2025ಕ್ಕೆ ಕಾಂತಾರ ಚಾಪ್ಟರ್-1 ಓಪನ್: ಪ್ರಶಸ್ತಿ ಖುಷಿಯಲ್ಲಿ ಬಿಗ್ ನ್ಯೂಸ್ ಕೊಟ್ಟ ಹೊಂಬಾಳೆ

ಕಾಂತಾರ ಸಿನಿಮಾಗೆ ಅತ್ಯುತ್ತಮ ಮನರಂಜನಾತ್ಮಕ ಚಿತ್ರ ಪ್ರಶಸ್ತಿ ಸಿಕ್ರೆ, ಕಾಂತಾರ ಸಿನಿಮಾದ ನಟನೆಗೆ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ದೊರೆತಿದೆ. ರಿಷಬ್ ಶೆಟ್ರು ರಾಷ್ಟ್ರ ಪ್ರಶಸ್ತಿಗಳಿಂದ ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದುಕೊಂಡು ಕನ್ನಡಕ್ಕೆ ಹೆಮ್ಮೆ ತಂದಿದ್ದಾರೆ. 

Share this Video
  • FB
  • Linkdin
  • Whatsapp

70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ಈ ಬಾರಿ 7 ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿರೋ ಕನ್ನಡ ಸಿನಿರಂಗ ದೆಹಲಿಯಲ್ಲಿ ಕನ್ನಡ ಬಾವುಟ ಹಾರಿಸಿದೆ. , ಕಾಂತಾರ ಮತ್ತು ಕೆಜಿಎಫ್​-2 ಸಿನಿಮಾಗಳಿಗೆ 4 ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿದ್ದು, ಇದೇ ಖುಷಿಯಲ್ಲಿ ಹೊಂಬಾಳೆ ಫಿಲ್ಮ್ಸ್​ ನ್ಯೂ ಅಪ್​ಡೇಟ್ ಕೊಟ್ಟಿದೆ. 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭ ರಾಷ್ಟ್ರಧಾನಿ ದೆಹಲಿಯಲ್ಲಿ ಮಂಗಳವಾರ ಅದ್ಧೂರಿಯಾಗಿ ನಡೆದಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಎಲ್ಲಾ ವಿಜೇತರಿಗೆ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ. ಬಾಲಿವುಡ್ ದಿಗ್ಗಜ ಮಿಥುನ್ ಚಕ್ರವರ್ತಿ ಈ ಸಾರಿಯ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದಾರೆ. ಈ ಸಾರಿ ಕನ್ನಡ ಚಿತ್ರರಂಗ ನ್ಯಾಷನಲ್ ಅವಾರ್ಡ್​ ರೇಸ್​ ಚಿನ್ನದ ಬೆಳೆ ಬೆಳೆದಿರೋದು ಗೊತ್ತೇ ಇದೆ. 

ಕಾಂತಾರ ಸಿನಿಮಾಗೆ ಅತ್ಯುತ್ತಮ ಮನರಂಜನಾತ್ಮಕ ಚಿತ್ರ ಪ್ರಶಸ್ತಿ ಸಿಕ್ರೆ, ಕಾಂತಾರ ಸಿನಿಮಾದ ನಟನೆಗೆ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ದೊರೆತಿದೆ. ರಿಷಬ್ ಶೆಟ್ರು ರಾಷ್ಟ್ರ ಪ್ರಶಸ್ತಿಗಳಿಂದ ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದುಕೊಂಡು ಕನ್ನಡಕ್ಕೆ ಹೆಮ್ಮೆ ತಂದಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ , ಯಶ್ ನಟನೆಯ ಕೆಜಿಎಫ್-2 ಸಿನಿಮಾ ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಿತ್ರ ಪಡೆದ್ರೆ, ಕೆಜಿಎಫ್-2 ಚಿತ್ರದ ಸಾಹಸ ನಿರ್ದೇಶಕ ಅನ್ಬ್ರೀವ್ ಮಾಸ್ಟರ್ಸ್​ ಅತ್ಯುತ್ತಮ ಸಾಹಸ ಸಂಯೋಜಕ ಪ್ರಶಸ್ತಿಯನ್ನ ಪಡೆದುಕೊಂಡ್ರು. ಕಾಂತಾರ ಮತ್ತು ಕೆಜಿಎಫ್-2 ಎರಡೂ ಸಿನಿಮಾಗಳ ನಿರ್ಮಾಪಕರು ಹೊಂಬಾಳೆ ಫಿಲಂಸ್. ಈ ಡಬಲ್ ಅವಾರ್ಡ್ ಸಂಭ್ರಮದಲ್ಲೇ ನಿರ್ಮಾಪಕ ವಿಜಯ್ ಕಿರಗಂದೂರು ಕಾಂತಾರ ಚಾಪ್ಟರ್-1 ಮತ್ತು ಕೆಜಿಎಫ್-3 ಕುರಿತ ಅಪ್​ಡೇಟ್ಸ್​ ಕೊಟ್ಟಿದ್ದಾರೆ. 

ಕಾಂತಾರ ಚಾಪ್ಟರ್-1 ಭರದಿಂದ ಶೂಟ್ ಆಗ್ತಾ ಇದ್ದು, ಆಗಸ್ಟ್ 2025ಕ್ಕೆ ಸಿನಿಮಾ ರಿಲೀಸ್​​ನ ಪ್ಲ್ಯಾನ್ ಮಾಡಲಾಗಿದೆಯಂತೆ. ಇನ್ನೂ ಕೆಜಿಎಫ್-3 ಕೂಡ ಈಗಾಗ್ಲೇ ಪ್ಲ್ಯಾನ್ ಆಗಿದೆ. ಸದ್ಯ ಪ್ರಶಾಂತ್ ನೀಲ್ ಮತ್ತು ಯಶ್ ತಮ್ಮದೇ ಪ್ರಾಜೆಕ್ಟ್​​ಗಳಲ್ಲಿ ಬ್ಯುಸಿಯಾಗಿದ್ದು ಆ ಕಮಿಟ್​​ಮೆಂಟ್ಸ್ ಮುಗಿದ ಮೇಲೆ ಕೆಜಿಎಫ್-3 ಸೆಟ್ಟೇರೋದು ಫಿಕ್ಸ್ ಎಂದಿದ್ದಾರೆ ವಿಜಯ್ ಕಿರಗಂದೂರು. ಅಲ್ಲಿಗೆ ಒಂದು ಕಡೆ ಪ್ರಶಸ್ತಿ ಸಿಕ್ಕ ಖುಷಿಯಲ್ಲಿರೋ ಫ್ಯಾನ್ಸ್​ಗೆ ಕಾಂತಾರ-1 ಮತ್ತು ಕೆಜಿಎಫ್-3 ಅಪ್​ಡೇಟ್ ಕೂಡ ಸಿಕ್ಕಿದ್ದು ಡಬಲ್ ಖುಷಿ ತಂದಿದೆ. ಸೋ ಹೊಂಬಾಳೆಯಿಂದ ಮತ್ತಷ್ಟು ದೊಡ್ಡ ಯಶಸ್ಸು ಮತ್ತು ಅವಾರ್ಡ್ ಗಳನ್ನ ಖಂಡಿತ ನಿರೀಕ್ಷೆ ಮಾಡಬಹುದು.

Related Video