Follow us on

  • liveTV
  • Avatara Purusha: ಹೊಸ ಅವತಾರದಲ್ಲಿ ಬಂದ ಅಧ್ಯಕ್ಷ ಶರಣ್!

    Govindaraj S  | Updated: May 7, 2022, 4:39 PM IST

    ಯುಗಾದಿ ಬಂದ್ರೆ ಎಲ್ಲರಿಗೂ ಹೊಸ ವರ್ಷ. ಸೂಪರ್ ಆಗಿದೆ ಅವತಾರ ಪುರುಷ. ಅನ್ನಕ್ಕೆ ಬೇಕು ಸಾರು, ಕಾಮಿಡಿ ಅಧ್ಯಕ್ಷ ಶರಣ್ (Sharan) ಅಂದ್ರೆ ಡ್ಯಾನ್ಸಿಂಗ್ ಸ್ಟಾರು. ಇವ್ನು ಕುಡಿತಾನೆ ಫ್ರ್ಯೂಟಿ ನಮ್ ಆಶಿಕಾ ರಂಗನಾಥ್ (Ashika Ranaganath) ವಾಟ್ ಎ ಬ್ಯೂಟಿ. ಯೆಸ್! ಎಷ್ಟೆಲ್ಲಾ ಕಾಂಪ್ಲಿಮೆಂಟ್ ಬರ್ತಿರೋದು ಯಾಕೆ ಗೊತ್ತಾ? ಒನ್ ಆ್ಯಂಡ್ ಓನ್ಲಿ 'ಅವತಾರ ಪುರುಷ' (Avatara Purusha) ಸಿನಿಮಾಗೆ. ಶರಣ್ ಹಾಗು ಆಶಿಕಾ ಕಾಂಬಿನೇಷನ್‌ನ ಅವತಾರ ಪುರುಷ ರಿಲೀಸ್ ಆಗಿದೆ. ಸಿನಿಮಾ ನೋಡಿದ ಪ್ರೇಕಕ್ಷನೊಬ್ಬ ಅವತಾರ ಪುರುಷವನ್ನ ತನ್ನದೇ ಸ್ಟೈಲ್‌ನಲ್ಲಿ ಕೊಂಡಾಡಿದ್ದಾರೆ. 

    ರಾಮೋಜಿ ಫಿಲ್ಮಂ ಸಿಟಿ Haunting ಜಾಗ, ಹಾರರ್‌ ದೃಶ್ಯಗಳನ್ನು ಬಿಚ್ಚಿಟ್ಟ ನಟ ಸಾಧು ಕೋಕಿಲ!

    ಶರಣ್‌ಗೆ ಕಾಮಿಡಿ ಅಧ್ಯಕ್ಷ ಅಂತ ಸುಮ್ ಸುಮ್ಮನೆ ಪಟ್ಟ ಕಟ್ಟಲ್ಲ. ಅಭಿನಯದಿಂದಲೇ ಹಾಸ್ಯಕ್ಕೆ ಹೊಸ ಟಚ್ ಕೊಟ್ಟ ಚಿತ್ರಮಂದಿರಕ್ಕೆ ಬರೋ ಮಂದಿಯನ್ನ ಮನರಂಜನೆಯಲ್ಲೇ ಮುಳುಗಿಸೋ ತಾಕತ್ತು ಶರಣ್‌ಗೆ ಇದೆ. ಶರಣ್ ಸಿನಿಮಾಗಳಲ್ಲಿ ಒಂದಷ್ಟು ತಮಾಷೆ, ತರಲೆ, ತುಂಟತನ ಇದ್ದೇ ಇರುತ್ತದೆ. ಅದು ಶರಣ್ ಸಿನಿಮಾಗಳ ಸಿಗ್ನೇಚರ್ ಸ್ಟೈಲ್. ಆದ್ರೆ 'ಅವತಾರ ಪುರುಷ' ಬೇರೆಯದೇ ಜಾನರ್‌ನ ಸಿನಿಮಾ. ಈ ಬಾರಿ ವಾಮಾಚಾರ, ಮಾಟ-ಮಂತ್ರ, ತ್ರಿಶಂಕು ಸ್ವರ್ಗ. ಇದೆಲ್ಲದರೊಂದಿಗೆ ಕಾಮಿಡಿ ಟಾನಿಕ್ ಅನ್ನು ಮಿಕ್ಸ್ ಮಾಡಿ ಕೊಟ್ಟಿದ್ದಾರೆ ಶರಣ್. ಇಂತಹ ವಿಭಿನ್ನ ಕಥೆಯನ್ನ ಕಟ್ಟಿಕೊಡೋದ್ರಲ್ಲಿ ನಿರ್ದೇಶಕ ಸಿಂಪಲ್ ಸುನಿ (Sipmle Suni) 100% ಪಾಸ್ ಆಗಿದ್ದಾರೆ ಅಂತ ಅವತಾರ ಪುರುಷ ಸಿನಿಮಾ‌ ನೋಡಿದವರು ಹೇಳ್ತಾರೆ.

    ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

    Read More

    Must See