Asianet Suvarna News Asianet Suvarna News

ಲೀಲಾವತಿ-ವಿನೋದ್ ಅಪರೂಪದ ತಾಯಿ-ಮಗ,ಶ್ರೇಷ್ಠ ನಟಿ ನಮ್ಮನ್ನು ಆಗಲಿದ್ದಾರೆ: ಸಿಎಂ

ಲೀಲಾವತಿ ದಕ್ಷಿಣ ಭಾರತದ ಬಹುಭಾಷಾ ನಟಿ
ಯಾವುದೇ ಪಾತ್ರ ಕೊಟ್ಟರೂ ಜೀವ ತುಂಬುತ್ತಿದ್ರು
ನಟಿಗೆ  ಶ್ರದ್ಧಾಂಜಲಿ ಅರ್ಪಿಸಿದ ಸಿದ್ದರಾಮಯ್ಯ
 

ನಟಿ ಲೀಲಾವತಿ ಅವರ ಅಂತಿಮ ದರ್ಶನವನ್ನು ಸಿಎಂ ಸಿದ್ದರಾಮಯ್ಯ(Siddaramaiah) ಪಡೆದರು. ಬಳಿಕ ಮಾತನಾಡಿದ ಅವರು, ಲೀಲಾವತಿಯವರ(Leelavathi) ನಿಧನದ ಬಗ್ಗೆ ಈಗಾಗಲೇ ನಾನು ಸಂತಾಪ ಸೂಚಿಸಿದ್ದೇನೆ. ಅವರನ್ನು ಈ ಮೊದಲೇ ಭೇಟಿ ಮಾಡಿದ್ದೆ. ವಿನೋದ್ ರಾಜ್‌ಗೆ(Vinod raj) ತಾಯಿ ಮೇಲೆ ತುಂಬಾ ಪ್ರೀತಿ ಇದೆ. ಸಹಾಯ ಬೇಕಾದ್ರೆ ಕೇಳು ಅಂತ ಅವರ ಮಗನಿಗೆ ಹೇಳಿದ್ದೆ, ಆದ್ರೆ ಅವರು ಕೇಳಿಲ್ಲ. ಸರ್ಕಾರದ ವತಿಯಿಂದ ಸರ್ಕಾರಿ ಗೌರವ ದೊಂದಿಗೆ ಅಂತ್ಯಸಂಸ್ಕಾರ ಮಾಡಲು ಸರ್ಕಾರಕ್ಕೆ ಆದೇಶ ನೀಡಿದ್ದೇನೆ. ಲೀಲಾವತಿಯವರು ಸಿನಿರಂಗದ ಬಹುದೊಡ್ಡ ನಟಿ. ಯಾವುದೇ ಪಾತ್ರ ಕೊಟ್ಟರೂ ಜೀವ ತುಂಬುತ್ತಿದ್ರು. ಅವರು ಮನೋಜ್ಞವಾಗಿ ಅಭಿನಯಿಸ್ತಿದ್ರು. ಶ್ರೇಷ್ಠ ನಟಿ ಇಂದು ನಮ್ಮನ್ನು ಆಗಲಿದ್ದಾರೆ. ವಿನೋದ್‌ಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. 

ಇದನ್ನೂ ವೀಕ್ಷಿಸಿ:  ಅಮ್ಮನ ನೆನಪಿನಲ್ಲಿ ಸದಾ ಇರುತ್ತೇನೆ, ಅವರ ಕೆಲ ಕನಸುಗಳಿದ್ವು ಅದನ್ನು ನನಸಾಗಿಸುತ್ತೇನೆ: ವಿನೋದ್ ರಾಜ್‌

Video Top Stories