'ಸಲಾರ್' ಹೊಸ ಪೋಸ್ಟರ್‌ನಲ್ಲಿ ಕೆಜಿಎಫ್ ಗಮಲು: ಕನ್ನಡಿಗನ ಕೈಯಲ್ಲಿ ಡಾರ್ಲಿಂಗ್ ಪ್ರಭಾಸ್ ಭವಿಷ್ಯ..!
ಆದಿಪುರುಷ್ ಸೋಲು ಸಲಾರ್ ಮೇಲೆ ಕಣ್ಣಿಟ್ಟ ಫ್ಯಾನ್ಸ್!
ನೀಲ್ರ 'ಸಲಾರ್' ಹಿಂದಿದೆಯಾ ಕೆಜಿಎಫ್ ನೆರಳು..?
ಸಲಾರ್ ಪ್ರಶಾಂತ್ ನೀಲ್ 'ಗೇಮ್ ಆಫ್ ಥ್ರೋನ್ಸ್'
ಡಾರ್ಲಿಂಗ್ ಪ್ರಭಾಸ್ ಗೆಲುವಿಗೆ ಇರೋ ಒಂದೋ ಒಂದು ಅಸ್ತ್ರ ಸಲಾರ್ ಸಿನಿಮಾ. ಆದಿಪುರುಷ್‌ನಲ್ಲಿ ರಾಮನ ಬಾಣ ಹಿಡಿದು ಬಾಕ್ಸಾಫಿಸ್‌ಗೆ ಗುರಿ ಇಟ್ಟಿದ್ದ ಪ್ರಭಾಸ್ ಆ ಗುರಿ ತಪ್ಪಿದ್ದಾರೆ. ಆದ್ರೆ ಸಲಾರ್ ಹಿಡಿದು ಪಕ್ಕಾ ಬಾಕ್ಸಾಫೀಸ್ ದೋಚುತ್ತೇನೆ ಅನ್ನುತ್ತಿದ್ದಾರೆ. ಆದಿಪುರುಷ್ ಸೋತ ಮೇಲೆ ಪ್ರಭಾಸ್ ಫ್ಯಾನ್ಸ್ ಕಣ್ಣಿಟ್ಟಿರೋದು ಸಲಾರ್ ಮೇಲೆ. ಆದ್ರೆ ಇಂಟ್ರೆಸ್ಟಿಂಗ್ ಏನ್ ಗೊತ್ತಾ.? ಈ ಸಲಾರ್ ಹಿಂದೆ ಕೆಜಿಎಫ್ ನೆರಳು ಅಡಗಿದೆ ಅಂತ ಹೊಸ ಸುದ್ದಿಯೊಂದು ಹರಿದಾಡ್ತಿದೆ. ಸಲಾರ್ ಅಂದ್ರೆ ನೆನಪಿಗೆ ಬರೋದೆ ಸ್ಯಾಂಡಲ್ವುಡ್ ಡೈರೆಕ್ಟರ್ ಪ್ರಶಾಂತ್ ನೀಲ್. ‘ಕೆಜಿಎಫ್ 2’ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ‘ಸಲಾರ್’. ಈ ಸಿನಿಮಾ ರಿಲೀಸ್ಗೆ ಇನ್ನು 100 ದಿನ ಭಾಕಿ ಇದೆ. ಈ ಸಿನಿಮಾ ಮೇಲೆ ಇಡೀ ದೇಶಾದ್ಯಂತ ಭಾರಿ ನಿರೀಕ್ಷೆ ಇದೆ. ಸಲಾರ್ ಹೊಸ ಪೋಸ್ಟರ್ ರಿಲೀಸ್ ಆಗಿದ್ದು, ಆ ಪೋಸ್ಟರ್ ಹಿಂದೆ ‘ಕೆಜಿಎಫ್ 2’ ನೆರಳಿದೆ ಅಂತ ಸಿನಿ ಪ್ರೇಕ್ಷಕರು ಪತ್ತೆ ಹಚ್ಚಿದ್ದಾರೆ.
ಇದನ್ನೂ ವೀಕ್ಷಿಸಿ: ತೆರೆ ಮೇಲೆ ತೆರೆದುಕೊಳ್ತಿದೆಯಾ ಕೆಂಪೇಗೌಡರ ಚರಿತ್ರೆ?: ಅಣ್ಣವ್ರ ಮನೆ ಕದ ತಟ್ಟಿದೆ ಈ ಪಾತ್ರ..!