ದೇವದತ್ ಪಡಿಕ್ಕಲ್ ಜೆರ್ಸಿ ತೊಟ್ಟ ಧನ್ಯಾ: RCB ಹೈದನಿಗೆ ಕ್ಲೀನ್ ಬೌಲ್ಡ್ ಆದ್ರಾ ದೊಡ್ಮನೆ ಹುಡ್ಗಿ?

ಧನ್ಯಾ ರಾಮ್​ಕುಮಾರ್ ಆರ್​ಸಿಬಿಯ ಕಟ್ಟಾ ಅಭಿಮಾನಿ. ಅದ್ರಲ್ಲೂ ಒಬ್ಬ ಆರ್​ಸಿಬಿ ಹೈದನಿಗೆ ಧನ್ಯಾ ಕ್ಲೀನ್ ಬೌಲ್ಡ್ ಆಗಿದ್ದಾರೆ ಅನ್ನೋ ಗುಸು ಗುಸು ಎಲ್ಲಾ ಕಡೆ ಹರಿದಾಡ್ತಾ ಇದೆ.

Share this Video
  • FB
  • Linkdin
  • Whatsapp

ಸದ್ಯ ಎಲ್ಲೆಲ್ಲೂ ಐಪಿಎಲ್ ಭರಾಟೆ. ಸ್ಯಾಂಡಲ್​ವುಡ್ ತಾರೆಯರು ಕೂಡ ಐಪಿಎಲ್ ಅಖಾಡದಲ್ಲಿರೋ ನಮ್ಮ ಆರ್​ಸಿಬಿ ಟೀಂನ ಬೆಂಬಲಿಸ್ತಾ ಇದ್ದಾರೆ. ದೊಡ್ಮನೆ ಹುಡ್ಗಿ, ಧನ್ಯಾ ರಾಮ್​ಕುಮಾರ್ ಆರ್​ಸಿಬಿಯ ಕಟ್ಟಾ ಅಭಿಮಾನಿ. ಅದ್ರಲ್ಲೂ ಒಬ್ಬ ಆರ್​ಸಿಬಿ ಹೈದನಿಗೆ ಧನ್ಯಾ ಕ್ಲೀನ್ ಬೌಲ್ಡ್ ಆಗಿದ್ದಾರೆ ಅನ್ನೋ ಗುಸು ಗುಸು ಎಲ್ಲಾ ಕಡೆ ಹರಿದಾಡ್ತಾ ಇದೆ. ಈಗ ಎಲ್ಲೆಲ್ಲೂ ಐಪಿಎಲ್ ಭರಾಟೆ.. ಅದ್ರಲ್ಲೂ ನಮ್ಮ ಆರ್​ಸಿಬಿ ಟೀಂ ಈ ಸಾರಿ ಭರ್ಜರಿ ಪ್ರದರ್ಶನ ತೋರ್ತಾ ಟೂರ್ನಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಸೋ ವಿಜಯಶಾಲಿಯಾಗಿ ಮುನ್ನುಗ್ತಾ ಇರೋ ಆರ್​ಸಿಬಿ ತಂಡವನ್ನ ಎಲ್ಲರೂ ಚೀಯರ್ ಅಪ್ ಮಾಡ್ತಾ ಇದ್ದಾರೆ. ಇತ್ತೀಚಿಗೆ ದೊಡ್ಮನೆ ಹುಡ್ಗಿ, ಧನ್ಯಾ ರಾಮ್​ ಕುಮಾರ್ ಕೂಡ ಮ್ಯಾಚ್​ಗೆ ಹೋಗಿ ಆರ್​ಸಿಬಿ ಟೀಂನ ಹುರಿದುಂಬಿಸಿದ್ದಾರೆ. 

ಈ ನಡುವೆ ಧನ್ಯಾ, ಆರ್​ಸಿಬಿಯ ಸ್ಟಾರ್ ಅಟಗಾರ ದೇವದತ್ ಪಡಿಕ್ಕಲ್ ಜೆರ್ಸಿ ತೊಟ್ಟು ಪೋಸ್ ಕೊಟ್ಟಿದ್ದಾರೆ. ಪಡಿಕ್ಕಲ್ ಆರ್​ಸಿಬಿ ತಂಡದಲ್ಲಿರೋ ಕನ್ನಡದ ಹುಡ್ಗ. ಅದ್ರಲ್ಲೂ ಈ ಸಾರಿ ಸಖತ್ ಫಾರ್ಮ್​​ನಲ್ಲಿದ್ದಾರೆ. ಸೋ ಧನ್ಯಾ RCB ಹೈದನಿಗೆ ಕ್ಲೀನ್ ಬೌಲ್ಡ್ ಆಗಿದ್ದಾರೆ. ಈ ನಡುವೆ ಕೆಲವರು ಧನ್ಯಾ ದೇವದತ್​ಗೆ ಬರೀ ಫ್ಯಾನಾ ಇಲ್ಲಾ ಜಾನಾ ಅಂತ ಕೂಡ ಪ್ರಶ್ನೆ ಮಾಡ್ತಾ ಇದ್ದಾರೆ. ಎಷ್ಟಂದ್ರೂ ಪಡಿಕ್ಕಲ್ ಕನ್ನಡದ ಹುಡ್ಗ. ಧನ್ಯಾ ದೊಡ್ಮನೆಯ ಕುಡಿ. ಇವರಿಬ್ಬರ ನಡುವೆ ಏನಾದ್ರೂ ಕುಚ್ ಕುಚ್ ನಡೀತಾ ಇದೆ ಅಂತ ಗಾಸಿಪ್ ಶುರುವಾಗಿದೆ. ಸದ್ಯಕ್ಕಂತೂ ಇದು ಗಾಸಿಪ್ ಮಾತ್ರ..! ಜೆರ್ಸಿಯಿಂದ ಶುರುವಾದ ಗಾಸಿಪ್ ಮುಂದೆ ಎಲ್ಲಿಗೆ ಹೋಗಿ ತಲುಪುತ್ತೋ ಕಾದುನೋಡಬೇಕಿದೆ.

Related Video