ವಯಸ್ಸು 72 ಆದ್ರೂ ಕಮ್ಮಿಯಾಗದ ರಜನಿಕಾಂತ್ ಚಾರ್ಮ್: ಸೂಪರ್ ಸ್ಟಾರ್ ಆರೋಗ್ಯದ ಗುಟ್ಟೇನು ?
ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಆರೋಗ್ಯದ ಗುಟ್ಟಿನ ಬಗ್ಗೆ ಮಾತನಾಡಿದ್ದು, ಒಂದು ಗಂಟೆ ವ್ಯಾಯಾಮಕ್ಕೆ ಮೀಸಲಿಡುತ್ತೇನೆ ಎಂದು ಹೇಳಿದ್ದಾರೆ.
ಖಡಕ್ ಡೈಲಾಗ್, ಮಾಸ್ ಎಂಟ್ರಿ, ಫೈಟಿಂಗ್ ಎಲ್ಲವನ್ನೂ ನೀರು ಕುಡಿದಷ್ಟು ಸುಲಭ ಅನ್ನೋ ಹಾಗೆ ಆ್ಯಕ್ಟಿಂಗ್ ಮಾಡಿದ ಒನ್ ಆ್ಯಂಡ್ ಒನ್ಲಿ ಸಿನಿಮಾ ಕಾ ಬಾಪ್.. ಸೂಪರ್ ಸ್ಟಾರ್ ರಜನಿಕಾಂತ್(Rajinikanth). ಭಾರತೀಯ ಸಿನಿಮಾ ಕಿಂಗ್ಡಮ್‌ನಲ್ಲಿ ಸೂಪರ್ ಸ್ಟಾರ್ ಕಿಂಗ್. ಯಾಕಂದ್ರೆ, ಇವರಿಗಿರೋ ಫ್ಯಾನ್ಸ್ ಮತ್ಯಾರಿಗೂ ಇಲ್ವೇನೊ.. ಅಷ್ಟರ ಮಟ್ಟಿಗೆ ಫ್ಯಾನ್ ಬೇಸ್ ಹೊಂದಿದ್ದಾರೆ. ರಜನಿಕಾಂತ್ ಇವರು 80ರ ದಶಕದಿಂದಲೂ ಅದೇ ಚಾರ್ಮನ್ನೇ ಇಂದಿಗೂ ಮೇಂಟೆನ್ ಮಾಡಿಕೊಂಡು ಬಂದಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸ್ಯಾಂಪಲ್ ಅಂದ್ರೆ ಜೈಲರ್(Jailer) ಸಿನಿಮಾ. ಎಸ್. ಜೈಲರ್ ಸಿನಿಮಾದಲ್ಲಿ ರಜನಿಕಾಂತ್ ಆ್ಯಕ್ಟಿಂಗ್ ನೋಡಿ ಅಭಿಮಾನಿಗಳು ಫುಲ್ ಫುದಾ ಆಗಿದ್ದಾರೆ. ಅದೆಷ್ಟರ ಮಟ್ಟಿಗೆ ಅಂದ್ರೆ, ಒಂದೇ ದಿನದಲ್ಲಿ ಜೈಲರ್ ಸಿನಿಮಾ 52 ಕೋಟಿಗಳಿಕೆ ಕಂಡಿದೆ. ಜೈಲರ್ ಚಿತ್ರದಲ್ಲಿ ಅವರನ್ನು ನೋಡಿ ಅಭಿಮಾನಿಗಳು ಸಹ ಶಾಕ್ ಆಗಿದ್ದು ನಿಜ. ಯಾಕಂದ್ರೆ 72 ವರ್ಷದ ರಜನಿ ನೋಡಲು ತುಂಬಾ ಯಂಗ್ ಆಗಿ ಕಾಣುತ್ತಾರೆ. ನೃತ್ಯ ಮತ್ತು ಫೈಟ್‌ಗಳನ್ನು ಸಹ ಯಂಗ್ ನಟರಂತೆ, ಲೀಲಾಜಾಲವಾಗಿ ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: ಜೈಲರ್ ಬಂದ್ರೂ ಜಗ್ಗದ ಕೌಸಲ್ಯಾ ಸುಪ್ರಜಾ ರಾಮ, ನಮೋ ಭೂತಾತ್ಮ2 !