Ramya: ಇದು ಮೋಹಕ ತಾರೆಯ ಸಂತೋಷ ಗುಟ್ಟು: ನಾನು ಮದುವೆಯಾಗಲ್ಲ ಅಂದ್ರು ರಮ್ಯಾ
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಸಮಾರಂಭವೊಂದರಲ್ಲಿ, ತಮ್ಮ ಮದುವೆಯ ಬಗ್ಗೆ ಮೌನ ಮುರಿದಿದ್ದಾರೆ.
ಕೆಂಗೇರಿಯ ಬಿಜಿಎಸ್ ಆರೋಗ್ಯ ಮತ್ತು ಶಿಕ್ಷಣ ಕ್ಯಾಂಪಸ್'ನಲ್ಲಿ ಬಿಜಿಎಸ್ ಉತ್ಸವದ ಚಾಲನಾ ಸಮಾರಂಭದ ಬಳಿಕ ರಮ್ಯಾ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ್ದಾರೆ. ವಿದ್ಯಾರ್ಥಿಯೊಬ್ಬರ ‘ನಿಮ್ಮ ಮದುವೆ ಯಾವಾಗ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಮದುವೆ ಯಾಕೆ ಆಗಬೇಕು ಎಂದು ನನಗೆ ಅರ್ಥವಾಗುತ್ತಿಲ್ಲ. ಮದುವೆ ಅಥವಾ ಸಂತೋಷ ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಬೇಕು. ನಾನು ಸಂತೋಷವಾಗಿರಬೇಕು ಎಂದು ಆಯ್ಕೆ ಮಾಡಿಕೊಳ್ಳುತ್ತೇನೆ’ ಎಂದು ಮುಗುಳುನಗೆ ಬೀರಿದರು. ಹೆಣ್ಣು ಮಕ್ಕಳ ಆರ್ಥಿಕ ಸ್ವಾವಲಂಬನೆ ಬಗ್ಗೆಯೂ ರಮ್ಯಾ ಇದೇ ಸಂದರ್ಭದಲ್ಲಿ ಮಾತನಾಡಿದರು.
Tribble Riding Review ಫನ್ನು, ಎಮೋಷನ್ನು ಮತ್ತು ಗಣೇಶ್ ಎಲಿವೇಷನ್ನು