ಶಿವಣ್ಣನ ಪ್ರೇಮ ಗೀತೆಗೆ ಪ್ರಭುದೇವ ಆಕ್ಷನ್ ಕಟ್: ಕರಕಟ ದಮನಕ ಲವ್ ಸಾಂಗ್ ರಿಲೀಸ್!

ಸ್ಯಾಂಡಲ್​ವುಡ್​ನ ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜ್ ಕುಮಾರ್ ಹಾಗು ಭಾರತೀಯ ಚಿತ್ರರಂಗದ ಡಾನ್ಸ್​ ಕಿಂಗ್ ಪ್ರಭುದೇವ ಇದೇ ಮೊದಲ ಭಾರಿಗೆ ತೆರೆ ಹಂಚಿಕೊಳ್ಳುತ್ತಿರೋ ಸಿನಿಮಾ ಕರಟಕ ದಮನಕ. ನಿರ್ದೇಶಕ ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳಿರೋ ಈ ಸಿನಿಮಾದ ಟೈಟಲ್ ಸಾಂಗ್ ರಿಲೀಸ್ ಆಗಿ ಸೌಂಡ್ ಮಾಡಿತ್ತು. 
 

First Published Feb 25, 2024, 12:20 PM IST | Last Updated Feb 25, 2024, 12:20 PM IST

ಸ್ಯಾಂಡಲ್​ವುಡ್​ನ ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜ್ ಕುಮಾರ್ ಹಾಗು ಭಾರತೀಯ ಚಿತ್ರರಂಗದ ಡಾನ್ಸ್​ ಕಿಂಗ್ ಪ್ರಭುದೇವ ಇದೇ ಮೊದಲ ಭಾರಿಗೆ ತೆರೆ ಹಂಚಿಕೊಳ್ಳುತ್ತಿರೋ ಸಿನಿಮಾ ಕರಟಕ ದಮನಕ. ನಿರ್ದೇಶಕ ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳಿರೋ ಈ ಸಿನಿಮಾದ ಟೈಟಲ್ ಸಾಂಗ್ ರಿಲೀಸ್ ಆಗಿ ಸೌಂಡ್ ಮಾಡಿತ್ತು. ಇದೀಗ ಕರಕಟ ದಮನಕ ಲವ್ ಸಾಂಗ್ ರಿಲೀಸ್ ಆಗಿದೆ.  ಕರಟಕ ದಮನಕ ಸಿನಿಮಾ ಟೈಟಲ್​ ಸಾಂಗ್​​ನಲ್ಲಿ ಶಿವಣ್ಣ ಪ್ರಭುದೇವ ಡಾನ್ಸ್​ ಸಿಕ್ಕಾಪಟ್ಟೆ ಕಿಕ್​ ಕೊಟ್ಟಿತ್ತು. ಈಗ ಶಿವಣ್ಣನ ಲವ್ ಸಾಂಗ್​​ಗೆ ಪ್ರಭುದೇವ ಆಕ್ಷನ್ ಕಟ್ ಹೇಳಿದ್ದಾರೆ. ಕರಟಕ ದಮನಕ ಸಿನಿಮಾದಲ್ಲಿ ಶಿವಣ್ಣನಿಗೆ ಜೋಡಿಯಾಗಿ ಪ್ರಿಯಾ ಆನಂದ್​ ನಟಿಸಿದ್ದು, ಈ ಜೋಡಿಯ ರೊಮ್ಯಾಂಟಿಕ್ ಹಾಡಿದು. 

ಈ ಹಾಡಿನ ಕೊರಿಯೋಗ್ರಫಿಯನ್ನ ಪ್ರಭುದೇವ ಅವರೇ ಮಾಡಿರೋದು ವಿಶೇಷ. ಯೋಗರಾಜ್ ಭಟ್ ಬರೆದಿರೋ ಈ ಲವ್ ಸಾಂಗ್ ಅನ್ನ ರಾಜೇಶ್ ಕೃಷ್ಣ ಹಾಡಿದ್ದಾರೆ. ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು "ಕರಟಕ" ಇನ್ನೊಂದರ ಹೆಸರು "ದಮನಕ". ಈ ಎರಡೂ ನರಿಗಳು ಕಾಡು ಮತ್ತು ನಾಡಿನ ತಲೆ ಕೆಡಿಸಿ ಇತಿಹಾಸವಾದವು. ಆ ಕುತಂತ್ರಿ ನರಿಗಳ ಕತೆಯೇ ಕರಟಕ ದಮಕನ. ಶಿವಣ್ಣ ಇಲ್ಲಿ ಕರಟಕನಾಗಿ ಪ್ರಭುದೇವ್‌ ದಮನಕನಾಗಿ ನಟಿಸಿದ್ದಾರೆ. ಈ ಸಿನಿಮಾವನ್ನ ರಾಕ್​ಲೈನ್ ವೆಂಕಟೇಶ್​ ನಿರ್ಮಾಣ ಮಾಡಿದ್ದು, ಶಿವರಾತ್ರಿ ಹಬ್ಬದ ಸಮಯದಲ್ಲಿ ಅಂದರೆ ಮಾರ್ಚ್‌ 8ರಂದು ಕರಟಕ ದಮನಕ ಸಿನಿಮಾ ಬಿಡುಗಡೆಯಾಗಲಿದೆ. 

Video Top Stories