ಹಳೇ ಸಂಜೂ ಹೊಸ ಗೀತಾ: ರೊಮ್ಯಾಂಟಿಕ್ ಮೂಡ್‌ನಲ್ಲಿ ಕಿಟ್ಟಿ- ರಚ್ಚು ಡಾನ್ಸ್ !

ಸ್ಟೇಜ್ ಮೇಲೆ ನಟಿ ರಚಿತಾ ರಾಮ್‌- ಕಿಟ್ಟಿ ಡಾನ್ಸ್
ಸಂಜು ವೆಡ್ಸ್ ಗೀತಾ 2 ಸಿನಿಮಾ ಮುಹೂರ್ತ ಹೇಗಿತ್ತು ?
ಸಿನಿಮಾದ ಟೀಸರ್‌ನಲ್ಲಿ ನಟಿ ರಮ್ಯಾ ವಾಯ್ಸ್ 
 

First Published Aug 17, 2023, 9:27 AM IST | Last Updated Aug 17, 2023, 9:28 AM IST

ಬಹು ನಿರೀಕ್ಷಿತ ಸಂಜು ವೆಡ್ಸ್ ಗೀತಾ 2 ಸಿನಿಮಾದ(Sanju Weds Geeta 2) ಮುಹೂರ್ತ ಕಾರ್ಯಕ್ರಮ ನಡೆದಿದೆ.  ಸಂಜು ವೆಡ್ಸ್  ಗೀತಾ 2 ಸಿನಿಮಾವನ್ನು ನಾಗಶೇಖರ್ ನಿರ್ದೇಶಿಸಿದ್ದು, ಶ್ರೀನಗರ ಕಿಟ್ಟಿ(srinagara kitty), ರಚಿತಾ ರಾಮ್ ಅಭಿನಯಿಸಿದ್ದಾರೆ. 12 ವರ್ಷಗಳ ನಂತ್ರ ಸಂಜು ವೆಡ್ಸ್ ಗೀತಾ ಸಿಕ್ವೇಲ್ ಮಾಡ್ತಿದ್ದಾರೆ ನಾಗಶೇಖರ್. ರಮ್ಯಾ ನಿಭಾಯಿಸಿದ್ದ  ಗೀತಾ ಪಾತ್ರದಲ್ಲಿ ರಚಿತಾ(rachita ram) ನಟಿಸುತ್ತಿರೋದು ಸಿನಿಮಾದ ವಿಶೇಷ. ಖಾಸಗಿ ಹೋಟೆಲ್‌ನಲ್ಲಿ ಅದ್ದೂರಿ ಕಾರ್ಯಕ್ರಮ ಮೂಲಕ ಚಿತ್ರಕ್ಕೆ ಚಿತ್ರತಂಡ ಚಾಲನೆ ಕೊಟ್ಟಿದೆ. ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು ಅಶ್ವಿನಿ ಪುನೀತ್ ರಾಜ್ ಕುಮಾರ್(Ashwini Puneeth Rajkumar). ಸಂಜು ವೆಡ್ಸ್ ಗೀತಾ 2 ಚಿತ್ರವನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಅರ್ಪಿಸಿದ್ದಾರೆ ನಿರ್ದೇಶಕ ನಾಗಶೇಖರ್. ಇದೇ ಸಂದರ್ಭದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಂಜು ವೆಡ್ಸ್ ಗೀತಾ 2 ಚಿತ್ರದ ಟೀಸರ್ ಲಾಂಚ್ ಮಾಡಿದ್ದಾರೆ. ಅಲ್ಲದೇ ಚಿತ್ರದ ಮೊದಲ ದೃಶ್ಯಕ್ಕೆ ಚಾಲನೆ ಕೊಟ್ಟಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್. ಇನ್ನು ಸ್ಟೇಜ್ ಮೇಲೆ ಸಿನಿಮಾದ ರೊಮ್ಯಾಂಟಿಕ್ ಹಾಡಿಗೆ ಕಿಟ್ಟಿ ರಚ್ಚು ಡಾನ್ಸ್ ಮಾಡಿದ್ದು, ಮುಹೂರ್ತಕ್ಕೆ ಇನ್ನಷ್ಟು ಕಳೆತಂದಿತ್ತು. 

ಇದನ್ನೂ ವೀಕ್ಷಿಸಿ:  Bheema Movie: ದೀಪಾವಳಿಗೆ ಬಿಡುಗಡೆಯಾಗುತ್ತಾ ದುನಿಯಾ ವಿಜಯ್‌ ಭೀಮ ಸಿನಿಮಾ ?