10ಕ್ಕೂ ಹೆಚ್ಚು ಟೇಪ್‌ಗಳನ್ನು ಬಳಸಿ ಉರ್ಫಿ ಬಾಡಿ ಫ್ಲೋರ್‌ಗೆ ಅಂಟಿಸಿರುವ ವಿಡಿಯೋ ವೈರಲ್....  

ಹಿಂದಿ ಕಿರುತೆರೆ ನಟಿ, ಓಟಿಟಿ ಸ್ಪರ್ಧಿ ಉರ್ಫಿ ಜಾವೇದ್‌ ಇನ್‌ಸ್ಟಾಗ್ರಾಂನಲ್ಲಿ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಬೆತ್ತಲಾಗಿ ಮಲಗಿರುವ ಉರ್ಫಿಗೆ 10ಕ್ಕೂ ಹೆಚ್ಚು ಟೇಪ್‌ ಬಳಸಿ ದೇಹವನ್ನು ಫ್ಲೋರ್‌ಗೆ ಅಂಟಿಸಿದ್ದಾರೆ. ಇಷ್ಟೊಂದು ಗ್ಲಾಮರ್‌ನಲ್ಲಿ ಟ್ರ್ಯಾಪ್ ಆಗಬಹುದಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ವೆಬ್‌ನಲ್ಲಿ ಸಿಲುಕಿಕೊಂಡಿರುವೆ ಎಂದು ಉರ್ಫಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಮೇಕಪ್ ಮತ್ತು ಈ ರೀತಿ ಕಾನ್ಸೆಪ್ಟ್‌ ನನ್ನದೇ ಎಂದು ಹೆಮ್ಮೆಯಿಂದ ಉರ್ಫಿ ಹೇಳಿಕೊಂಡಿದ್ದಾರೆ. ಹೇರ್‌ಸ್ಟೈಲ್‌ನ ಮಾತ್ರ ಮನೀಷ್‌ ಎಂಬುವವರು ಮಾಡಿದ್ದಾರೆ. ಪದೇ ಪದೇ ಬೆತ್ತಲೆ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಉರ್ಫಿನ ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ದೇಹಕ್ಕೆ ಟೇಪ್ ಹಾಕಿಕೊಳ್ಳುವ ಬದಲು ಬಾಯಿಗೆ ಟೇಪ್ ಹಾಕಿಕೊಳ್ಳಬೇಕಿತ್ತು ನಿನ್ನ ಕೊಳಕು ಮಾತು ಕೇಳಿಸಿಕೊಳ್ಳುವುದು ತಪ್ಪುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. 

ಎಫ್‌ಐಆರ್‌ ನಿಜವೇ?

ಸರ್ವಜನಿಕವಾಗಿ ಉರ್ಫಿ ಹಾಟ್ ಹಾಟ್ ಆಗಿ ಬಟ್ಟೆ ಧರಿಸಿ ಓಡಾಡುವುದು ತಪ್ಪು ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಬೀಪ್‌ ಪದಗಳನ್ನು ಬಳಸುವ ಮೂಲಕ ಎಫ್‌ಐಆರ್‌ ದಾಖಲು ಮಾಡಿರುವವರಿಗೆ ಉರ್ಫಿ ಕ್ಲಾಸ್ ತೆಗೆದುಕೊಂಡಿದ್ದರು. 'ನನಗೆ ಪಬ್ಲಿಸಿಟಿ ಬೇಕು ಎಂದು ಜನರು ತಿಳಿದುಕೊಂಡಿದ್ದಾರೆ ಆದರೆ ಯಾರಿಗೂ ಗೊತ್ತಿಲ್ಲ ಹೀಗೆ ಹೇಳುತ್ತಿರುವವರು ನನ್ನನ್ನು ಬಳಸಿಕೊಂಡು ಪಬ್ಲಿಸಿಟಿ ಗಳಿಸುತ್ತಿದ್ದಾರೆ.ಈ ಪ್ರಪಂಚ ಹೇಗಿದೆ ಅಂದ್ರೆ ರೇಪಿಸ್ಟ್‌ಗಳ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿಲ್ಲ ನನ್ನ ಮೇಲೆ ಎಫ್‌ಐಆರ್‌ ಹಾಕುತ್ತಿದ್ದಾರೆ. ನಾನು ಧರಿಸುವ ಬಟ್ಟೆ ನನ್ನ ಇಷ್ಟ ಬೇರೆ ಅವರಿಗೆ ಯಾಕೆ ಸಮಸ್ಯೆ ಕಾಡುತ್ತಿದೆನನ್ನ ಇಷ್ಟ, ಏನು ಬೇಕಿದ್ದರೂ ಧರಿಸುವೆ, ಇದು ತಾಲಿಬಾನ್ ಅಲ್ಲ ಅಫ್ಘಾನಿಸ್ತಾನ ಅಲ್ಲ. ಒಂದು ಹೆಣ್ಣು ಧರಿಸುವ ಬಟ್ಟೆನ ಕಂಟ್ರೋಲ್ ಮಾಡಬೇಕು ಅಂದ್ರೆ ನೀವು ಅಲ್ಲಿಗೆ ಹೋಗಿ ಬಿಡಿ.ಎಫ್‌ಐಆರ್‌ ಹಾಕಿ ಏನು ಉಪಯೋಗ? ಪೊಲೀಸರ ಬಳಿ ಬೇರೆ ಕೇಸ್‌ಗಳು ಇರುತ್ತದೆ..ರೇಪ್‌, ಕಿರುಕುಳ, ಮರ್ಡರ್, ಕಳ್ಳತನ ಎಷ್ಟೊಂದು ಅದೆಲ್ಲಾ ಬಿಟ್ಟು ನನ್ನ ಬಟ್ಟೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರಾ?' ಎಂದು ಉರ್ಫಿ ಹೇಳಿದ್ದರು. 

ಮನೆಬಿಟ್ಟು ಓದಿ ಬಂದ ಉರ್ಫಿ:

 ಅಕ್ಟೋಬರ್ 15, 1997 ರಂದು ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಜನಿಸಿದ ಉರ್ಫಿ ಕೆಲವು ವರ್ಷಗಳ ಹಿಂದೆ ಫ್ಯಾಷನ್ ಡಿಸೈನರ್ ಸ್ಟುಡಿಯೋದಲ್ಲಿ ಇಂಟರ್ನ್‌ಶಿಪ್‌ ಮಾಡಿದ್ದಾರೆ. ಉರ್ಫಿಗೆ ಮೂವರು ಸಹೋದರಿಯರು ಉರುಸಾ ಜಾವೇದ್, ಅಸ್ಫಿ ಜಾವೇದ್ ,ಡಾಲಿ ಜಾವೇದ್ ಮತ್ತು ಒಬ್ಬ ಸಹೋದರ ಸಲೀಂಜಾವೇದ್. ಮನೆಯಲ್ಲಿ ತುಂಬಾ ಸಂಪ್ರದಾಯ ಎನ್ನುತ್ತಿದ್ದರು ಎಂದು ಉರ್ಫಿ ಮನೆ ಬಿಟ್ಟು ಓಡಿ ಹೋಗಿದ್ದರಂತೆ. ಲಕ್ನೋದ ಸಿಟಿ ಮಾಂಟೆಸ್ಸರಿ ಶಾಲೆಯಲ್ಲಿ ಶಿಕ್ಷಣ ಪಡೆದು 12ನೇ ತರಗತಿಯ ನಂತರ ಅಮಿಟಿ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನದಲ್ಲಿ ಪದವಿ ಪಡೆದಿದ್ದಾರೆ.

Urfi Javed ಮೈ ತೋರಿಸ್ತಿಯಾ ಟೈಟ್ ಬಟ್ಟೆ ಹಾಕ್ತೀಯಾ ಈಗ ನಡೆಯೋಕೂ ಕಷ್ಟನಾ: ಉರ್ಫಿ ಟ್ರೋಲ್

ತಂದೆಯಿಂದಲೇ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಹಿಂದೆ ಪಡೆಯುತ್ತಿದ್ದ ಕಾರಣ ಉರ್ಫಿ ತಮ್ಮ ಸಹೋದರಿ ಜೊತೆ ದೆಹಲಿಗೆ ಓಡಿ ಹೋದರು ಎಂದು ಈ ಹಿಂದೆ ಸಂದರ್ಶನದಲ್ಲಿ ಹೇಳಿದ್ದರು. ಸ್ವತಃ ಉರ್ಫಿನೇ ತಮ್ಮ ಎಲ್ಲಾ ಉಡುಪುಗಳನ್ನು ಡಿಸೈನ್ ಮಾಡಿಕೊಳ್ಳುತ್ತಾರಂತೆ. 2015 ರಲ್ಲಿ ಟಿವಿ ಶೋ 'ತೇಧಿ ಮೇಧಿ ಫ್ಯಾಮಿಲಿ' ಮೂಲಕ ಮನರಂಜನಾ ಉದ್ಯಮಕ್ಕೆ ಅವರ ಪ್ರವೇಶವಾಗಿತ್ತು. ಇದರೊಂದಿಗೆ, ಅವರು 'ಚಂದ್ರನಂದಿನಿ', 'ಬೇಪ್ನಾಹ್' ಮತ್ತು 'ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ' ನಂತಹ ಟಿವಿ ಧಾರಾವಾಹಿಗಳಲ್ಲಿಯೂ ಕೆಲಸ ಮಾಡಿದ್ದಾರೆ. 

View post on Instagram