'ನೋಡಿದವರು ಏನಂತಾರೆ' ಟೀಸರ್ ರಿಲೀಸ್ ಆಯ್ತು? ನೋಡಿ, ಏನು ಅಂತ ಹೇಳ್ರೀ!
ನಟ ನವೀನ್ ಶಂಕರ್ ನಟನೆಯ ನೋಡಿದವರು ಏನಂತಾರೆ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದೀಗ ಚಿತ್ರದ ಟೀಸರ್ ರಿಲೀಸ್ ಆಗಿದೆ. ಕುಲದೀಪ್ ಕಾರಿಯಪ್ಪ ನಿರ್ದೇಶಿಸಿಸಿರುವ ನೋಡಿದವರು ಏನಂತಾರೆ ಚಿತ್ರಕ್ಕೆ ನಾಗೇಶ್ ಗೋಪಾಲ್ ನಿರ್ಮಾಣ ಮಾಡಿದ್ದಾರೆ. ಅಪೂರ್ವ ಭಾರದ್ವಾಜ್ ನಾಯಕಿಯಾಗಿ ಅಭಿನಯಿಸಿದ್ದಾರೆ.
ಕನ್ನಡ ಸಿನಿಮಾರಂಗದಲ್ಲಿ ಮಾತ್ರವಲ್ಲದೇ ತಮಿಳು ಹಾಗೂ ತೆಲುಗು ಚಿತ್ರರಂಗಗಳಲ್ಲಿ ಕೂಡ ತಮ್ಮ ಛಾಪು ಮೂಡಿಸಿರುವ ನಟ ನವೀನ್ ಶಂಕರ್. ಇದೀಗ, ನಟ ನವೀನ್ ಶಂಕರ್ ನಟನೆಯ 'ನೋಡಿದವರು ಏನಂತಾರೆ' ಸಿನಿಮಾ ಟೀಸರ್ ಲಾಂಚ್ ಆಗಿ, ಸಖತ್ ವೈರಲ್ ಆಗುತ್ತಿದೆ. ಟೀಸರ್ ಬಿಡುಗಡೆ ಮಾತ್ರವಲ್ಲ, ಈ ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿದೆ.
ರಿಲೀಸ್ ಆಗಿರುವ ಈ ಚಿತ್ರದ ಟೀಸರ್ ನೋಡಿ, ನೀವು ಏನಂತೀರಾ ಎಂಬ ಕುತೂಹಲ ಸಹಜವಾಗಿಯೇ ನಟ ನವೀನ್ ಶಂಕರ್ ಹಾಗೂ ಇಡೀ ಚಿತ್ರತಂಡಕ್ಕೆ ಇದೆ. ಕುಲದೀಪ್ ಕಾರಿಯಪ್ಪ ನಿರ್ದೇಶಿಸಿಸಿರುವ ನೋಡಿದವರು ಏನಂತಾರೆ ಚಿತ್ರಕ್ಕೆ ನಾಗೇಶ್ ಗೋಪಾಲ್ ನಿರ್ಮಾಣ ಮಾಡಿದ್ದಾರೆ. ಅಪೂರ್ವ ಭಾರದ್ವಾಜ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..