ಯಾರನ್ನೂ ಟ್ರೋಲ್ ಮಾಡಬಾರದು.. ಎಲ್ಲರಿಗೂ ಅದನ್ನು ಸಹಿಸಿಕೊಳ್ಳೋ ಶಕ್ತಿ ಇರೋದಿಲ್ಲ.. ಅವ್ರ ಮೆಂಟಲ್ ಹೆಲ್ತ್ ಬಗ್ಗೆ ಇಮಾಜಿನ್ ಮಾಡ್ಕೊಳ್ಳಿ.. ಅವ್ರು ಎಷ್ಟು ಅಂತ ಸಹಿಸಿಕೊಳ್ತಾರೆ ಹೇಳಿ? ನೀವೆಲ್ವೇಲೋ ಕೂತ್ಕೊಂಡು ಯಾರೋ ಒಬ್ರನ್ನ ಟ್ರೋಲ್ ಮಾಡ್ತೀರಾ.. ಫುಲ್ ಸ್ಟೋರಿ ನೋಡಿ..
ಸ್ಯಾಂಡಲ್‌ವುಡ್ ನಟಿ ರಮ್ಯಾ (Ramya) ಅವರು ಟ್ರೋಲ್ ಬಗ್ಗೆ ಮಾತನ್ನಾಡಿದ್ದಾರೆ. ಈ ಬಗ್ಗೆ ಮಾತನ್ನಾಡುತ್ತ ನಟಿ ರಮ್ಯಾ 'ನಾನು ಟ್ರೋಲ್ ಮಾಡೋದನ್ನು ಎಲ್ಲರೂ ನಿಲ್ಲಿಸಬೇಕು ಅಂತ ಹೇಳ್ತೀನಿ.. ಉದಾಹರಣೆಗೆ, ನಟಿ ರಶ್ಮಿಕಾ ಮಂದಣ್ಣ (Rashmika Mandanna) ಬಗ್ಗೆ ಟ್ರೋಲ್ ಕೆಟ್ಟದಾಗಿರುತ್ತೆ.. ಅದು ಸ್ಟಾಪ್ ಆಗಬೇಕು. ಅದರಲ್ಲೂ ಮುಖ್ಯವಾಗಿ ನಟಿಯರ ಬಗ್ಗೆ ಟ್ರೋಲ್ ಮಾಡೊದು ಹೆಚ್ಚು. ಕಾರಣ, ಅವರು ಸಾಫ್ಟ್ ಆಗಿರ್ತಾರೆ, ಅವರು ಅದಕ್ಕೆ ಏನೂ ಆಕ್ಷನ್ ತಗೊಳ್ಳೋದಿಲ್ಲ ಅನ್ನೋ ಕಾರಣಕ್ಕೆ.. ಆದರೆ, ಅದು ತಪ್ಪು, ಈ ಟ್ರೋಲ್ ಬಿಸಿನೆಸ್ ನಿಲ್ಲಬೇಕು; ಎಂದಿದ್ದಾರೆ ನಟಿ ರಮ್ಯಾ.
ಯಾರನ್ನೂ ಟ್ರೋಲ್ ಮಾಡಬಾರದು.. ಎಲ್ಲರಗೂ ಅದನ್ನು ಸಹಿಸಿಕೊಳ್ಳೋ ಶಕ್ತಿ ಇರೋದಿಲ್ಲ.. ಅವ್ರ ಮೆಂಟಲ್ ಹೆಲ್ತ್ ಬಗ್ಗೆ ಇಮಾಜಿನ್ ಮಾಡ್ಕೊಳ್ಳಿ.. ಅವ್ರು ಎಷ್ಟು ಅಂತ ಸಹಿಸಿಕೊಳ್ತಾರೆ ಹೇಳಿ? ನೀವೇನೋ ಎಲ್ಲೋ ಕೂತ್ಕೊಂಡು ಇನ್‌ಸ್ಟಾಗ್ರಾಂನಲ್ಲಿ ಯಾರೋ ಒಬ್ರನ್ನ ಟ್ರೋಲ್ ಮಾಡ್ತೀರಾ.. ಆದ್ರೆ, ಆ ಕಡೆ ಅದನ್ನ ರಿಸೀವ್ ಮಾಡೋರ ಪರಿಸ್ಥಿತಿ ಹೇಗಿರಬಹುದು ಅಂತ ಊಹಿಸಿಕೊಳ್ಳಿ..
ದರ್ಶನ್ ಬಗ್ಗೆ ರಮ್ಯಾ 'ನೋ ಕಾಮೆಂಟ್ಸ್'.. ಹಳೆಯ ಟ್ವೀಟ್ ಮರೆಯದ ನೆಟ್ಟಿಗರ ಟ್ರೋಲ್ ರಗಳೆ..!?
ಅದಕ್ಕೆ ಯಾರೋ ಒಬ್ಬರು 'ಅಲ್ಲ ಮೆಡಂ, ರಶ್ಮಿಕಾ ಅವ್ರು ಅವ್ರ ಮನೆ ಹೈದ್ರಾಬಾದ್ ಅಂದ್ರಲ್ಲ..' ಎನ್ನುತ್ತಿದ್ದಂತೆ ನಟಿ ರಮ್ಯಾ ಅವರು 'ಅವ್ರ ಮನೆ ಅಲ್ಲಿ ಇರಬಹುದು..' ಎಂದು ಹೇಳುವ ಮೂಲಕ ಸತ್ಯದ ಇನ್ನೊಂದು ಆಯಾಮವನ್ನು ನಟಿ ರಮ್ಯಾ ಓಪನ್ ಮಾಡಿದ್ದಾರೆ ಎನ್ನಬಹುದು. ನಟಿ ರಮ್ಯಾ ಉದ್ದೇಶ ತುಂಬಾ ಸ್ಪಷ್ಟವಾಗಿದೆ- ಯಾರೂ ಯಾರನ್ನೂ ಟ್ರೋಲ್ ಮಾಡಬಾರದು, ಎಲ್ಲರಿಗೂ ಅದನ್ನು ಸಹಿಸಿಕೊಳ್ಳೋ ಶಕ್ತಿ ಇರಲ್ಲ ಅನ್ನೋದು. ರಮ್ಯಾರ ಈ ನಿಲುವನ್ನು ಎಲ್ಲರೂ ಪಕ್ಷಬೇಧ ಮರೆತು ಸಪೋರ್ಟ್ ಮಾಡಲೇಬೇಕು. ಏನಂತೀರಾ?
ಇನ್ನು, ಬಹುಶಃ ನಟಿ ರಮ್ಯಾ ಅವರ ಹೇಳಿಕೆಯನ್ನೇ ಟ್ರೋಲ್ ಮಾಡ್ತಾರೆ ಅನ್ಸುತ್ತೆ.. ಯಾಕಂದ್ರೆ, ಕೆಲಸ ಇಲ್ಲದವರೇ ಟ್ರೋಲ್ ಮಾಡೋದು.. ರಶ್ಮಿಕಾ ಅವರು ಯಾವುದನ್ನು ಅವರ ಊರು ಅಂತ ಹೇಳ್ತಾರೋ ಅದು ಅವರಿಷ್ಟ. ಅವರು ಇತ್ತೀಚೆಗೆ ಅವರ ಮನೆಯನ್ನು ಹೈದ್ರಾಬಾದ್‌ಗೇ ಶಿಫ್ಟ್ ಮಾಡಿರಬಹುದು ಅಲ್ವಾ? ಯಾಕೆ ಸಾಧ್ಯವಿಲ್ಲ? ಅದನ್ನೇ ನಟಿ ರಮ್ಯಾ ಹೇಳಿರೋದು.. ಹೌದು, ರಶ್ಮಿಕಾ ಮಂದಣ್ಣ ಮನೆ ಈಗ ಹೈದ್ರಾಬಾದ್‌ನಲ್ಲೇ ಇರಬಹುದು. ಅವರು ಮನೆ ಶಿಫ್ಟ್ ಮಾಡ್ತೀವಿ ಅಂತ ಜಗತ್ತಿಗೇ ಡಂಗುರ ಸಾರಿ ಮಾಡಬೇಕು ಅಂತೇನಿಲ್ಲ.. ಸೋ, ಅದನ್ನೆಲ್ಲಾ ಟ್ರೋಲ್ ಮಾಡೋ ಅಗತ್ಯವಿಲ್ಲ ಅನ್ನೊದು ರಮ್ಯಾ ಹೇಳಿಕೆ ಅರ್ಥ..!
ಶಿವರಾಜ್‌ಕುಮಾರ್ ಎದುರೇ ಡಾ ರಾಜ್‌ಕುಮಾರ್ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?!
ಅದಿರಲಿ, ಸ್ವತಃ ರಮ್ಯಾ ಕೂಡ ಬಹಳಷ್ಟು ವಿಷಯಗಳಿಗೆ ಟ್ರೋಲ್ ಆಗುತ್ತಲೆ ಇರುತ್ತಾರೆ.. ತೀರಾ ಇತ್ತೀಚೆಗೆ, ಫಿಲಂ ಫೆಸ್ಟಿವಲ್‌ನಲ್ಲಿ ಡಿಕೆ ಶಿವಕುಮಾರ್ ಅವರ ನಟ್ಟು-ಬೋಲ್ಟು ಹೇಳಿಕೆ ಬಗ್ಗೆ ಮಾತನ್ನಾಡಿ ರಮ್ಯಾ ಟ್ರೋಲ್‌ಗೆ ಒಳಗಾಗಿದ್ದಾರೆ. ನಟಿ ರಮ್ಯಾ ಡಿಕೆ ಶಿವಕುಮಾರ್ ಹೇಳಿದ್ದು ಕೂಡ ಸರಿಯಾಗಿದೆ, ಆದರೆ ಎಲ್ಲದಕ್ಕೂ ಕಲಾವಿದರನ್ನು ದೂರೋದೂ ಸರಿಯಲ್ಲ' ಎನ್ನುವ ಮೂಲಕ ಎರಡೂ ಕಡೆ ಡ್ಯಾಮೆಜ್ ಆಗದಂತೆ ಹೇಳಿಕೆ ನೀಡಿದ್ದರು. ಅದೂ ಕೂಡ ಟ್ರೋಲ್ ಆಗಿದೆ. ಇವೆಲ್ಲವನ್ನೂ ಸೇರಿಸಿ ರಮ್ಯಾ ಟ್ರೋಲ್ ಮಾಡೋದು ತಪ್ಪು ಎಂಬ ಸಂದೇಶ ನೀಡಿದ್ದಾರೆ.
