Asianet Suvarna News Asianet Suvarna News

Sanju Weds Geetha 2: ಸಂಜು ವೆಡ್ಸ್ ಗೀತಾ2 ಸಿನಿಮಾದ ಶೂಟಿಂಗ್ ಕೆಲಸ ಪೂರ್ಣ! ಡಬ್ಬಿಂಗ್ ಆರಂಭ

ಸಂಜು ವೆಡ್ಸ್ ಗೀತಾ ಪಾರ್ಟ್ 2 ಸಿನಿಮಾ ಶೂಟಿಂಗ್‌ ಕಾರ್ಯ ಮುಗಿದಿದ್ದು, ಈ ಸಿನಿಮಾನದಲ್ಲಿ ಶ್ರೀನಗರ ಕಿಟ್ಟಿಗೆ ರಚಿತಾ ರಾಮ್ ಜೋಡಿಯಾಗಿದ್ದಾರೆ. ಹಾಗೆಯೇ ಈ ಸಿನಿಮಾದ ಡಬ್ಬಿಂಗ್ ಕೆಲಸ ಆರಂಭವಾಗಿದೆ. 

ಕನ್ನಡ ಚಿತ್ರರಂಗಕ್ಕೆ ಅದ್ಭುತ ಪ್ರೇಮಕಥೆಗಳನ್ನು ಕೊಟ್ಟ ನಿರ್ದೇಶಕ ನಾಗಶೇಖರ್ ಸಾರಥ್ಯದಲ್ಲಿ ಈಗ 'ಸಂಜು ವೆಡ್ಸ್ ಗೀತಾ ಪಾರ್ಟ್2'(sanju weds geetha 2) ಸಿನಿಮಾ ಸಿದ್ಧವಾಗುತ್ತಿದೆ.ಈ ಭಾರಿ ಸಂಜು ವೆಡ್ಸ್ ಗೀತಾ2 ಸಿನಿಮಾದಲ್ಲಿ ಶ್ರೀನಗರ ಕಿಟ್ಟಿಗೆ(Srinagara Kitty) ರಚಿತಾ ರಾಮ್(Rachita Ram) ಜೋಡಿಯಾಗಿದ್ದಾರೆ.ಈ ಸಿನಿಮಾದ ಶೂಟಿಂಗ್ ಮುಗಿದಿದ್ದು ಈಗ ಡಬ್ಬಿಂಗ್(Dubbing) ನಡೆಯುತ್ತಿದೆ. ಸಾಧು ಕೋಕಿಲ ಅವರ ಲೂಪ್ ಸ್ಟುಡಿಯೋದಲ್ಲಿ ಮಾತುಗಳ ಮರುಜೋಡಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ಸಂದರ್ಭದಲ್ಲಿ  ಮಾತನಾಡಿದ ನಿರ್ದೇಶಕ ನಾಗಶೇಖರ್  ನಮ್ಮ ಚಿತ್ರ ಅದ್ದೂರಿಯಾಗಿ ಮೂಡಿಬರಲು ನಿರ್ಮಾಪಕರ ಸಹಕಾರವೇ ಕಾರಣ. ಬೆಂಗಳೂರಿನಲ್ಲಿ ಮೊದಲಹಂತದ ಶೂಟಿಂಗ್ ಮುಗಿಸಿ,ನಂತರ ಸ್ವಿಟ್ಜರ್ ಲ್ಯಾಂಡ್ ನಲ್ಲಿ 15 ದಿನ ಹನ್ನೊಂದು ಲೊಕೇಶನ್ ಗಳಲ್ಲಿ  ಶೂಟ್ ಮಾಡಿಕೊಂಡು ಬಂದೆದ್ದೇವೆ ಎಂದಿದ್ದಾರೆ.ಈ ಸಿನಿಮಾಗೆ ನಿರ್ಮಾಪಕ ಛಲವಾದಿ ಕುಮಾರ್ ಬಂಡವಾಳ ಹೂಡಿದ್ದಾರೆ. ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ ವಿಶೇಷ ಪಾತ್ರಗಳಲ್ಲಿದ್ದಾರೆ.

ಇದನ್ನೂ ವೀಕ್ಷಿಸಿ:  Weekly-Horoscope: ಈ ರಾಶಿಯವರು ವಾರದ ಆದಿಯಲ್ಲಿ ಸಾಲದಿಂದ ಹೊರಬರುವಿರಿ, ಮಾನಸಿಕ ಖಿನ್ನತೆ ಕಾಡಲಿದೆ..

Video Top Stories