ನಮ್ಮ ದೇಶ, ಸನಾತನ ಧರ್ಮವನ್ನು ಉಳಿಸಲು ಎಲ್ಲಾ ಮತ ಹಾಕಿ:ಬಸನಗೌಡ ಪಾಟೀಲ್‌ ಯತ್ನಾಳ್‌

ನಮ್ಮ ದೇಶ, ಸನಾತನ ಧರ್ಮವನ್ನು ಉಳಿಸಲು ಮತ ಹಾಕಿ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮತದಾರರಲ್ಲಿ ಮನವಿ ಮಾಡಿಕೊಂಡರು

First Published May 7, 2024, 11:00 AM IST | Last Updated May 7, 2024, 11:00 AM IST

ಇಂದು ಉತ್ತರ ಕರ್ನಾಟಕದ 14 ಲೋಕಸಭಾ ಚುನಾವಣಾ(Lok Sabha elections 2024) ಮತದಾನ ನಡೆಯುತ್ತಿದೆ. ಬಹಳಷ್ಟು ಜನ ಉತ್ಸುಕತೆಯಿಂದ ಸಾಲಿನಲ್ಲಿ ನಿಂತು ಮತದಾನ(Voting) ಮಾಡುತ್ತಿದ್ದಾರೆ. ಮತ್ತೊಮ್ಮೆ ಪ್ರಧಾನಿ ಮೋದಿಯನ್ನ ಅಧಿಕಾರಕ್ಕೆ ತರಲು ಮತದಾನ ಮಾಡಿ. ನಮ್ಮ ದೇಶ, ಸನಾತನ ಧರ್ಮವನ್ನು(Sanātana Dharma) ಉಳಿಸಲು ಮತ ಹಾಕಿ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌(Basanagowda Patil Yatnal) ಮತದಾರರಲ್ಲಿ ಮನವಿ ಮಾಡಿಕೊಂಡರು. ಯಾವ ಬಿಸಿಲನ್ನೂ ಲೆಕ್ಕಿಸದೇ ಮತಹಾಕಿ. 14ರಲ್ಲಿ ನಾವು ಸುಮಾರು 13ರನ್ನು ಗೆಲ್ಲುತ್ತೇವೆ. ಗ್ಯಾರಂಟಿ ಕೊಟ್ಟಿದ್ದೇವೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಜನರಿಗೆ ಗೊತ್ತಿದೆ ಯಾವ ಪಕ್ಷಕ್ಕೆ ವೋಟ್‌ ಹಾಕಬೇಕು ಎಂದು ಶಾಸಕ  ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು.

ಇದನ್ನೂ ವೀಕ್ಷಿಸಿ:  Narendra Modi: ಮತದಾನ ನಮ್ಮ ಹಕ್ಕು, ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ,ಬಿಸಿಲಿನ ಬಗ್ಗೆ ಗಮನವಿರಲಿ: ಮೋದಿ