ಮಂಡ್ಯದಲ್ಲಿ ಮತ್ತೆ ಶುರುವಾಯ್ತು ರಮ್ಯಾ ಚೈತ್ರ ಕಾಲ: ಎಲೆಕ್ಷನ್ ಟೆನ್ಷನ್ ಮಧ್ಯೆ ವರ ಹುಡುಕಾಟದಲ್ಲಿ ಪದ್ಮಾವತಿ !
ಕೆಲ ವರ್ಷಗಳಿಂದ ರಮ್ಯಾ ರಾಜಕೀಯದಲ್ಲಿ ಅದ್ಯಾಕೋ ತಣ್ಣಗಾಗಿದ್ರು. ಈಗ ಪದ್ಮಾವತಿ ಮತ್ತೆ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣಾ ರಣಕಣ ರಂಗೇರುತ್ತಿದೆ. ಅಭ್ಯರ್ಥಿಗಳು ತಮ್ಮ ಎದುರಾಳಿಗಳ ವಿರುದ್ಧ ಗೆದ್ದು ಬೀಗಲು ರಣತಂತ್ರ ಹೆಣೆಯುತ್ತಿದ್ದಾರೆ. ಈ ಮಧ್ಯೆ ಇಷ್ಟು ದಿನ ರಾಜಕೀಯದಲ್ಲಿ ಕಳೆದು ಹೋಗಿದ್ದ ಸ್ಯಾಂಡಲ್‌ವುಡ್ ಪದ್ಮಾವತಿ ರಮ್ಯಾ ಮತ್ತೆ ಕಾಂಗ್ರೆಸ್‌ಗೆ ಕಲರ್ ಫುಲ್ ಜೋಶ್ ತುಂಬಿದ್ದಾರೆ. ರಮ್ಯಾ ಈ ಭಾರಿ ಸುಮ್ ಸುಮ್ಮನೇ ಬಂದಿಲ್ಲ. ಎಲೆಕ್ಷನ್ ಟೆನ್ಷನ್ ಮಧ್ಯೆ ನನಗೊಂದು ವರ ಸಿಕ್ತಾನಾ.? ಅದು ಗೌಡ್ರು ಹುಡುಗನೇ ಆಗಬೇಕು ಅಂತ ಹುಡುಕೋಕೆ ಬಂದಿದ್ದಾರೆ. ಇದನ್ನ ನಾವ್ ಹೇಳ್ತಿಲ್ಲ. ರಮ್ಯಾ ಮದುವೆ ಬಗ್ಗೆ ಮಾತನಾಡಿದ್ದನ್ನ ಕೇಳಿ ಅವರ ಫ್ಯಾನ್ಸ್ ಹೇಳ್ತಿರೋ ಮಾತಾಗಿದೆ. ನಿಮ್ಮ ಮದುವೆ ಯಾವಾಗ ಅಂತ.? ಫ್ಯಾನ್ಸ್ ರಮ್ಯಾ ಕೇಳಿದ್ದಾರೆ. ಅದಕ್ಕೆ ಉತ್ತರಸಿದ ರಮ್ಯಾ ನನಗೆ ಗಂಡು ಹುಡುಕಿ ಕೊಡಿ. ಗೌಡ್ರು ಹುಡುಗನೇ ಆಗ್ಬೇಕು ಅಂದಿದ್ದಾರೆ.
ಇದನ್ನೂ ವೀಕ್ಷಿಸಿ: ಜಾತಿ ಯಾವುದಯ್ಯ?: ಬಿಜೆಪಿ ಪರ ಪ್ರಚಾರಕ್ಕಿಳಿದ ಕಿಚ್ಚನಿಗೆ ಹೊಸ ಸವಾಲು!