Asianet Suvarna News Asianet Suvarna News

ರಿಪೋರ್ಟರ್ಸ್ ಜೋಶ್ ನೋಡಿ ಶಾಕ್ ಆದ ಶಿವಣ್ಣ..! ಚಿಕ್ಕ ಮಕ್ಕಳಂತೆ ಕುಣಿದು ಕುಪ್ಪಳಿಸೋ ಗಾಜನೂರಿನ ಗಂಡು..!

ಹ್ಯಾಟ್ರಿಕ್ ಹಿರೋ.. ಸೆಂಚುರಿ ಸ್ಟಾರ್..ಕರುನಾಡ ಚಕ್ರವರ್ತಿ.. ನಟ ಡಾ.ಶಿವರಾಜ್ಕುಮಾರ್ ಸ್ಕ್ರಿನ್ ಮೇಲೆ ಬರ್ತಿದ್ರೆ, ಅಲ್ಲಿ ಮಿಂಚೇ ಹರಿದಾಡಿ ಬಿಟ್ಟಿರುತ್ತೆ. ಅದರಲ್ಲೂ ಲಾಂಗು.. ಮಚ್ಚು ಹಿಡ್ಕೊಂಡು ಬರ್ತಿದ್ರೆ.. ಅಭಿಮಾನಿಗಳು ಒಂದು ಪಟ್ಟು ಹೆಚ್ಚೇ ಥ್ರಿಲ್ ಆಗ್ಬಿಟ್ಟಿರ್ತಾರೆ. 
 

First Published Sep 24, 2023, 9:29 AM IST | Last Updated Sep 24, 2023, 11:11 AM IST


ನಟ ಶಿವರಾಜ್‌ ಕುಮಾರ್‌ ನೋಡೋದಕ್ಕೆ ಸೈಲೆಂಟ್ ಅಂತ ಅನ್ಸಿದ್ರೂ, ನಟಿಸುವಾಗ ಮಾತ್ರ ಅಕ್ಷರಶಃ ಪರಕಾಯ ಪ್ರವೇಶ ಮಾಡಿ ನಟಿಸ್ತಿರ್ತಾರೆ. ಇಲ್ಲಿಯವರೆಗೆ ಇವರು ಏನಿಲ್ಲ ಅಂದರೂ ನೂರಿಪ್ಪತ್ತಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ. ಎಲ್ಲ ಪಾತ್ರಗಳು ಒಂದಕ್ಕಿಂತ ಒಂದು ಭಿನ್ನ. ಆದರೂ ಯಾವ ಪಾತ್ರಕ್ಕೂ ಚ್ಯುತಿ ಬರದಂತೆ ನಡಿಸಿದ್ದಾರೆ ಈ ದೊಡ್ಡಮನೆ ಹುಡುಗ. ಪೊಲೀಸ್, ಡಾಕ್ಟರ್, ಕಳ್ಳ, ರೌಡಿ, ರೈತ, ಬಿಸಿನೆಸ್ಮ್ಯಾನ್ ಹೀಗೆ ಅನೇಕ ಬಗೆಯ ಪಾತ್ರಗಳನ್ನ ಶಿವಣ್ಣ(Shivarajkumar) ಲೀಲಾಜಾಲವಾಗಿ ಮಾಡಿದ್ದಾರೆ. ಆದರೆ ಅಭಿಮಾನಿಗಳಿಗೇಕೋ ಏನೋ ಇವರ ರಫ್ ಎಂಡ್ ಟಫ್ ರಗಡ್ ಲುಕ್ಕೇ, ಹೆಚ್ಚು ಇಷ್ಟ ಆಗೋದು. ಇತ್ತಿಚೆಗೆ ಜೈಲರ್ ಸಿನೆಮಾದಲ್ಲೂ ಅದೇ ಆ್ಯಂಗ್ರಿ ಲುಕ್ನಲ್ಲಿ ಕೆಲವೇ ಕೆಲವು ನಿಮಿಷ ಕಾಣಿಸ್ಕೊಂಡು, ಎಂಟರ್ಟೈನ್ ಮಾಡಿದ್ದರು. ಶಿವಣ್ಣ ಯಾವ ಪಾತ್ರ ಮಾಡಿದ್ರೂ ಪರ್ಫೆಕ್ಟ್ ಆಗೇ ಮಾಡ್ತಾರೆ. ಅದರಲ್ಲಿ ದೂಸರಾ ಮಾತೇ ಇಲ್ಲ. ಆದರೆ ಸಿರಿಯಸ್ ಪಾತ್ರ ಮಾಡಿದ್ರಂತೂ, ಆ ಪಾತ್ರ ಎಲ್ಲರೂ ಉಸಿರು ಬಿಗಿ ಹಿಡಿದು ನೋಡೋ ಹಾಗೆ ಮಾಡ್ತಾರೆ. ಕೆಲವರಂತೂ ಶಿವಣ್ಣ ರಿಯಲ್ ಲೈಫ್‌ನಲ್ಲೂ ಇಷ್ಟೇ ಸಿರಿಯಸ್ (Serious role) ಆಗಿ ಇರೋದೋ ಏನೋ ಅಂತ ಅಂದ್ಕೊಂಡು ಬಿಟ್ಟಿದ್ದಾರೆ. ಆದರೆ ರಿಯಲ್ ಲೈಫ್ನಲ್ಲಿ  ಶಿವಣ್ಣ ತಧ್ವಿರುದ್ಧ. ಅಂದ್ರೆ ಫುಲ್ ಆಫ್ ಎನರ್ಜಿ, ಅಷ್ಟೆ ಫನ್ನಿ ಅಂತರ್ಥ. ಇತ್ತೀಚೆಗೆ ನಟ ಉಪ್ಪಿ ನಿರ್ದೇಶನದ ಯುಐ ಸಿನಿಮಾದ(UI cinema) ಟೀಸರ್ ಬಿಡುಗಡೆ ಸಮಯದಲ್ಲಿ ನಡೆದಿರೋದು. ಕೆಲ ಯುವಕರು ವೇದಿಕೆ ಮೇಲೆ ಬಂದು ಗಲಾಟೆ ಮಾಡುತ್ತಾರೆ. ಆಗ ಶಿವಣ್ಣ ಕೊಟ್ಟ ಮಸ್ತ್ ರಿಯಾಕ್ಷನ್ ಹೇಗಿದೆ, ಅಲ್ಲಿದ್ದವರ ಮೊಗದಲ್ಲಿ ನಗು ಮೂಡಿಸಿತ್ತು.

ಇದನ್ನೂ ವೀಕ್ಷಿಸಿ:  ರಾಜತಾಂತ್ರಿಕ ಮುನಿಸು..ಟ್ರುಡೋ ಸಾಮ್ರಾಜ್ಯಕ್ಕೆ ನಷ್ಟ: 6 ವರ್ಷಗಳಲ್ಲಿ 9 ಸುತ್ತಿನ ಮಾತುಕತೆ ವಿಫಲ..!