ಅಂತೆ ಕಂತೆ ಅಲ್ಲ, ದುರಂತ ನಾಯಕ ಆಗ್ಬಿಟ್ರಾ ದರ್ಶನ್? ಇಳಿದ ತೂಕ.. ಕಳಾಹೀನ ಮುಖ..!

ಜೈಲಿನ ವಾತಾವರಣ ಹೊಂದದೇ 10 ಕೆಜಿಯಷ್ಟು ತೂಕ ಕಳೆದುಕೊಂಡಿರೋ ದರ್ಶನ್ ಲುಕ್ ಗುರುತೇ ಸಿಗದಷ್ಟು ಪದಲಾಗಿದೆ. ಕೋರ್ಟ್ ನಲ್ಲಿ ಬೆಂಚ್ ಮೇಲೆ ಕುಳಿತ ದರ್ಶನ್ ಫೋಟೊವಂತೂ ಶಾಕಿಂಗ್ ಆಗಿದೆ. ಮುಂದೇನು ಗತಿ?

Share this Video
  • FB
  • Linkdin
  • Whatsapp

ಬರೊಬ್ಬರಿ ಎರಡೂವರೇ ತಿಂಗಳ ಬಳಿಕ ಜೈಲಿಂದ ಹೊರಬಂದು, ಕೋರ್ಟ್ ಅಟೆಂಡ್ ಮಾಡಿರೋ ದರ್ಶನ್ (Darshan Thoogudeepa), ಮೇಲೆ ಚಾರ್ಜ್​ಫ್ರೇಮ್ ಮಾಡಲಾಗಿದೆ. ಕೋರ್ಟ್​ಗೆ ಬಂದ ಸ್ಟಾರ್ ನಟ ದರ್ಶನ್ ಅವತಾರ ನೋಡಿದವರು ಶಾಕ್ ಆಗಿದ್ದಾರೆ. 10 ಕೆಜಿಯಷ್ಟು ತೂಕ ಕಳೆದುಕೊಂಡಿರೋ ದರ್ಶನ್ ಮುಖ ಕಳಾಹೀನವಾಗಿದೆ. ನೋಡಲಿಕ್ಕೆ ಆಗದಷ್ಟು ಕೃಶವಾಗಿರೋ ದರ್ಶನ್​ನ ನೋಡ್ತಾ ಇದ್ರೆ, ಈತನನ್ನ ದುರಂತ ನಾಯಕ ಅನ್ನದೇ ವಿಧಿಯಿಲ್ಲ.

ಎರಡೂವರೇ ತಿಂಗಳ ಬಳಿಕ ಹೊರಜಗತ್ತಿನ ದರ್ಶನ..!

ಸುಪ್ರೀಂ ಕೋರ್ಟ್ ಬೇಲ್ ರದ್ದು ಮಾಡಿದ ಎರಡೂವರೇ ತಿಂಗಳ ಬಳಿಕ ದರ್ಶನ್​ಗೆ ಹೊರಜಗತ್ತಿನ ದರ್ಶನವಾಗಿದೆ. ಸೋಮವಾರ 64ನೇ ಸಿಸಿಎಚ್ ಕೋರ್ಟ್​ಗೆ ಬಂದ ದಾಸನ ಅವತಾರ ಕಂಡು ಫ್ಯಾನ್ಸ್ ಶಾಕ್ ಆಗಿದ್ದಾರೆ.

ಜೈಲಿನ ವಾತಾವರಣ ಹೊಂದದೇ 10 ಕೆಜಿಯಷ್ಟು ತೂಕ ಕಳೆದುಕೊಂಡಿರೋ ದರ್ಶನ್ ಲುಕ್ ಗುರುತೇ ಸಿಗದಷ್ಟು ಪದಲಾಗಿದೆ. ಕೋರ್ಟ್ ನಲ್ಲಿ ಬೆಂಚ್ ಮೇಲೆ ಕುಳಿತ ದರ್ಶನ್ ಫೋಟೊವಂತೂ ಶಾಕಿಂಗ್ ಆಗಿದೆ.

ಮುಖ ಬಾಡಿದೆ.. ಕಣ್ಣುಗಳಲ್ಲಿ ಕಾಂತಿಯಿಲ್ಲ.. ಗಲ್ಲ ಒಳಗೆ ಹೋಗಿದೆ. ನೆರೆತ ಕೂದುಲು.. ಗಡ್ಡ.. ಅರೇ ಇದು ಕನ್ನಡ ಚಿತ್ರರಂಗದಲ್ಲಿ ಚಕ್ರವರ್ತಿಯಂತೆ ಮೆರೆದ ದಾಸನಾ ಅಂತ ಫ್ಯಾನ್ಸ್ ಕನ್​ಫ್ಯೂಸ್ ಆಗಬೇಕು ಹಾಗಿದೆ ದರ್ಶನ್ ಅವತಾರ.

ಅಸಲಿಗೆ ಜೈಲು ಎಂಥವರನ್ನೂ ಜರ್ಜರಿತರನ್ನಾಗಿ ಮಾಡಿಬಿಡುತ್ತೆ. ಮಾನಸಿಕವಾಗಿ ದೈಹಿಕವಾಗಿ ಕುಗ್ಗಿಸಿಬಿಡುತ್ತೆ. ದರ್ಶನ್​ ರೀತಿ ಹೊರಗಡೆ ಐಷಾರಾಮಿಯಾಗಿ ಬದುಕಿದವರಂತೂ ಜೈಲಿನ ವಾತಾವರಣದಲ್ಲಿ ಕಂಗಾಲಾಗಿ ಬಿಡ್ತಾರೆ.. ಸದ್ಯ ದರ್ಶನ್​ಗೂ ಅದೇ ಆಗಿರೋದು.

ಡಿ-ಗ್ಯಾಂಗ್ ಮೇಲೆ ದೋಷಾರೋಪ ಮಾಡಿದ ಕೋರ್ಟ್
ಹೌದು ಎ-1 ಪವಿತ್ರಾ, ಎ-2 ದರ್ಶನ್ ಸೇರಿದಂತೆ ರೇಣುಕಾಸ್ವಾಮಿ ಮರ್ಡರ್ ಕೇಸ್​​ನ ಆರೋಪಿಗಳ ಮೇಲೆ ಏನೆಲ್ಲಾ ಆರೋಪ ಇದೆಯೋ ಅದೆಲ್ಲವನ್ನ ನ್ಯಾಯಾದೀಶರು ಓದಿ ಹೇಳಿ, ನಿಮ್ಮ ವಿರುದ್ದ ಇಂತಿಂಥಾ ಆರೋಪಗಳಿವೆ ಅಂತ ಚಾರ್ಜ್ ಫ್ರೆಮ್ ಮಾಡಿದ್ದಾರೆ.

ನಟ ದರ್ಶನ್ ವಿರುದ್ದ ಒಂದಲ್ಲ ಎರಡಲ್ಲ ಬರೊಬ್ಬರಿ 11 ಸೆಕ್ಷನ್ ಹಾಕಲಾಗಿದೆ. ಈ ಎಲ್ಲಾ ಆರೋಪಗಳನ್ನ ಕೋರ್ಟ್ ದರ್ಶನ್ ಮೇಲೆ ಹೊರಿಸಿದ್ದು, ನಾನೇನು ಮಾಡಿಲ್ಲ ಸ್ವಾಮಿ ಅಂತ ದಾಸ ಅಲವತ್ತುಕೊಂಡಿದ್ದಾನೆ. ಆದ್ರೆ ಆರೋಪಿ ನಾ ಮಾಡಿಲ್ಲ ಅಂದಕೂಡಲೇ ಕೇಸ್ ಮುಗಿಯಲ್ಲ. ನವೆಂಬರ್ 10ರಿಂದ ಸಾಕ್ಷಿಗಳ ವಿಚಾರಣೆ ಮಾಡೋದಕ್ಕೆ ಕೋರ್ಟ್ ಆದೇಶ ನೀಡಿದೆ.

ಮುಂದಿನ ದಿನಗಳಲ್ಲಿ ಸಾಕ್ಷಿಗಳ ವಿಚಾರಣೆ ನಡೆಯಲಿದೆ. ಆ ಸಾಕ್ಷಿಗಳು, ಆಧಾರಗಳು, ಫೋರೆನ್ಸಿಕ್ ವರದಿ, ಟೆಕ್ನಿಕಲ್ ಎವಿಡೆನ್ಸ್​ಗಳು ದಾಸನ ಮುಂದಿನ ಭವಿಷ್ಯವನ್ನ ನಿರ್ಧಾರ ಮಾಡಲಿವೆ. ಒಟ್ಟಾರೆ ದರ್ಶನ್ ಸ್ಥಿತಿ ನೊಡಿದ್ರೆ ಈತನನ್ನ ದುರಂತ ನಾಯಕ ಅಂತ ಕರೆಯದೇ ವಿಧಿಯಿಲ್ಲ..! ಹೆಚ್ಚಿನ ಮಾಹಿತಿಗೆ ವಿಡಿಯೋ ನೊಡಿ.. 

Related Video