Kantara: ಮೂರು ಬಿಗ್ ನ್ಯೂಸ್ ಕೊಟ್ಟ ಡಿವೈನ್ ಸ್ಟಾರ್: ಕಾಂತಾರಾ ಪಾರ್ಟ್ 2 ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದೇನು?
ರಿಷಬ್ ಶೆಟ್ಟಿ ಅವರಿಗೆ ಸಿದ್ದಶ್ರೀ ಪ್ರಶಸ್ತಿ ನೀಡಲಾಗಿದೆ. ಈ ಸಲುವಾಗಿ ಕಲಬುರಗಿಗೆ ಬಂದ ಅವರು ಕಾಂತಾರ 2 ಶುರುವಾಗುವ ಬಗ್ಗೆ ಮಾತನಾಡಿದ್ದಾರೆ.
ಕಾಂತಾರ ಚಿತ್ರ 400 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಈ ಯಶಸ್ಸು ಜನರಿಂದ ಬಂದಿದ್ದು ಎಂದು ರಿಷಬ್ ಹೇಳಿದ್ದಾರೆ. ಹಾಗಾದರೆ ‘ಕಾಂತಾರ 2’ ಸಿನಿಮಾ ಬರುತ್ತಾ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ‘ಟೈಮ್ ಬಂದಾಗ ಕಾಂತಾರ 2 ಚಿತ್ರ ಬರುತ್ತದೆ. ಅದರ ಬಗ್ಗೆ ಆಗಲೇ ಹೇಳುತ್ತೇವೆ. ಆ ಕುರಿತು ಈಗ ಯಾವುದೇ ಆಲೋಚನೆ ಇಲ್ಲ ಎಂದು ಅವರು ಹೇಳಿದ್ದಾರೆ.