ಅಯೋಗ್ಯ ಸಕ್ಸಸ್ ಜೋಡಿಯ ಮ್ಯಾಟ್ನಿ: ಸಂಜೆ ಮೇಲೆ ಸುಮ್ನೇ ಹಂಗೆ ಫೋನ್ ಮಾಡ್ಲಾ ಅಂತಿದ್ದಾರೆ ಸತೀಶ್
ಸತೀಶ್, ರಚಿತಾಗೆ ಸಂಜೆ ಮೇಲೆ ಫೋನ್ ಮಾಡ್ಲಾ ಎನ್ನುವ ಹಾಡು ಇದೀಗ ರಿಲೀಸ್ ಆಗಿದೆ. ಈ ಹಾಡನ್ನು ನೋಡಿರುವ ಸಿನಿರಸಿಕರು ಮುದ್ದಾಗಿದೆ ಜೋಡಿ ಅಂತಿದ್ದಾರೆ.
ಅಯೋಗ್ಯ ಹಿಟ್ ಜೋಡಿ ಮತ್ತೆ ಒಂದಾಗಿದೆ. ರಚಿತಾ ಸತೀಶ್ ನೀನಾಸಂ ಮತ್ತೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಯೆಸ್ ಮ್ಯಾಟ್ನಿ(Matinee) ಎನ್ನುವ ಹೊಸ ಚಿತ್ರದಲ್ಲಿ ಎರಡನೇ ಬಾರಿಗೆ ಈ ಜೋಡಿ ಒಂದಾಗಿದೆ. ಸಿನಿಮಾದ ಕಲರ್ ಫುಲ್ ಫೋಟೋ ಶೂಟ್ ಕೂಡ ಆಗಿದೆ. ಸತೀಶ್, ರಚಿತಾಗೆ ಸಂಜೆ ಮೇಲೆ ಫೋನ್ ಮಾಡ್ಲಾ ಅಂತಿದ್ದಾರೆ. ಈ ಹಾಡು (Song) ಇದೀಗ ರಿಲೀಸ್ ಆಗಿದ್ದು, ಮುದ್ದಾಗಿದೆ ಜೋಡಿ ಅಂತಿದ್ದಾರೆ ಸಿನಿರಸಿಕರು. ಸತೀಶ್ ರಚಿತಾ ( Rachita Ram) ಜೋಡಿಯ ಏನಮ್ಮಿ ಹಾಡು ಸಖತ್ ಹಿಟ್ಟಾಗಿತ್ತು. ಇದೀಗ ಮ್ಯಾಟ್ನಿ ಸಿನಿಮಾದ ಈ ಹೊಸ ಹಾಡು ರಿಲೀಸ್ ಆಗಿದೆ. ಈ ಕುರಿತು ಚಿತ್ರತಂಡ ಪ್ರೆಸ್ ಮೀಟ್ ಮಾಡಿ ಸಿನಿಮಾದ ಅಪ್ ಡೇಟ್ ನೀಡಿದೆ. ಮ್ಯಾಟ್ನಿ ಸಿನಿಮಾಗೆ ಮನೋಹರ್ ಕಂಪಳ್ಳಿ ನಿರ್ದೇಶನ ಮಾಡಿದ್ದು, ಸದ್ಯ ರಿಲೀಸ್ ಮಾಡಲಿರುವ ಹಾಡನ್ನು 15 ದಿನಗಳ ಕಾಲ ಅದ್ಧೂರಿ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿತ್ತು. ಈ ಹಾಡಿಗಾಗಿ ನಿನಾಸಂ ಸತೀಶ್ (Actor Satish Ninasam) ಅವರು ವರ್ಕೌಟ್ ಮಾಡಿ, ಫಿಟ್ ಅಂಡ್ ಫೈನ್ ಆಗಿ ಕಾಣಿಸಿಕೊಂಡಿದ್ದರೆ, ನಟಿ ರಚಿತಾ ರಾಮ್ ಸಿಂಗಲ್ ಪೀಸ್ ಮಿನಿ ಹಾಕಿಸ್ಕರ್ಟ್‌ನಲ್ಲಿ ಮಿಂಚಿದ್ದಾರೆ. ಡಾನ್ಸ್ ಮಾಸ್ಟರ್ ಸಂತೋಷ್ ಒಳ್ಳೆ ಕೋರಿಯೋಗ್ರಾಫಿನೇ ಮಾಡಿದ್ದಾರೆ. ಇಡೀ ಹಾಡಿನಲ್ಲಿ ಒಳ್ಳೆ ಫೀಲ್ ಇದೆ. ಅದಕ್ಕೂ ಹೆಚ್ಚಾಗಿ ಈ ಹಾಡಿನಲ್ಲಿ ಒಂದು ರೋಮ್ಯಾಂಟಿಕ್ ಫೀಲ್ ಇದೆ. ಅದನ್ನ ರಚಿತಾ ರಾಮ್ ಮತ್ತು ಸತೀಶ್ ನೀನಾಸಂ ಚೆನ್ನಾಗಿಯೇ ಕ್ಯಾರಿ ಮಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತದಲ್ಲಿ ಬಂದಿರೋ ಈ ಗೀತೆಯನ್ನ ವಿಜಯ್ ಪ್ರಕಾಶ್ ಅವರೇ ಹಾಡಿದ್ದಾರೆ.
ಇದನ್ನೂ ವೀಕ್ಷಿಸಿ: Today Horoscope: ಇಂದು ಮೀನಾ ರಾಶಿಯವರ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ.. ಪರಿಹಾರಕ್ಕೆ ಇದನ್ನ ಪರಿಸಿ