2023ರಲ್ಲಿ ಸದ್ದು ಮಾಡಿದ ಟಾಪ್ 10 ಸಿನಿಮಾಗಳು..! ಹೊಸಬರಿಗೆ ಬಹುಪರಾಕ್ ಎಂದ ಕನ್ನಡ ಪ್ರೇಕ್ಷಕ..!

ಇಡೀ ವಿಶ್ವವೇ ತನ್ನತ್ತ ನೋಡೋ ಹಾಗೆ ಮಾಡಿದ್ದು ಸ್ಯಾಂಡಲ್‌ವುಡ್. ಕಳೆದ ಐದಾರು ವರ್ಷಗಳಿಂದ ಕನ್ನಡದಲ್ಲಿ ರಿಲೀಸ್ ಆಗ್ತಿರೋ ಸಿನಿಮಾಗಳು ಒಂದಕ್ಕಿಂತ ಒಂದು ಹಿಸ್ಟರಿ ಕ್ರಿಯೇಟ್ ಮಾಡ್ತಿವೆ. ಇನ್ನೊಂದು ಆಶ್ಚರ್ಯ ಆಗೋದು ಏನ್ ಅಂದ್ರೆ. ಕೊರೊನಾ ಬಂದು ಹೋದ ಮೇಲೆ ಬಾಲಿವುಡ್, ಕಾಲಿವುಡ್, ಟಾಲಿವುಡ್ ಸಂಪೂರ್ಣವಾಗಿ ನೆಲಕ್ಕಚ್ಚಿತ್ತು. ಆದ್ರೆ ಸ್ಯಾಂಡಲ್‌ವುಡ್ ಮಾತ್ರ ತಲೆ ಎತ್ತಿ ನಿಂತಿತ್ತು. 

First Published Dec 22, 2023, 9:48 AM IST | Last Updated Dec 22, 2023, 9:48 AM IST

ಡಾರ್ಲಿಂಗ್ ಕೃಷ್ಣ(Darling Krishna) ಅಭಿನಯದ ಈ ಚಿತ್ರ ಹೆಚ್ಚು ಗಮನ ಸೆಳೆದಿದೆ. ಡೈರೆಕ್ಟರ್ ಶಶಾಂಕ್ ಈ ಚಿತ್ರದಲ್ಲಿ ಒಳ್ಳೆ ಕಥೆ ಹೇಳಿದ್ದರು. ನಟಿ ಬೃಂದಾ ಆಚಾರ್ ನಟನೆ ಕೂಡ ಇಲ್ಲಿ ಹೆಚ್ಚು ಇಷ್ಟ ಆಗಿತ್ತು. ಮಿಲನ ನಾಗರಾಜ್(Milan Nagaraj) ಅವರ ಪಾತ್ರವೂ ಇಲ್ಲಿ ಸರ್ಪ್ರೈಸ್ ಎಲಿಮೆಂಟ್ ಆಗಿತ್ತು. ಆದರೆ ಇಡೀ ಸಿನಿಮಾದಲ್ಲಿ ಈ ಪಾತ್ರಕ್ಕೆ ಭಾರೀ ತೂಕ ಇತ್ತು ಬಿಡಿ. ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಬಿ ಎರಡೂ ಸಿನಿಮಾಗಳು ಅಬ್ಬರಿಸಿವೆ. ಎರಡೂ ಚಿತ್ರಗಳ ಕಂಟೆಂಟ್ ಬೇಸ್ ಸಿನಿಮಾ ಆಗಿದದ್ದರೂ ಸ್ಟಾರ್ ವ್ಯಾಲ್ಯೂ ಇತ್ತು. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Rakshit Shetty) ಈ ಚಿತ್ರದಲ್ಲಿದ್ದರು. ನವ ನಟಿಯರಾದ ರುಕ್ಮಿಣಿ ವಸಂತ್ ಮತ್ತು ಚೈತ್ರಾ ಆಚಾರ್ ಇದೇ ಚಿತ್ರದಲ್ಲಿಯೇ ಹೆಚ್ಚು ಗಮನ ಸೆಳೆದರು. ಈ ಸಿನಿಮಾಗಳ ಪಟ್ಟಿಯಲ್ಲಿ ಹೊಸಬರೂ ಇದ್ದಾರೆ. ಹಳಬರ ಚಿತ್ರವೂ ಇದೆ. ಡೇರ್ ಡೆವಿಲ್ ಮುಸ್ತಾಫಾ(Daredevil Musthafa) ಚಿತ್ರ ವಿಶೇಷವಾಗಿಯೇ ಇತ್ತು. 2023 ರ ಮೊದಲ ಹಿಟ್ ಸಿನಿಮಾ ಅನ್ನುವ ಟಾಕ್ ಕೂಡ ಕೇಳಿ ಬಂತ್ತು. ಪುನೀತ್ ನಿರ್ಮಾಣದ ಆಚಾರ್ ಆ್ಯಂಡ್ ಕೋ ವಿಶೇಷ ಕಂಟೆಂಟ್‌ನ ಚಿತ್ರವೇ ಆಗಿತ್ತು. ಟಗರು ಪಲ್ಯ ಸ್ಪೆಷಲ್ ಆಗಿಯೇ ಇತ್ತು. ಡಾಲಿ ನಿರ್ಮಾಣದ ಈ ಚಿತ್ರ ಒಳ್ಳೆ ಕಂಟೆಂಟ್ ಎಂದು ಕರೆಸಿಕೊಂಡಿತ್ತು. ಸ್ಪೆಷಲ್ ಟೈಟಲ್ನೊಂದಿಗೆ ರಿಲೀಸ್ ಆದ ಸಿನಿಮಾ ಅಂದ್ರೆ ಅದು ಟಗರುಪಲ್ಯ, ಡಾಲಿ ಧನಂಜಯ್ ನಿರ್ಮಾಣ. ಉಮೇಶ್ ಕೆ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಸಿನಿಮಾ ಹಿಟ್ ಆಗಿತ್ತು. ಇಷ್ಟೆ ಅಲ್ಲದೇ ಹೊಸಬರು ಸೇರಿ ಮಾಡಿದ್ದ ಸಿನಿಮಾ ಕ್ಷೇತ್ರಪತಿ ಕೂಡ ಹಿಟ್ ಆಗಿ, ಪ್ರೇಕ್ಷಕರನ್ನ ರಂಜಿಸಿತ್ತು. ಇದೇ ರೀತಿ ಭಾರತದಲ್ಲಿ ತೆರೆ ಕಂಡ ಟಾಪ್ ಸಿನಿಮಾಗಳೆಂದರೇ, ಜವಾನ್‌,ಪಠಾಣ್, ಗದರ್ 2,ಲಿಯೋ ,ಜೈಲರ್, ಅನಿಮಲ್, ಟೈಗರ್ ಸಿನಿಮಾ. ಈ ಎಲ್ಲಾ ಸಿನಿಮಾಗಳು ಸಿನಿ ಪ್ರೇಕ್ಷಕರನ್ನ ಮನರಂಜಿಸಿ, ಕೋಟಿ ಕೋಟಿಗಳಿಸಿದ್ದವು.

ಇದನ್ನೂ ವೀಕ್ಷಿಸಿ:  ಕಾಂತರ ಪ್ರೀಕ್ವೆಲ್‌ಗೆ ಭಾರಿ ಡಿಮ್ಯಾಂಡ್..! ರಿಷಬ್ ಜೊತೆ ನಟಿಸೋಕೆ ನುಗ್ಗಿ ಬಂದ 25000 ಜನ..!