ಇಲ್ಲಿ ನರಕ ಚತುರ್ದಶಿ, ಅಲ್ಲಿ ನರಕ ದರ್ಶನ; ಜೈಲಿನ ಕತ್ತಲ ಕೊಣೆಯಲ್ಲೇ ದರ್ಶನ್ ದೀಪಾವಳಿ

ಕಳೆದ ವರ್ಷ ದೀಪಾವಳಿ ಹೊತ್ತಲ್ಲಿ ದರ್ಶನ್​ಗೆ ಬೇಲ್ ಮಂಜೂರಾಗಿತ್ತು. ಆರು ತಿಂಗಳ ಜೈಲುವಾಸದ ಬಳಿಕ ಬೇಲ್ ಸಿಕ್ಕು ಮನೆಮಂದಿ ಜೊತೆಗೆ ಹಬ್ಬ ಸೆಲೆಬ್ರೇಟ್ ಮಾಡುವ ಅವಕಾಶ ಸಿಕ್ಕಿತ್ತು. ಆದ್ರೆ ಈ ಸಾರಿ ಮಾತ್ರ ದರ್ಶನ್‌ಗೆ ದೀಪವೂ ಇಲ್ಲ, ಬೆಳಕೂ ಇಲ್ಲ..  ಪರಪ್ಪನ ಅಗ್ರಹಾರದ ಜೈಲಿನ ಕತ್ತಲ ಕೋಣೆಯಲ್ಲೇ ದೀಪಾವಳಿ.

Share this Video
  • FB
  • Linkdin
  • Whatsapp

ಬೆಳಕೂ ಇಲ್ಲ.. ಪಟಾಕಿನೂ ಇಲ್ಲ.. ಕತ್ತಲ ಕೊಣೇಲಿ ದಾಸನ ದೀಪಾವಳಿ..!,, ಕಳೆದ ದೀಪಾವಳಿಗೆ ಬೇಲ್ ಭಾಗ್ಯ.. ಈ ಸಾರಿಯಿಲ್ಲ ಎಣ್ಣೆಸ್ನಾನ..!,, ಮನೆಯಲ್ಲಿ ಹಬ್ಬದ ಸಂಭ್ರಮವಿಲ್ಲ.. ಮನೆಮಂದಿಗೆ ನೆಮ್ಮದಿಯಿಲ್ಲ..!,, ದರ್ಶನ್ ಸಿಟ್ಟಿಗೆ.. ಮಾಡಿದ ಎಡವಟ್ಟಿಗೆ.. ಆರಿದ್ದು ಎಷ್ಟು ಮನೆಯ ದೀಪ..?,, ಇದೇ ಈ ಹೊತ್ತಿನ ವಿಶೇಷ.. ದಾಸನ ದೀಪಾವಳಿ

ಕಳೆದ ವರ್ಷ ದೀಪಾವಳಿ ಹೊತ್ತಲ್ಲಿ ದರ್ಶನ್​ಗೆ ಬೇಲ್ ಮಂಜೂರಾಗಿತ್ತು. ಆರು ತಿಂಗಳ ಜೈಲುವಾಸದ ಬಳಿಕ ಬೇಲ್ ಸಿಕ್ಕು ಮನೆಮಂದಿ ಜೊತೆಗೆ ಹಬ್ಬ ಸೆಲೆಬ್ರೇಟ್ ಮಾಡುವ ಅವಕಾಶ ಸಿಕ್ಕಿತ್ತು. ಆದ್ರೆ ಈ ಸಾರಿ ಮಾತ್ರ ದಾಸನಿಗೆ ಬೆಳಕೂ ಇಲ್ಲ.. ದರ್ಶನವೂ ಇಲ್ಲ. ಪರಪ್ಪನ ಅಗ್ರಹಾರದ ಜೈಲಿನ ಕತ್ತಲ ಕೋಣೆಯಲ್ಲೇ ದೀಪಾವಳಿ ಸೆಲೆಬ್ರೇಟ್ ಮಾಡಬೇಕಾಗಿ ಬಂದಿದೆ. ಬರೀ ದರ್ಶನ್ ಗೆ ಮಾತ್ರ ಅಲ್ಲ. ಇಡೀ ಡಿ ಗ್ಯಾಂಗ್ ಗೆ ಜೈಲಲ್ಲೇ ದೀಪಾವಳಿ. ಇತ್ತ ಅವರ ಮನೆಯಲ್ಲೂ ಹಬ್ಬವಿಲ್ಲ.. ಮನೆಮಂದಿಗೂ ನೆಮ್ಮದಿ ಇಲ್ಲ. ದಾಸನ ಎಡವಟ್ಟಿಗೆ ಅದೆಷ್ಟೋ ಮನೆಗಳು ದೀಪದ ಹಬ್ಬದಲ್ಲೂ ಕತ್ತಲಲ್ಲಿ ಮುಳುಗಿವೆ.

ಅಷ್ಟಕ್ಕೂ ಈ ಬಾರಿ ಜೈಲಿನಲ್ಲಿ ಈ ಪರಿಯ ಕಟ್ಟುನಿಟ್ಟಿನಿಂದ ದರ್ಶನ್ ಮೇಲೆ ನಿಗಾ ಇರಿಸೋದಕ್ಕೆ ಕಾರಣ, ಖುದ್ದು ದಾಸ ಮಾಡಿಕೊಂಡ ಎಡವಟ್ಟು. ಕಳೆದ ಬಾರಿ ಜೈಲಿನಲ್ಲಿದ್ದಾಗ ಎಲ್ಲಾ ಕೈದಿಗಳಂತೆ ಇದ್ದುಬಿಟ್ಟಿದ್ರೆ , ಈ ಬಾರಿ ಕತ್ತಲ ಕೋಣೆ ಸೇರುವ ಪ್ರಮೇಯ ದರ್ಶನ್ ಗೆ ಬರ್ತಾ ಇರಲಿಲ್ಲ. ಕತ್ತಲ ಕೋಣೆಯಲ್ಲೇ ದೀಪಾವಳಿ ಆಚರಿಸುವ ಸ್ಥಿತಿ ಬರ್ತಾ ಇರಲಿಲ್ಲ.

ಪ್ರತಿವರ್ಷ ದೀಪಾವಳಿಗೆ ಫ್ಯಾನ್ಸ್​ಗೆ ವಿಶ್ ಮಾಡಿ ಸಿನಿಮಾದ ಅಪ್​ಡೇಟ್ ಕೊಡ್ತಾ ಇದ್ದ ದರ್ಶನ್​, ಈ ಸಾರಿ ಖುದ್ದು ತನ್ನ ಸಿನಿಮಾದ ಅಪ್​ಡೇಟ್​​ನ ತಾನೇ ಬೇರೆಯವರ ಬಳಿ ಕೇಳುವ ಸ್ಥಿತಿ ಬಂದಿದೆ. ದಾಸನ ಅನುಪಸ್ಥಿತಿಯಲ್ಲೇ ದಿ ಡೆವಿಲ್ ಸಿನಿಮಾ ತೆರೆಗೆ ಬರಲಿದೆ. 
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

Related Video