ಪತ್ನಿ ಗೆಲುವಿಗಾಗಿ ನಟ ಶಿವರಾಜ್ ಕುಮಾರ್ ಉತ್ತರ ಕನ್ನಡದಲ್ಲಿ ಟೆಂಪಲ್ ರನ್!

ಪತ್ನಿ ಗೀತಾ ಗೆಲುವಿಗೆ ಶಿರಸಿ ಮಾರಿಕಾಂಬ ದೇವಸ್ಥಾನದಲ್ಲಿ ಶಿವರಾಜ್ ಕುಮಾರ್ ವಿಶೇಷ ಪೂಜೆ ಸಲ್ಲಿಸಿದರು.
 

Share this Video
  • FB
  • Linkdin
  • Whatsapp

ಕಾರವಾರ: ಪತ್ನಿಯ ಗೆಲುವಿಗಾಗಿ ನಟ ಶಿವರಾಜ್ ಕುಮಾರ್(Shivaraj Kumar) ಟೆಂಪಲ್ ರನ್. ಶಿರಸಿ ಶ್ರೀ ಮಾರಿಕಾಂಬಾ ದೇವಿಯ ದರ್ಶನವನ್ನು ನಟ ಶಿವರಾಜ್ ಕುಮಾರ್ ದಂಪತಿ ಪಡೆದರು. ಪತ್ನಿಯ ಜೊತೆ ಬಂದು ಶ್ರೀ ಮಾರಿಕಾಂಬೆಗೆ(Marikamba temple) ಉಡಿ ಅರ್ಪಿಸಿ, ವಿಶೇಷ ಪೂಜೆ ಸಲ್ಲಿಸಿದರು. ಶಿವಮೊಗ್ಗ ಲೋಕ ಅಖಾಡದಲ್ಲಿ ಕಣಕ್ಕಿಳಿದಿರುವ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್(Geetha Shivaraj kumar). ಕಳೆದ ಒಂದೂವರೆ ತಿಂಗಳಿನಿಂದ ಪತ್ನಿಯ ಜೊತೆ ಪ್ರಚಾರದಲ್ಲಿ ಶಿವರಾಜ್ ಕುಮಾರ್ ತೊಡಗಿಸಿಕೊಂಡಿದ್ದಾರೆ. ಇಂದು ಮತದಾನ ಹಿನ್ನೆಲೆ ಶಿರಸಿ(Shirasi) ಶ್ರೀ ಮಾರಿಕಾಂಬೆಗೆ ವಿಶೇಷ ಪೂಜೆ ಮಾಡಿಸಿ ಪ್ರಾರ್ಥನೆ ಸಲ್ಲಿಸಿದರು.

ಇದನ್ನೂ ವೀಕ್ಷಿಸಿ: ನಮ್ಮ ದೇಶ, ಸನಾತನ ಧರ್ಮವನ್ನು ಉಳಿಸಲು ಎಲ್ಲಾ ಮತ ಹಾಕಿ:ಬಸನಗೌಡ ಪಾಟೀಲ್‌ ಯತ್ನಾಳ್‌

Related Video