ನಟ ದರ್ಶನ್ ಅವರು ಜೈಲಿನಲ್ಲಿ ಇದ್ದಾಗ ರಕ್ಷಿತಾ, ಪ್ರೇಮ್, ಸುಮಲತಾ ಅಂಬರೀಷ್ ಸೇರಿದಂತೆ ಹಲವರು ಭೇಟಿಯಾಗಿ ಬಂದಿದ್ದರು. ಆದರೆ ನಟಿ ರಮ್ಯಾ ನಟ ದರ್ಶನ್ ಅವರನ್ನು ಭೇಟಿಯಾಗುವುದು ಹಾಗಿರಲಿ, ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪ ಹೊತ್ತಿರುವ ನಟ ದರ್ಶನ್‌ಗೆ ತನಿಖೆ ಆಗುವ ಮೊದಲೇ ಕಠಿಣ ಶಿಕ್ಷೆ..
ನಟ ದರ್ಶನ್ (Darshan Thoogudeepa) ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಯಾಗಿ ಜೈಲು ಸೇರಿದ್ದು, ಬರೋಬ್ಬರಿ 8 ತಿಂಗಳು ಜೈಲಿನಲ್ಲಿದ್ದು ಬಳಿಕ ಅನಾರೋಗ್ಯದ ಕಾರಣಕ್ಕೆ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದು ಎಲ್ಲವೂ ಬಹುತೇಕರಿಗೆ ಗೊತ್ತು. ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್ ಜೈಲು ಸೇರಿದ್ದ ಆ ಸಮಯದಲ್ಲಿ, ನಟಿ ರಕ್ಷಿತಾ, ನಟ ಧನ್ವೀರ್ ಸೇರಿದಂತೆ ಹಲವರು ಅವರ ಪರವಾಗಿ ನಿಂತಿದ್ದರೆ, ನಟಿ ರಮ್ಯಾ ಅಂದು ಖಾರವಾಗಿ ಟ್ವೀಟ್ ಮಾಡಿದ್ದರು.
ನಟ ದರ್ಶನ್ ಜೈಲಿನಲ್ಲಿದ್ದಾಗ ಟ್ವೀಟ್ ಮಾಡಿದ್ದ ನಟಿ ರಮ್ಯಾ (Ramya) ಅವರು ಐಪಿಸಿ ಸೆಕ್ಷನ್ 302 ನ್ನು ಉಲ್ಲೇಖಿಸಿ, 'ಕಠಿಣ ಶಿಕ್ಷೆಯಾಗಬೇಕು' ಎಂದಿದ್ದರು. ಇತ್ತೀಚೆಗೆ ಸಿಕ್ಕ ರಮ್ಯಾ ಅವರಿಗೆ ಈ ಬಗ್ಗೆ ಪ್ರಶ್ನೆ ಕೇಳಿದಾಗ 'ನೋ ಕಾಮೆಂಟ್ಸ್' ಎಂದಷ್ಟೇ ಹೇಳಿದ್ದಾರೆ. ಮತ್ತೆ ಮತ್ತೆ ಕೇಳಿದಾಗ 'ನಾನು ಆ ಬಗ್ಗ ಮಾತನಾಡಲ್ಲ..' ಎಂದಷ್ಟೇ ಹೇಳಿದ್ದಾರೆ. ಈ ಬಗ್ಗೆ ನಟಿ ರಮ್ಯಾ ಈಗ ಏನಾದ್ರೂ ಹೇಳ್ತಾರೇನೋ ಎಂದು ಕಾದಿದ್ದವರಿಗೆ ಇದರಿಂದ ತೀವ್ರ ನಿರಾಸೆ ಆಗಿದೆ.
ಶೂಟಿಂಗ್ ಅಖಾಡಕ್ಕೆ ನಟ ದರ್ಶನ್ ಮತ್ತೆ ಎಂಟ್ರಿ, ಚಿತ್ರೀಕರಣಕ್ಕೆ ಕೌಂಟ್‌ಡೌನ್..!
ನಟ ದರ್ಶನ್ ಅವರು ಜೈಲಿನಲ್ಲಿ ಇದ್ದಾಗ ರಕ್ಷಿತಾ, ಪ್ರೇಮ್, ಸುಮಲತಾ ಅಂಬರೀಷ್ ಸೇರಿದಂತೆ ಹಲವರು ಭೇಟಿಯಾಗಿ ಬಂದಿದ್ದರು. ಆದರೆ ನಟಿ ರಮ್ಯಾ ನಟ ದರ್ಶನ್ ಅವರನ್ನು ಭೇಟಿಯಾಗುವುದು ಹಾಗಿರಲಿ, ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪ ಹೊತ್ತಿರುವ ನಟ ದರ್ಶನ್‌ಗೆ ತನಿಖೆ ಆಗುವ ಮೊದಲೇ ಕಠಿಣ ಶಿಕ್ಷೆ ಆಗಬೇಕು ಎಂದು ಘೋಷಿಸಿದ್ದರು. ಆದರೆ, ಇಂದು ನಟ ದರ್ಶನ್ ಜಾಮೀನಿನ ಮೇಲೆ ಬಿಡುಗಡೆಯಾಗಿ ಬೆನ್ನುನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆ, ಇದೀಗ ಕೋರ್ಟ್ ಪರ್ಮಿಷನ್ ತೆಗೆದುಕೊಂಡು ಶೂಟಿಂಗ್‌ನಲ್ಲಿ ಕೂಡ ಸದ್ಯವೇ ಭಾಗಿ ಆಗಲಿದ್ದಾರೆ.
ಈಗ ನಟಿ ರಮ್ಯಾ ಅವರು ಏನಾದ್ರೂ ಹೇಳಿಕೆ ನೀಡಿದರೆ ಅದು ಸಾಕಷ್ಟು ವೈರಲ್ ಆಗುವುದು ಖಂಡಿತ.. ಏಕೆಂದರೆ, 'ಅಪರಾಧಿಗೆ ಶಿಕ್ಷೆ ಆಗಬೇಕು ಎಂದು ಯಾರಾದರೂ ಹೇಳಿದರೆ ಒಪ್ಪಬಹುದು.. ಆದರೆ ಆರೋಪಿಗೆ ಶಿಕ್ಷೆ ಆಗಬೇಕು ಎಂದು ತನಿಖೆಗೂ ಮೊದಲೇ ಘೋಷಿಸಿ ಟ್ವೀಟ್ ಮಾಡುವ ಮೂಲಕ ರಮ್ಯಾ ಸಾಕಷ್ಟು ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಜೊತೆಗೆ, 'ಆರೋಪದ ಬಗ್ಗೆ ನಿಶ್ಪಕ್ಷಪಾತ ತನಿಖೆ ಆಗಬೇಕು ಎಂದು ಹೇಳುವ ಬದಲು, ಅರೋಪಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದಕ್ಕೆ ಟ್ರೋಲ್‌ಗೂ ಒಳಗಾಗಿದ್ದರು. ಆದರೆ ಈಗ 'ನೋ ಕಾಮೆಂಟ್ಸ್..' ಎಂದಿದ್ದಾರೆ.
ಅರೆರೆ.. ಫಿಲ್ಮ್ ಫೆಸ್ಟಿವಲ್‌ಗೆ ಬಂದ ನಟಿ ರಮ್ಯಾ.. ಡಿಕೆಶಿ ನಟ್ಟು ಬೋಲ್ಟು ಹೇಳಿಕೆ ಕೆಲ್ಸ ಮಾಡ್ತಿದೆ..!?
