Asianet Suvarna News Asianet Suvarna News
breaking news image

'ಶೋಕಿವಾಲಾ' ಫ್ಯಾಮಿಲಿ ಎಂಟರ್ಟೈನ್ಮೆಂಟ್ ಗೆ ಪ್ರೇಕ್ಷರಿಂದ ಫುಲ್ ಮಾರ್ಕ್ಸ್!

ಸ್ಯಾಂಡಲ್‌ವುಡ್  ಕೃಷ್ಣ ಅಜಯ್‌ ರಾವ್‌ ನಟನೆಯ ‘ಶೋಕಿವಾಲ’ (Shokiwala) ಸಿನಿಮಾ ಮೇಲೆ ಕನ್ನಡ ಸಿನಿ ಪ್ರೇಕ್ಷಕರಿಗೆ ಹೊಸ ನಿರೀಕ್ಷೆ ಹುಟ್ಟಿತ್ತು. ಯಾಕಂದ್ರೆ ಈ ಸಿನಿಮಾದ ಹಾಡುಗಳು ಹಾಗು ಟೀಸರ್ ಜನ ಮನ ಗೆದ್ದಿದ್ವು. 

ಸ್ಯಾಂಡಲ್‌ವುಡ್  ಕೃಷ್ಣ ಅಜಯ್‌ ರಾವ್‌ ನಟನೆಯ ‘ಶೋಕಿವಾಲ’ (Shokiwala) ಸಿನಿಮಾ ಮೇಲೆ ಕನ್ನಡ ಸಿನಿ ಪ್ರೇಕ್ಷಕರಿಗೆ ಹೊಸ ನಿರೀಕ್ಷೆ ಹುಟ್ಟಿತ್ತು. ಯಾಕಂದ್ರೆ ಈ ಸಿನಿಮಾದ ಹಾಡುಗಳು ಹಾಗು ಟೀಸರ್ ಜನ ಮನ ಗೆದ್ದಿದ್ವು. ಶೋಕಿವಾಲನಾಗಿ ಬರ್ತಿರೋ ಕೃಷ್ಣ ಅಜಯ್ ರಾವ್ (Ajay Rao) ಮತ್ತೊಮ್ಮೆ ಕಮಾಲ್ ಮಾಡ್ತಾರೆ ಅಂತ ಕನ್ನಡ ಸಿನಿ ಪ್ರೇಕ್ಷಕರು ನಂಬಿದ್ರು. ಈಗ ಅವ್ರ ನಂಬಿಕೆ ನಿಜ ಆಗಿದೆ. ಶೋಕಿವಾಲ ಸಿನಿಮಾ ಬಿಡುಗಡೆ ಆಗಿದ್ದು, ಚಿತ್ರ ಸೂಪರ್ ಆಗಿದೆ ಅಂತ ಸಿನಿಮಾ ನೋಡಿದವರು ಹೇಳ್ತಿದ್ದಾರೆ. 

ಬಂಗಾರದ ಮನುಷ್ಯನಿಗೆ ಸಂಗೀತ ಸ್ವರಾಭಿಷೇಕ: ಕಾರ್ಯಕ್ರಮದಿಂದ ಬಂದ ಹಣ ಶಕ್ತಿಧಾಮಕ್ಕೆ..!

ಕಾಮಿಡಿ ಎಂಟರ್ಟೈನರ್ ಸಿನಿಮಾದಲ್ಲಿ ಹಳ್ಳಿ ಹುಡುಗನಾಗಿ ಅಜಯ್ ರಾವ್ ಕಮಾಲ್ ಮಾಡಿದ್ದಾರೆ.. ಗೌಡರ ಮಗಳಾಗಿ ಪ್ರೀತಿಗಾಗಿ ಮನೆ ಬಿಟ್ಟು, ಕೃಷ್ಣನ ಹಿಂದೆ ಬರೋ ಹುಡುಗಿಯಾಗಿ ಸಂಜನಾ ಆನಂದ್ (Sanjana Anand) ಇಷ್ಟವಾಗ್ತಾರೆ.  ಕೃಷ್ಣನ ತಾಯಿ ತಾಯವ್ವ ಪಾತ್ರದಲ್ಲಿ ಅರುಣಾ ಬಾಲರಾಜ್ ಇಷ್ಟವಾಗ್ತಾರೆ.. ಊರಿನ ಗೌಡನಾಗಿ ಶರತ್ ಲೋಹಿತಾಶ್ವ ಅಬ್ಬರಿಸಿದ್ರೆ, ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ನಗಿಸ್ತಾರೆ.. ಒಟ್ಟಾರೆ ಪಕ್ಕಾ ಫ್ಯಾಮಿಲಿ ಎಂಟರ್ಟ್ರೈನರ್ ಸಿನಿಮಾ ಶೋಕಿವಾಲ. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್ ಸಿಕ್ಕಿದೆ.

ಈ ಹಿಂದೆ ಕೆಜಿಎಫ್ ಚಾಪ್ಟರ್ 1 ಚಿತ್ರಕ್ಕೆ ಅಸೋಸಿಯೆಟ್ ಆಗಿ ಕೆಲಸ ಮಾಡಿದ್ದ ಜಾಕಿ ಅನ್ನೋ ಹೊಸ ಪ್ರತಿಭೆ ಶೋಕಿವಾಲ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಮೊದಲ ಪ್ರಯತ್ನದಲ್ಲೇ ನಿರ್ದೇಶಕ ಜಾಕಿಗೆ ಜಾಕ್ಪಾಟ್ ಹೊಡೆದಿದೆ. ಗುಬ್ಬಿಮೇಲೆ ಭ್ರಹ್ಮಾಸ್ತ್ರದಂತಹ ಹಿಟ್ ಸಿನಿಮಾಗಳನ್ನ ಕನ್ನಡಕ್ಕೆ ಕೊಟ್ಟಿರೋ ಕ್ರಿಸ್ಟಲ್ ಪಾರ್ಕ್ ಪ್ರೊಡಕ್ಷನ್ ಚಂದ್ರಶೇಖರ್ ಶೋಕಿವಾಲ ಚಿತ್ರಕ್ಕೆ ಬಂಡವಾಳ ಹೂಡಿದ್ದು, ನಿರ್ಮಾಪಕ ಚಂದ್ರುಶೇಖರ್ ಮತ್ತೊಮ್ಮೆ ಬಾಕ್ಸಾಫೀಸ್ನಲ್ಲಿ ಸಕ್ಸಸ್ ಫುಲ್ ಜರ್ನಿ ಶುರುಮಾಡಿದ್ದಾರೆ. 

Video Top Stories