ಅಂದು ಆರೋಪಿ ಅನುಕುಮಾರ್ ತಂದೆ ಸಾವು..! ಈಗ ದರ್ಶನ್ ಗ್ಯಾಂಗ್ 4ನೇ ಆರೋಪಿ ತಾಯಿ ನಿಧನ!

ರೇಣುಕಾಸ್ವಾಮಿಯನ್ನ ಬರ್ಬರವಾಗಿ ಹತ್ಯೆ ಮಾಡಿದ ಆರೋಪಿ ಅನುಕುಮಾರ್ ತಂದೆ ಮಗನ ಸ್ಥಿತಿ ಕಂಡು ಹೃದಯಾಘಾತದಿಂದ  ಸಾವನಪ್ಪಿದ್ರು. ಈಗ ದರ್ಶನ್ ಗ್ಯಾಂಗ್‌ನ 4ನೇ ಆರೋಪಿ ರಾಘವೇಂದ್ರ ಅಲಿಯಾಸ್ ರಾಘು ತಾಯಿ ಮಂಜುಳಮ್ಮ ನಿಧನ ಹೊಂದಿದ್ದಾರೆ. 

Share this Video
  • FB
  • Linkdin
  • Whatsapp

ರಘು ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ದರ್ಶನ್ (Darshan) ಅಭಿಮಾನಿ ಸಂಘದ ಅಧ್ಯಕ್ಷನೂ ಆಗಿದ್ದ. ರೇಣುಕಾ ಸ್ವಾಮಿಯನ್ನು ಪತ್ತೆ(Renukaswamy murder case) ಹಚ್ಚಿ ಬೆಂಗಳೂರಿಗೆ(Bengaluru) ಕರೆತಂದಿದ್ದು ಇದೇ ರಘು. ಚಿತ್ರದುರ್ಗದ ಕೋಳಿಬುರುಜನಹಟ್ಟಿ ಮನೆಯಲ್ಲಿ ಮಂಜುಳಮ್ಮ ಮೃತಪಟ್ಟಿದ್ದಾರೆ. ಅಂತ್ಯಸಂಸ್ಕಾರಕ್ಕೆ ಪುತ್ರ ರಘುನನ್ನು ಕರೆತರಲು ಕುಟುಂಬಸ್ಥರ ಮನವಿ ಮಾಡಿಕೊಂಡಿದ್ದಾರೆ. ಆದ್ರೆ ಒಂದ್ ಕಡೆ ಆರೋಪಿಗಳ ಮನೆಯಲ್ಲಿ ಸಾವು ನೋವು ಸಂಬವಿಸುತ್ತಿದ್ರೆ, ಆರೋಪಿಗಳ ಮನೆಯವರನ್ನ ಬಲಿ ಕೊಡುತ್ತಿರೋದು ರೇಣುಕಾಸ್ವಾಮಿ ಆತ್ಮನಾ ಅನ್ನೋ ಚರ್ಚೆ ಕೂಡ ಎದ್ದಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಜೊತೆ ಯಾರೆಲ್ಲಾ ಅಂದರ್ ಆಗಿದ್ದಾರೋ ಅವರಲ್ಲಿ ವಿನಯ್ ಹಾಗೂ ಪ್ರದೋಶ್ ಮತ್ತು ಪವಿತ್ರಾ ಗೌಡನ(Pavitra gowda) ಹೊರತುಪಡಿಸಿದ್ರೆ ಮಿಕ್ಕೆಲ್ಲವರ ಸ್ಥಿತಿ ತುಂಬಾ ಕಷ್ಟದಲ್ಲಿದೆ. ಅವರಿಗೆ ಬೇಲ್ ಕೊಡಿಸೋಕು ಮನೆಯವರಿಂದ ಆಗುತ್ತಿಲ್ಲ. ದರ್ಶನ್ ಜೊತೆ ಸೇರಿಕೊಂಡು ಅಭಿಮಾನಕ್ಕೆ ಮಾಡಬಾರದ್ದ ಕೆಲಸ ಮಾಡಿದ ಮನೆ ಮಕ್ಕಳನ್ನ ಕಳೆದುಕೊಂಡು ಹಲವು ಕುಟುಂಬಗಳು ಬೀದಿ ಪಾಲಾಗಿದೆ. ಈಗ ದರ್ಶನ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ರಘು ತಾಯಿಯನ್ನ ಕಳೆದೊಂಡಿದ್ದಾನೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ:  ಕೋಡಿ ಶ್ರೀಗಳು ನುಡಿದ ಕಾಲಜ್ಞಾನ ಭವಿಷ್ಯ ನಿಜವಾಯ್ತಾ? ದೊಡ್ಡವರಿಗೆ ಸಂಕಷ್ಟ..ಅಧ್ಯಕ್ಷರ ಸಾವು ಖಚಿತ ಎಂದಿದ್ದ ಶ್ರೀ !

Related Video