀಪಾವಳಿ ಯಿಂದ ಶೂಟಿಂಗ್ ಅಖಾಡಕ್ಕೆ ಇಳಿಯಲಿದ್ದಾರೆ. ಹೊಂಬಾಳೆ ಫಿಲ್ಮ್ಸ್ ದೊಡ್ಡ ಬಜೆಟ್ ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಿದೆ. ಇದರ ಬಳಿಕವೂ ರಕ್ಷಿತ್ ಅಕೌಂಟ್ ನಲ್ಲಿ ಸಾಲು ಸಾಲು ಸಿನಿಮಾಗಳಿವೆ. ಸೋ ಎರಡು ವರ್ಷ ಕಾಣೆಯಾದ ಸಿಂಪಲ್ ಸ್ಟಾರ್ ಮುಂದಿನ ದಿನಗಳಲ್ಲಿ ಬಿಗ್ ಪ್ರಾಜೆಕ್ಟ್ ಗಳ ಮೂಲಕ ಫ್ಯಾನ್ಸ್ ಮುಂದೆ ಬರಲಿದ್ದಾರೆ.