
Kantara Chapter 1: ಕಾಂತಾರದ ‘ರಾಣಿ’ಜೇನು ರುಕ್ಮಿಣಿ ವಸಂತ್; ಕಾಸ್ಟ್ಯೂಮ್ ಡಿಸೈನ್ ಮಾಡಿದ ರಿಷಬ್ ಶೆಟ್ಟಿ ಪತ್ನಿ
ಖುದ್ದು ರಿಷಬ್ ಶೆಟ್ಟಿ ಹೇಳಿದಂತೆ ಕಾಂತಾರ ಚಾಪ್ಟರ್-1 ಇಷ್ಟು ದೊಡ್ಡ ಮಟ್ಟದಲ್ಲಿ ಮೂಡಿಬರೋದ್ರ ಹಿಂದೆ ಪ್ರತಿಯೊಬ್ಬ ಕಲಾವಿದರು ಮತ್ತು ತಂತ್ರಜ್ಞರ ಕೊಡುಗೆ ಇದೆ. ಕಾಂತಾರ ಟೀಂ ಸಿನಿಮಾದ ಜರ್ನಿ ಬಗ್ಗೆ ಹೇಳೋದೇನು..? ನೋಡೋಣ ಬನ್ನಿ.
ಯೆಸ್ ಕಾಂತಾರ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ರಾಣಿ ಕನಕವತಿ ಅನ್ನೋ ಪಾತ್ರ ಮಾಡಿದ್ದಾರೆ. ರಾಣಿಯ ವಸ್ತ್ರ ಭೂಷಣದಲ್ಲಿ ಮುದ್ದಾಗಿ ಕಾಣ್ತಾ ಇರೋ ರುಕ್ಮಿಣಿ, ಕತ್ತಿ ಹಿಡಿದು ಸಾಹಸ ಕೂಡ ಮಾಡಿದ್ದಾರೆ. ಈ ಸಿನಿಮಾದಲ್ಲಿ ನಟನೆ ಮಾಡ್ತಾ ಮತ್ತೊಂದು ಎತ್ತರಕ್ಕೆ ಬೆಳೆದಿದ್ದೀನಿ ಅಂತಾರೆ ರುಕ್ಮಿಣಿ. ಇನ್ನೂ ರುಕ್ಕು ತೆರೆ ಮೇಲೆ ಇಷ್ಟು ಚೆಂದ ಕಾಣ್ತಾ ಇರೋದ್ರ ಹಿಂದೆ ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಕೊಡುಗೆ ತುಂಬಾನೇ ಇದೆ. ರುಕ್ಮಿಣಿಗೆ ಮತ್ತು ಇಡೀ ಸಿನಿಮಾಗೆ ಕಾಸ್ಟೈಮ್ ಡಿಸೈನ್ ಮಾಡಿರೋದು ಪ್ರಗತಿ ಶೆಟ್ಟಿ.