ಸಿನಿಮಾ ರಂಗದ ಹಠವಾದಿ, ಅಣ್ಣಾವ್ರ ಜೊತೆ ಬಾಲನಟನಾಗಿ ನಟಿಸಿದ್ದ ಕ್ರೇಜಿಸ್ಟಾರ್ ..!

ಸ್ಯಾಂಡಲ್‌ವುಡ್‌ನಲ್ಲಿ ಅಕ್ಷರಶಃ ಹೊಸ ಕ್ರೇಜ್ ಸೃಷ್ಟಿಸಿದ 'ಕ್ರೇಜಿ ಸ್ಟಾರ್' ರವಿಚಂದ್ರನ್. ಸಿನಿಮಾ ಮೇಕಿಂಗ್‌ನಲ್ಲಿ ಹೊಸ ಭಾಷೆ ಬರೆದ 'ಮೂವಿ ಮಾಂತ್ರಿಕ' ರವಿಚಂದ್ರನ್. ಸಿನಿಮಾನೇ ಉಸಿರಾಗಿಸಿಕೊಂಡಿರುವ ರವಿಚಂದ್ರನ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ.

First Published May 31, 2023, 2:11 PM IST | Last Updated May 31, 2023, 2:11 PM IST

ಸ್ಯಾಂಡಲ್‌ವುಡ್‌ನಲ್ಲಿ ಅಕ್ಷರಶಃ ಹೊಸ ಕ್ರೇಜ್ ಸೃಷ್ಟಿಸಿದ 'ಕ್ರೇಜಿ ಸ್ಟಾರ್' ರವಿಚಂದ್ರನ್. ಸಿನಿಮಾ ಮೇಕಿಂಗ್‌ನಲ್ಲಿ ಹೊಸ ಭಾಷೆ ಬರೆದ 'ಮೂವಿ ಮಾಂತ್ರಿಕ' ರವಿಚಂದ್ರನ್. ಸಿನಿಮಾನೇ ಉಸಿರಾಗಿಸಿಕೊಂಡಿರುವ ರವಿಚಂದ್ರನ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ.1961ರ ಮೇ 30 ರಂದು ಪಟ್ಟಮ್ಮಾಳ್ ವೀರಸ್ವಾಮಿ ಹಾಗೂ ವೀರಸ್ವಾಮಿ ದಂಪತಿಗಳ ಪುತ್ರನಾಗಿ ರವಿಚಂದ್ರನ್ ಜನಿಸಿದರು. ಬಾಲ ನಟನಾಗಿ ಚಿತ್ರರಂಗಕ್ಕೆ ಬಂದು ನಂತರ ವಿಲನ್ ಆಗಿ , ನಂತರ ನಟನಾಗಿ ಎಲ್ಲಕ್ಕಿಂತ ಹೆಚ್ಚಾಗಿ ಕ್ರೇಜಿ ಸ್ಟಾರ್ ಆಗಿ ಮೆರೆದ ಈ ನಟ, ಇಂದಿನ ಅದೆಷ್ಟೋ ನಟರಿಗೆ ನಿರ್ದೇಶಕರಿಗೆ ನಿರ್ಮಾಪಕರಿಗೆ ಸ್ಫೂರ್ತಿ. 1968 ಧೂಮಕೇತು ಚಿತ್ರದಲ್ಲಿ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದರು. ಕುಲಗೌರವ’ ಚಿತ್ರದಲ್ಲಿ ಬಾಲನಟನಾಗಿ ಡಾ ರಾಜ್‌ಮಾರ್ ಜೊತೆಗೆ ರವಿಚಂದ್ರನ್ ಬಣ್ಣ ಹಚ್ಚಿದ್ದರು. ನಂತರ 1982ರಲ್ಲಿ ‘ಖದೀಮ ಕಳ್ಳರು’ ಚಿತ್ರದಲ್ಲಿ ವಿಲನ್ ಆಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ, ಈ ಹೀರೋ ನಂತರ ತಿರುಗಿ ನೋಡಿಲ್ಲ. ರವಿಚಂದ್ರನ್ 1986ರಲ್ಲಿ ಪ್ರೇಮಿಗಳ ದಿನವಾದ ಏಪ್ರಿಲ್ 14ರಂದು ಸುಮತಿಯವರನ್ನು ವಿವಾಹವಾದರು. ದಂಪತಿಗೆ ಗೀತಾಂಜಲಿ ಎಂಬ ಪುತ್ರಿಯಿದ್ದಾರೆ. ಪುತ್ರರಾದ ಮನೋರಂಜನ್ ಮತ್ತು ವಿಕ್ರಮ್ ಸ್ಯಾಂಡಲ್ವುಡ್‌ನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.