Asianet Suvarna News Asianet Suvarna News

'ಕಸ್ತೂರಿ ಮಹಲ್‌'ನಲ್ಲಿ ದೆವ್ವವಾಗಿ ಹೆದರಿಸುತ್ತಿದ್ದಾರೆ ಕ್ಯೂಟಿ ಶಾನ್ವಿ ಶ್ರೀವತ್ಸವ್.!

ಸ್ಯಾಂಡಲ್‌ವುಡ್ (Sandalwood) ಮಾಸ್ಟರ್ ಪೀಸ್ ಬ್ಯೂಟಿ ಶಾನ್ವಿ ಶ್ರೀವತ್ಸವ್ (Shanvi Srivastva) ದೇಹದೊಳಗೆ ದೆವ್ವ ಸೇರಿಕೊಂಡಿ. ಚಿಕ್ಕ ಮಂಗಳೂರಿನ (Chikkamagaluru) ಕೊಟ್ಟಿಗೆಹಾರದಲ್ಲಿರೋ 200 ವರ್ಷದ ಹಳೆಯ ಮನೆಗೆ ಹೋದಾಗ ಸಾನ್ವಿಯನ್ನ ಪ್ರೇತಾತ್ಮ ಸೇರಿಕೊಂಡಿದೆ. ಆದ್ರೆ ಇದು ರಿಯಲ್ ಅಲ್ಲ ರೀಲ್ ಮೇಲೆ. 

ಸ್ಯಾಂಡಲ್‌ವುಡ್ (Sandalwood) ಮಾಸ್ಟರ್ ಪೀಸ್ ಬ್ಯೂಟಿ ಶಾನ್ವಿ ಶ್ರೀವತ್ಸವ್ (Shanvi Srivastva) ದೇಹದೊಳಗೆ ದೆವ್ವ ಸೇರಿಕೊಂಡಿ. ಚಿಕ್ಕ ಮಂಗಳೂರಿನ (Chikkamagaluru) ಕೊಟ್ಟಿಗೆಹಾರದಲ್ಲಿರೋ 200 ವರ್ಷದ ಹಳೆಯ ಮನೆಗೆ ಹೋದಾಗ ಸಾನ್ವಿಯನ್ನ ಪ್ರೇತಾತ್ಮ ಸೇರಿಕೊಂಡಿದೆ. ಆದ್ರೆ ಇದು ರಿಯಲ್ ಅಲ್ಲ ರೀಲ್ ಮೇಲೆ.

'ಶೋಕಿವಾಲಾ' ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್‌ಗೆ ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್! 

 ಈ ಹಿಂದೆ 'ಚಂದ್ರಲೇಖಾ' ಅನ್ನೋ ಹಾರರ್ ಸಿನಿಮಾದಲ್ಲಿ ನಟಿಸಿದ್ದ ಶಾನ್ವಿ ಶ್ರೀವ ಮತ್ತೊಮ್ಮೆ ಹಾರರ್ ಸಿನಿಮಾನಲ್ಲಿ ನಟಿಸಿದ್ದಾರೆ. ಅದೇ ಕಸ್ತೂರಿ ಮಹಲ್. ಇದೀಗ ಕಸ್ತೂರಿ ಮಹಲ್ ಸಿನಿಮಾ ಮೂಲಕ ದೆವ್ವವಾಗಿ ಮತ್ತೊಮ್ಮೆ ನಿಮ್ಮನ್ನ ಹೆಸರಿಸೋಕೆ ಬರುತ್ತಿದ್ದಾರೆ ಮಾಸ್ಟರ್ ಪೀಸ್ ಬ್ಯೂಟಿ ಶಾನ್ವಿ.

ಕಸ್ತೂರಿ ಮಹಲ್ ಸಿನಿಮಾ ಟೀಸರ್ ನೋಡಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಥ್ರಿಲ್ ಆಗಿದ್ರು. ಈ ಸಿನಿಮಾದ ಟೀಸರ್ಅನ್ನ ಅಪ್ಪು ಅವರೇ ಬಿಡುಗಡೆ ಮಾಡಿದ್ರು. ಈ ಸಿನಿಮಾ ಪ್ಯಾರಾನಾರ್ಮಲ್ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದೆ. ಹಾರರ್ ಸ್ಟೋರಿಯ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಎ ಪ್ರಮಾಣಪತ್ರ ನೀಡಿದೆ. ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್ ಅಲ್ಲದೆ  ಖ್ಯಾತ ಕಿರುತೆರೆ ಕಲಾವಿದ ಸ್ಕಂದ ಅಶೋಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರವೀಶ್ ಆರ್ಪಿ ಬಂಡವಾಳ ಹೂಡಿರೋ ಕಸ್ತೂರಿ ಮಹಲ್ ಸಿನಿಮಾ ಮೇ 13ರಂದು ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದೆ. 

ಬಂಗಾರದ ಮನುಷ್ಯನಿಗೆ ಸಂಗೀತ ಸ್ವರಾಭಿಷೇಕ: ಕಾರ್ಯಕ್ರಮದಿಂದ ಬಂದ ಹಣ ಶಕ್ತಿಧಾಮಕ್ಕೆ.!

ನಿರ್ದೇಶಕ ದಿನೇಶ್ ಬಾಬು ಸ್ಯಾಂಡಲ್ವುಡ್ನ ಹೆಸರಾಂತ ಡೈರೆಕ್ಟರ್.. ಇವ್ರ ಅಮೃತ ವರ್ಷಿಣಿ ಮತ್ತು ಸುಪ್ರಭಾತ ದಂತಹ ಸೂಪರ್ ಹಿಟ್ ಚಿತ್ರಗಳನ್ನ ಕನ್ನಡಕ್ಕೆ ಕೊಟ್ಟಿದ್ದಾರೆ. ಇದೀಗ 50ನೇ ಸಿನಿಮಾ ಕಸ್ತೂರಿ ಮಹಲ್ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಲು ದಿನೇಶ್ ಬಾಬು ಸಿದ್ಧರಾಗಿದ್ದಾರೆ. ಕಸ್ತೂರಿ ಮಹಲ್ ಸಿನಿಮಾವನ್ನ ಚಿಕ್ಕಮಗಳೂರು ಕೊಟ್ಟಿಗೆಹಾರದಲ್ಲಿ ಚಿತ್ರೀಕರಣ ಮಾಡಿದ್ದು, ಶ್ರುತಿ ಪ್ರಕಾಶ್, ವತ್ಸಲಾ ಮೋಹನ್, ರಂಗಾಯಣ ರಘು ಮತ್ತು ನೀನಾಸಂ ಅಶ್ವಥ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗುಮಿನೇನಿ ವಿಜಯ್ ಅವರ ಸಂಗೀತವಿರುವ ಕಸ್ತೂರಿ ಮಹಲ್‌ಗೆ ಪಿಕೆಎಚ್ ದಾಸ್ ಅವರ ಛಾಯಾಗ್ರಹಣವಿದ್ದು, ಮೇ 6ರಂದು ಸಿನಿಮಾ ತೆರೆ ಕಾಣುತ್ತಿದೆ.

Video Top Stories