ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !

ಮಾರ್ಕ್ ಮೂವಿಯ ಫಸ್ಟ್ ಟೀಸರ್ ರಿಲೀಸ್ ಆಗಿದ್ದು, ಟೀಸರ್ ತುಂಬಾ ಆಕ್ಷನ್ ಧಮಾಕಾ ಇದೆ. ಜೊತೆಗೆ ಕಿಚ್ಚ ರಗಡ್ ಅವತಾರ ಇದೆ. ಮ್ಯಾಕ್ಸ್ ಡೈರೆಕ್ಟ್ ಮಾಡಿದ್ದ ವಿಜಯ್ ಕಾರ್ತಿಕೇಯನ್ ಡೈರೆಕ್ಟ್ ಮಾಡ್ತಾ ಇರೋ ಸಿನಿಮಾ ಇದು. ಮ್ಯಾಕ್ಸ್ ನಂತೆಯೇ ಇಲ್ಲೂ ಕಿಚ್ಚ ಖಡಕ್ ಪೊಲೀಸ್ ಆಫೀಸರ್.

Share this Video
  • FB
  • Linkdin
  • Whatsapp

ಕಿಚ್ಚ ಸುದೀಪ್ ನಟನೆಯ ಮಾರ್ಕ್ ಮೂವಿ ಕ್ರಿಸ್​ಮಸ್​ ತೆರೆಗೆ ಬರೋದು ಫಿಕ್ಸ್ ಆಗಿದೆ. ಸೋ ಸಿನಿಮಾದ ಕೆಲಸಗಳು ಎಕ್ಸ್​ಪ್ರೆಸ್ ವೇಗದಲ್ಲಿ ನಡೀತಾ ಇವೆ. ಸದ್ಯ ಮಾರ್ಕ್ ಟೀಸರ್ ರಿಲೀಸ್ ಆಗಿದ್ದು,. ಅಜಯ್ ಮಾರ್ಕಾಂಡೆಯ್ ಹೇಗಿರ್ತಾನೆ ಅನ್ನೋದ್ರ ಝಲಕ್ ರಿವೀಲ್ ಆಗಿದೆ.

ಅಜಯ್ ಮಾರ್ಕಾಂಡೇಯ ಮಾಸ್ ಇಂಟ್ರೋ..!
ಯೆಸ್ ಅಜಯ್ ಮಾರ್ಕಾಂಡೇಯ ಅಲಿಯಾಸ್ ಮಾರ್ಕ್ ,ನಾನು ಕ್ರಿಸ್ ಮಸ್​ಗೆ ಬರ್ತಿನಿ ಡೇಟ್ ಮಾರ್ಕ್ ಮಾಡಿಕೊಳ್ಳಿ ಅಂದಿದ್ದಾನೆ. ಅರೇ ಇನ್ನು ಕೆಲವೇ ವಾರ ಉಳಿತಲ್ಲಾ ಮಾರ್ಕ್ ಬರ್ತಾನಾ ಅಂತ ಕೇಳ್ತಿದ್ದವರಿಗೆ ಟೀಸರ್ ಮೂಲಕ ಬಂದೇ ಬರ್ತೀನಿ ಅನ್ನೋ ಸಂದೇಶ ಕೊಟ್ಟಿದ್ದಾನೆ ಮಾರ್ಕ್.

ಮಾರ್ಕ್ ಮೂವಿಯ ಫಸ್ಟ್ ಟೀಸರ್ ರಿಲೀಸ್ ಆಗಿದ್ದು, ಟೀಸರ್ ತುಂಬಾ ಆಕ್ಷನ್ ಧಮಾಕಾ ಇದೆ. ಜೊತೆಗೆ ಕಿಚ್ಚ ರಗಡ್ ಅವತಾರ ಇದೆ. ಮ್ಯಾಕ್ಸ್ ಡೈರೆಕ್ಟ್ ಮಾಡಿದ್ದ ವಿಜಯ್ ಕಾರ್ತಿಕೇಯನ್ ಡೈರೆಕ್ಟ್ ಮಾಡ್ತಾ ಇರೋ ಸಿನಿಮಾ ಇದು. ಮ್ಯಾಕ್ಸ್ ನಂತೆಯೇ ಇಲ್ಲೂ ಕಿಚ್ಚ ಖಡಕ್ ಪೊಲೀಸ್ ಆಫೀಸರ್.

ಸತ್ಯ ಜ್ಯೋತಿ ಫಿಲಂಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಅದ್ಧೂರಿಯಾಗಿ ಮಾರ್ಕ್ ಚಿತ್ರವನ್ನ ನಿರ್ಮಿಸ್ತಾ ಇವೆ. ಶೇಖರ್ ಚಂದ್ರ ಸಿನಿಮಾಟೋಗ್ರಫಿಯಲ್ಲಿನ ದೃಶ್ಯಗಳು, ಜೊತೆಗೆ ಅಜನೀಶ್ ಬ್ಯಾಗ್ರೌಂಡ್ ಮ್ಯೂಸಿಕ್ ಸೇರಿ ಸಖತ್ ಥ್ರಿಲ್ ಕೊಡ್ತಾ ಇವೆ.

ಕಿಚ್ಚನ ಜೊತೆಗೆ ಸಿನಿಮಾದಲ್ಲಿ ದೊಡ್ಡ ತಾರಾಬಳಗ ಇದೆ. ಡ್ರಾಗನ್ ಮಂಜು, ರೋಷನಿ, ಮಹಾಂತೇಶ್ ಹಿರೇಮಠ ಮುಂತಾದವರು ಟೀಸರ್​​​ನಲ್ಲಿ ಹೈಲೈಟ್ ಆಗಿದ್ದಾರೆ. ಪಂಚಭಾಷೆಗಳಲ್ಲಿ ಬಂದಿರೋ ಮಾರ್ಕ್ ಟೀಸರ್ ಸದ್ಯ ಟ್ರೆಂಡಿಂಗ್​ನಲ್ಲಿದೆ. ಕಿಚ್ಚನ ಮಾರ್ಕ್ ಅವತಾರ ನೋಡಿದವರು ಇದ್ರಲ್ಲೊಂದು ಸ್ಪಾರ್ಕ್ ಇದೆ ಅಂತಿದ್ದಾರೆ.

Related Video