ಬಂಗಾರದ ಮನುಷ್ಯನಿಗೆ ಸಂಗೀತ ಸ್ವರಾಭಿಷೇಕ: ಕಾರ್ಯಕ್ರಮದಿಂದ ಬಂದ ಹಣ ಶಕ್ತಿಧಾಮಕ್ಕೆ.!

ಏಪ್ರಿಲ್ 24 ರಂದು ಕರ್ನಾಟಕ ರತ್ನ ವರನಟ ಡಾ.ರಾಜ್‌ಕುಮಾರ್ (Dr Rajkumar) ಜನ್ಮದಿನವನ್ನು (Birthday) ಅವ್ರ ಅಭಿಮಾನಿಗಳು ಆಚರಿಸಿದರು. ಇದೀಗ ಅಣ್ಣಾವ್ರ ಹುಟ್ಟುಹಬ್ಬದ ಅಂಗವಾಗಿ ಟೀಮ್ ಆತ್ರೇಯ ವತಿಯಿಂದ ನಗರದ ಶ್ರೀ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ 'ಮೈ ನೇಮ್ ಈಸ್ ರಾಜ್ (My Name is Raj) ಎಂಬ ಸಂಗೀತ ಸಂಜೆ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. 
 
Share this Video
  • FB
  • Linkdin
  • Whatsapp

ಏಪ್ರಿಲ್ 24 ರಂದು ಕರ್ನಾಟಕ ರತ್ನ ವರನಟ ಡಾ.ರಾಜ್‌ಕುಮಾರ್ (Dr Rajkumar) ಜನ್ಮದಿನವನ್ನು (Birthday) ಅವ್ರ ಅಭಿಮಾನಿಗಳು ಆಚರಿಸಿದರು. ಇದೀಗ ಅಣ್ಣಾವ್ರ ಹುಟ್ಟುಹಬ್ಬದ ಅಂಗವಾಗಿ ಟೀಮ್ ಆತ್ರೇಯ ವತಿಯಿಂದ ನಗರದ ಶ್ರೀ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ 'ಮೈ ನೇಮ್ ಈಸ್ ರಾಜ್ (My Name is Raj) ಎಂಬ ಸಂಗೀತ ಸಂಜೆ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. 

ಮನೋಜವಂ ಆತ್ರೇಯ ಹಾಗೂ ತಂಡ ಸಂಗೀತ ಪ್ರೇಮಿಗಳಿಗೆ ರಾಜ್ ಹಾಡುಗಳ ಮೂಲಕ ರಸದೌತಣ ಬಡಿಸಿದ್ದು, ಡಾ. ರಾಜಕುಮಾರ್ ಅವರ ಆದರ್ಶಮಯ ವ್ಯಕ್ತಿತ್ವವನ್ನ ಸಂಗೀತದ ಮೂಲಕ ಸಾರಿದ್ರು. ಇದೇ ವೇಳೆ ನಮ್ಮನ್ನಗಲಿದ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್‌ಗೂ (Puneeth Rajkumar) ಸಹ ಗೀತನಮನವನ್ನ ಸಲ್ಲಿಸಲಾಯ್ತು. ಈ ಕಾರ್ಯಕ್ರಮದಲ್ಲಿ ಹಿರಿಯ ನಿರ್ದೇಶಕ ಎಸ್ ಕೆ ಭಗವಾನ್, ಡಾ. ಶ್ರೀ ಮುಮ್ಮಡಿ ಶಿವರುದ್ರ ಮಹಾಸ್ವಾಮಿಗಳು ಶ್ರೀ ಕ್ಷೇತ್ರ ಮರಳೆಗವಿ ಮಠ, ಹಾಸ್ಯ ಕಲಾವಿದ ಹಾಗೂ ನಿರ್ದೇಶಕ ಸಾಧುಕೋಕಿಲ, ಚಿಂತಕ ಚಕ್ರವರ್ತಿ ಸೂಲಿಬೆಲೆ, ಸಿಹಿಕಹಿ ಚಂದ್ರು, ಸೇರಿದಂತೆ ಹಲವರು ಭಾಗಿಯಾಗಿದ್ರು. ಈ ವೇಳೆ ಮಾತನಾಡಿದ ಮನೋಜವಂ ಆತ್ರೇಯ ಈ ಕಾರ್ಯಕ್ರಮದಲ್ಲಿ ಬಂದಂತಹ ಹಣವನ್ನ ಮೈಸೂರಿನ ಶಕ್ತಿಧಾಮ (Mysuru Shaktidama) ಬೆಂಗಳೂರಿನ ನವಚೇತನ ವಿದ್ಯಾಧಾಮ, ಮೈಸೂರಿನ ಮೃಗಾಲಯಕ್ಕೆ ನೀಡಲಿದ್ದೇವೆ ಅಂತ ತಿಳಿಸಿದ್ರು.

Related Video