
ರಿಷಬ್ ಶೆಟ್ಟಿ ಕಾಲಿಗೆ ಬಿದ್ದು ಬನ್ನಿ; 'ಮಠ' ಸಿನಿಮಾದ ವಿರುದ್ಧ ರಿಷಿ ಕುಮಾರ್ ಸ್ವಾಮೀಜಿ ಗರಂ
ಸ್ಯಾಂಡಲ್ ವುಡ್‌ನಲ್ಲಿ ಮತ್ತೊಂದು ಮಠ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಆದರೆ ಈಸಿನಿಮಾ ವಿರುದ್ಧ ರಿಷಿ ಕುಮಾರ್ ಸ್ಮಾವಿ ಗರಂ ಆಗಿದ್ದಾರೆ. ಹಿಂದು ಸ್ವಾಮಿಗಳ ಬಗ್ಗೆ ಸಿನಿಮಾ ಮಾಡಿ ಕಾಸು ಮಾಡ್ಬೇಡಿ ಎಂದು ರೊಚ್ಚಿಗೆದಿದ್ದಾರೆ.
ಸ್ಯಾಂಡಲ್ ವುಡ್‌ನಲ್ಲಿ ಮತ್ತೊಂದು ಮಠ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಗುರುಪ್ರಸಾದ್ ನಿರ್ದೇಶನದ ಮಠ ಸಿನಿಮಾದ ಬಳಿಕ ಅದೇ ಹೆಸರಿನಲ್ಲಿ ಮತ್ತೊಂದು ಸಿನಿಮಾ ರಿಲೀಸ್ ಆಗುತ್ತಿದೆ. ರವೀಂದ್ರ ವಂಶಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಮಂಡ್ಯ ರಮೇಶ್, ಗುರುಪ್ರಸಾದ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಸಿನಿಮಾ ವಿರುದ್ಧ ಈಗ ರಿಷಿ ಕುಮಾರ್ ಸ್ವಾಮಿ ಗರಂ ಆಗಿದ್ದಾರೆ. ಮೌಲಿಗಳ ಬಗ್ಗೆ ಸಿನಿಮಾ ಮಾಡಲಿ ಚರ್ಚ್ ಫಾದರ್ ಗಳ ಬಗ್ಗೆ ಸಿನಿಮಾ ಮಾಡಲಿ.
ಹಿಂದು ಸ್ವಾಮಿಗಳ ಬಗ್ಗೆ ಸಿನಿಮಾ ಮಾಡಿ ಕಾಸು ಮಾಡ್ಬೇಡಿ ಎಂದು ರೊಚ್ಚಿಗೆದಿದ್ದಾರೆ. ಮಠ ಸಿನಿಮಾನ ಸ್ವಾಮಿಜಿಗಳಿಗೆ ತೋರಿಸಿ ಆಮೇಲೆ ರಿಲೀಸ್ ಮಾಡ್ಬೇಕು ಅಂತ ಹೇಳಿದ್ದಾರೆ. ಇಂಥ ಸಿನಿಮಾಗಳಿಂದ ಹಿಂದು ಮಠ ಹಿಂದು ಸ್ವಾಮಿಜಿಗಳ ಬಗ್ಗೆ ತಾತ್ಸಾರ ಹೆಚ್ಚಾಗ್ತಿದೆ ಎಂದು ಹೇಳಿದ್ದಾರೆ. ಇಂತವರು ಕಾಂತಾರ ಸಿನಿಮಾ ನೋಡಿ ರಿಷಬ್ ಕಾಲಿಗೆ ಬಿದ್ದು ಬನ್ನಿ ಅಂತ ರಿಷಿಕುಮಾರ್ ಹೇಳಿಕೆ ನೀಡಿದ್ದಾರೆ.