ರಮ್ಯಾ ಲೋಕದಲ್ಲಿ ಮೂಡಿದೆ ಹೊಸ ಸುದ್ದಿ.. ವಿಕಟಕವಿ ಚಿತ್ರದಲ್ಲಿ ಮತ್ತೆ ಸಿನಿಮಾಗೆ ಕಮ್‌ಬ್ಯಾಕ್!

ಕ್ವೀನ್ ಬಣ್ಣದ ಜಗತ್ತಿನ ಎಂಟ್ರಿಗೆ ಮಳೆ ಡೈರೆಕ್ಟರ್ ವೇದಿಕೆ.! ಮತ್ತೆ ಒಂದಾಗುತ್ತಿದ್ದಾರೆ ರಂಗ SSLC ಡೈರೆಕ್ಟರ್​ ಹೀರೋಯಿನ್..! ಗ್ಯಾರಂಟಿ ಸುದ್ದಿ, ವಿಡಿಯೋ ನೋಡಿ..

Share this Video
  • FB
  • Linkdin
  • Whatsapp

ಕಿಚ್ಚ ಸುದೀಪ್ ಮತ್ತು ರಮ್ಯಾ ಜೋಡಿ ಸ್ಯಾಂಡಲ್​ವುಡ್​ನ ಸೂಪರ್ ಡೂಪರ್ ಹಿಟ್ ಜೋಡಿಗಳಲ್ಲಿ ಒಂದು. ರಂಗ SSLC ಚಿತ್ರದಿಂದ ಕಿಚ್ಚ, ಹುಚ್ಚ ವರೆಗೂ 4 ಹಿಟ್ ಸಿನಿಮಾಗಳನ್ನ ಕೊಟ್ಟಿದೆ ಈ ಜೋಡಿ. ಸದೀಪ್ ಡೈರೆಕ್ಷನ್​​ನಲ್ಲೆ ಕ್ವೀನ್ ರಮ್ಯಾ ಮತ್ತೆ ರೀ ಲಾಂಚ್ ಆಗ್ತಾರೆ ಅಂತ ಟಾಕ್ ಆಗಿತ್ತು. ಆದ್ರೆ ಈಗ ರಮ್ಯಾ ಸಿನಿ ಎಂಟ್ರಿಯ ಪತ ಬದಲಾಗಿದೆ.. ರಮ್ಯಾಗೆ ಮಳೆ ಡೈರೆಕ್ಟರ್​ ಮೇಲೆ ನಂಬಿಕೆ ಹೆಚ್ಚಾಗಿದೆ. ಅಷ್ಟೆ ಅಲ್ಲ ಬೋಲ್ಡ್ ಬ್ಯೂಟಿ ರಶ್ಮಿಕಾ ಬಗ್ಗೆ ಇಲ್ಲ ಸಲ್ಲದ ಕಮೆಂಟ್ ಮಾಡಿದವರ ವಿರುದ್ಧ ರಮ್ಯಾ ರಾಂಗ್ ಆಗಿದ್ದಾರೆ. ಹಾಗಾದ್ರೆ ರಮ್ಯಾ ರಂಗೀನ್ ಲೋಕದ ಹೊಸ ಕಹಾನಿ ಏನು..?ನೋಡೋಣ ಬನ್ನಿ.

ಸ್ಯಾಂಡಲ್​ವುಡ್​ನ ಸ್ವಾಭಿಮಾನದ ನಲ್ಲೆ ನಟಿ ರಮ್ಯಾ ಈಗ ಎಲ್ಲೆಲ್ಲೂ ಕಾಣಿಸುತ್ತಿದ್ದಾರೆ. 'ಸ್ಯಾಂಡಲ್‌ವುಡ್‌ ಕ್ವೀನ್' ರಮ್ಯಾ ಯಾವಾಗ ಸಿನಿಮಾಕ್ಕೆ ಕಮ್‌ಬ್ಯಾಕ್ ಮಾಡ್ತಾರೆ ಅನ್ನೋದು ಅಭಿಮಾನಿಗಳ ದೊಡ್ಡ ಪ್ರಶ್ನೆ ಆಗಿತ್ತು. 'ಉತ್ತರಕಾಂಡ' ಸಿನಿಮಾದಲ್ಲಿ ಅವರು ನಟಿಸ್ತಾರೆ ಅನ್ನೋದು ಖಚಿತವಾಗಿತ್ತಾದರೂ, ಬಳಿಕ ಅದು ಕೈಗೂಡಲಿಲ್ಲ. ಇದೀಗ ಲೇಟೆಸ್ಟ್ ಬ್ರೇಕಿಂಗ್ ನ್ಯೂಸ್ ಒಂದು ಸಿಕ್ಕಿದೆ. ಏನಪ್ಪ ಅಂದ್ರೆ ಯೋಗರಾಜ್ ಭಟ್ ಅವರ ನಿರ್ದೇಶನದಲ್ಲಿ ರಮ್ಯಾ ಅವರ ಮುಂದಿನ ಸಿನಿಮಾ ಸೆಟ್ಟೇರಲಿದೆಯಂತೆ.

ರಶ್ಮಿಕಾ ಬಗ್ಗೆ ಟ್ರೋಲ್ ಕೆಟ್ಟದಾಗಿರುತ್ತೆ.. ಅದು ಸ್ಟಾಪ್ ಆಗಬೇಕು: ನಟಿ ರಮ್ಯಾ ಖಡಕ್ ಮಾತು..!

ಮತ್ತೆ ಒಂದಾಗುತ್ತಿದ್ದಾರೆ ರಂಗ SSLC ಡೈರೆಕ್ಟರ್​ ಹೀರೋಯಿನ್..!

ರಂಗ ಎಸ್​​ಎಸ್​ ಎಲ್​​ ಸಿ.. ಕಿಚ್ಚ ಸುದೀಪ್ ಹಾಗು ರಮ್ಯಾ ಜೋಡಿಯ ಹಿಟ್ ಸಿನಿಮಾ. ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು ಮುಂಗಾರುಮಳೆ ಸಿನಿಮಾ ಖ್ಯಾತಿಯ ಡೈರೆಕ್ಟರ್​ ವಿಕಟಕವಿ ಯೋಗರಾಜ್ ಭಟ್.. ಈಗ ಇದೇ ಯೋಗರಾಜ್​ ಭಟ್ ನಿರ್ದೇಶನದಲ್ಲಿ ರಮ್ಯಾ ನಟಿಸೋದು ಪಕ್ಕಾ ಆಗಿದೆ. 

ದರ್ಶನ್‌ ಬಗ್ಗೆ ರಮ್ಯಾ 'ನೋ ಕಾಮೆಂಟ್ಸ್'.. ಹಳೆಯ ಟ್ವೀಟ್ ಮರೆಯದ ನೆಟ್ಟಿಗರ ಟ್ರೋಲ್‌ ರಗಳೆ..!?

ಬಹುಭಾಷಾ ನಟಿಯಾಗಿ ಫೇಮಸ್ ಆಗಿರುವ ರಮ್ಯಾ, ಕೊನೆಯದಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದು 2016ರಲ್ಲಿ ಬಂದ 'ನಾಗರಹಾವು' ಸಿನಿಮಾದಲ್ಲಿ. ರಮ್ಯಾ ಚಿತ್ರರಂಗಕ್ಕೆ ಕಾಲಿಟ್ಟು 22 ವರ್ಷಗಳಾಗಿವೆ. ಈಗಲೂ ಕೂಡ ಅದೇ ಚಾರ್ಮ್ ಹೊಂದಿರೋ ರಮ್ಯಾಗೆ ಇಂದಿಗೂ ದೊಡ್ಡ ಫ್ಯಾನ್ಸ್ ಫಾಲೋಯಿಂಗ್ ಇದೆ. ಯೋಗರಾಜ್ ಭಟ್ ಸಿನಿಮಾದಲ್ಲಿ ರಮ್ಯಾ ನಟನೆಗೆ ವಾಪಸಾಗ್ತಾರೆ ಅನ್ನೋ ವಿಚಾರ ಫ್ಯಾನ್ಸ್‌ಗೆ ಖಂಡಿತ ಖುಷಿ ಕೊಟ್ಟಿದೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ.. 

Related Video