ನಾನು ರಾಹುಲ್ ಗಾಂಧಿ ಫ್ಯಾನ್ ಎಂದ ಸೆಂಚುರಿ ಸ್ಟಾರ್ ಶಿವರಾಜ್‌ ಕುಮಾರ್‌ !

ನಟ ಶಿವರಾಜ್‌ ಕುಮಾರ್‌ ಬಾಮೈದುನ ಮಧು ಬಂಗಾರಪ್ಪ ಪರ ಸೊರಬದಲ್ಲಿ ಪ್ರಚಾರ ಮಾಡಿದ್ದಾರೆ. ಅಲ್ಲದೇ ನಾನು ರಾಹುಲ್ ಗಾಂಧಿ ಅಭಿಮಾನಿ ಎಂದಿದ್ದಾರೆ.

Share this Video
  • FB
  • Linkdin
  • Whatsapp

ಕರುನಾಡ ಚಕ್ರವರ್ತಿ ಡಾಕ್ಟರ್ ಶಿವರಾಜ್ ಕುಮಾರ್ ಕೂಡ ಎಲೆಕ್ಷನ್ ಬ್ಯುಸಿಯಲ್ಲಿದ್ದಾರೆ. ಯಾರೂ ಊಹಿಸದ ಹಾಗೆ ಶಿವಣ್ಣ ಚುನಾವಣೆ ಕಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಶಿವಣ್ಣನ ಎಂಟ್ರಿಯಿಂದ ಕಾಂಗ್ರೆಸ್ ಪಾಳಯದಲ್ಲಿ ಹೊಸ ಎನರ್ಜಿ ಬಂದಿದೆ. ಯಾಕಂದ್ರೆ ನಾನು ರಾಹುಲ್ ಗಾಂಧಿ ದೊಡ್ಡ ಅಭಿಮಾನಿ ಅಂತ ಹೇಳೋ ಮೂಲಕ ಶಿವರಾಜ್ ಕುಮಾರ್ ಹೊಸ ಸಂಚಲನಕ್ಕೆ ಸಾಕ್ಷಿ ಆಗಿದ್ದಾರೆ. ಶಿವಣ್ಣ ತನ್ನ ಬಾಮೈದುನ ಮಧು ಬಂಗಾರಪ್ಪ ಪರ ಸೊರಬದಲ್ಲಿ ಪ್ರಚಾರ ಮಾಡಿದ್ದಾರೆ. ಸಾಗರದಲ್ಲಿ ಬೇಳೂರು ಗೋಪಾಲ ಕೃಷ್ಣ ಪರ, ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಪರ ಮತಯಾಚನೆ ಮಾಡಿದ್ದಾರೆ. ಅಷ್ಟೆ ಅಲ್ಲ ಕಾಂಗ್ರೆಸ್ ಸಮಾವೇಷದಲ್ಲೂ ಭಾಗಿ ಆಗಿದ್ದ ಶಿವಣ್ಣ ನಾನು ರಾಹುಲ್ ಗಾಂಧಿಗೆ ದೊಡ್ಡ ಅಭಿಮಾನಿ ಎಂದಿದ್ದಾರೆ. ಶಿವಣ್ಣನ ಈ ಮಾತು ಈಗ ರಾಜ್ಯ ವಿಧಾನಸಬೆ ಎಲೆಕ್ಷನ್ನಲ್ಲಿ ಭಾರಿ ಚರ್ಚೆ ಆಗುತ್ತಿದೆ. 

ಇದನ್ನೂ ವೀಕ್ಷಿಸಿ: ಮಂಡ್ಯದಲ್ಲಿ ಮತ್ತೆ ಶುರುವಾಯ್ತು ರಮ್ಯಾ ಚೈತ್ರ ಕಾಲ: ಎಲೆಕ್ಷನ್ ಟೆನ್ಷನ್ ಮಧ್ಯೆ ವರ ಹುಡುಕಾಟದಲ್ಲಿ ಪದ್ಮಾವತಿ !

Related Video