
SSLCಯಲ್ಲಿ ನಟ ಜಗ್ಗೇಶ್ ಪಡೆದುಕೊಂಡ ಅಂಕವೆಷ್ಟು ಗೊತ್ತಾ ?
ಸೆಲೆಬ್ರಿಟಿಗಳ ವಿದ್ಯಾಭ್ಯಾಸದ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಕುತೂಹಲ ವಿದ್ದು, ಇದೀಗ ನಟ ಜಗ್ಗೇಶ್ SSLC ಅಂಕಪಟ್ಟಿ ವೈರಲ್ ಆಗಿದೆ.
ಅಭಿಮಾನಿಗಳಿಗೆ ಸಾಧಾರಣವಾಗಿ ಕುತೂಹಲ ಇರುವ ವಿಷಯಗಳಲ್ಲಿ ನಮ್ಮ ನೆಚ್ಚಿನ ನಟ ಎಷ್ಟು ಓದಿದ್ದಾರೆ ಎನ್ನುವುದು ಒಂದು ಆಗಿದೆ . ಈಗ ನಟ ಜಗ್ಗೇಶ್ ಅವರು ತಮ್ಮ ಅಂಕಪಟ್ಟಿಯನ್ನು ಟ್ವೀಟ್ ಮಾಡಿದ್ದು,ಅಂಕಪಟ್ಟಿ ವೈರಲ್ ಆಗಿದೆ. ಜಗ್ಗೇಶ್ ಅವರು ಸ್ಮಾರ್ಟ್ ಸ್ಟೂಡೆಂಟ್ ಅಲ್ಲದಿದ್ದರು 10ನೇ ತರಗತಿ ಪರೀಕ್ಷೆಯಲ್ಲಿ 600ಕ್ಕೆ 342 ಅಂಕ ಪಡೆದುಕೊಂಡಿದ್ದಾರೆ. ಕನ್ನಡದಲ್ಲಿ 150ಕ್ಕೆ 101 ಅಂಕ ಪಡೆದರೆ, ಇಂಗ್ಲಿಷ್‌ನಲ್ಲಿ 100ಕ್ಕೆ 54, ಹಿಂದಿಯಲ್ಲಿ 50ಕ್ಕೆ 20, ಗಣಿತದಲ್ಲಿ 100ಕ್ಕೆ 57, ವಿಜ್ಞಾನದಲ್ಲಿ 100ಕ್ಕೆ 52 ಹಾಗೂ ಸಮಾಜ ವಿಜ್ಞಾನದಲ್ಲಿ 100ಕ್ಕೆ 58 ಮಾರ್ಕ್ಸ್ ಪಡೆದಿದ್ದು, ಜಗ್ಗೇಶ್ ಎಸ್ಎಸ್ಎಲ್‌ಸಿ ಮಾರ್ಕ್ಸ್ ಕಾರ್ಡ್ ವೈರಲ್ ಆಗುತ್ತಿದೆ.
65 ಕೋಟಿ ರೂ. ಮೌಲ್ಯದ ಬಂಗಲೆ ಖರೀದಿಸಿದ ಜಾನ್ವಿ ಕಪೂರ್ ಕುಟುಂಬ; ಇಲ್ಲಿದೆ ಸಂಪೂರ್ಣ ವಿವರ