Today Horoscope: ಇಂದು ಮೀನಾ ರಾಶಿಯವರ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ.. ಪರಿಹಾರಕ್ಕೆ ಇದನ್ನ ಪರಿಸಿ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

First Published Aug 5, 2023, 10:01 AM IST | Last Updated Aug 5, 2023, 10:01 AM IST

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ, ಶನಿವಾರ, ಚತುರ್ಥಿ ತಿಥಿ, ಪೂರ್ವಾಭಾದ್ರ ನಕ್ಷತ್ರ.

ಈ ದಿನ ಶನಿವಾರ ಆಗಿರುವುದರಿಂದ ವಿಷ್ಣುವಿನ ಜೊತೆಗೆ ಆಂಜನೇಯನ ಆರಾಧನೆ ಮಾಡಿ. ಶನಿ ದೇವರ ಮಂದಿರಕ್ಕೆ ಹೋಗಿ ಎಳ್ಳು ಎಣ್ಣೆ ಸಮರ್ಪಣೆ ಮಾಡಿ. ಈ ದಿನ ಮೇಷ ರಾಶಿಯವರು ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ. ಹೊಟ್ಟೆ ಸಂಬಂಧಿ ತೊಂದರೆ ಉಂಟಾಗಲಿದೆ. ಇಂದು ಈಶ್ವರನ ಪ್ರಾರ್ಥನೆ ಮಾಡಿ. ಧನಸ್ಸು ರಾಶಿಯವರಿಗೆ ಇಂದು ವೃತ್ತಿಯಲ್ಲಿ ಅನುಕೂಲವಿದೆ. ನೀವು ಸಹ ಈಶ್ವರನ ಪ್ರಾರ್ಥನೆ ಮಾಡಿ. 

ಇದನ್ನೂ ವೀಕ್ಷಿಸಿ:  'ನಮೋ ಭೂತಾತ್ಮ 2'ಗೆ ಸ್ಯಾಂಡಲ್‌ವುಡ್‌ ನಟರ ಸಾಥ್‌: ಸಿನಿಮಾ ಬಗ್ಗೆ ಸೆಲೆಬ್ರೆಟಿಗಳು ಹೇಳಿದ್ದೇನು ?