
Kantara Cinema Heroine: 'ಸಪ್ತಸಾಗರದಾಚೆ ಎಲ್ಲೋʼ ಸಿನಿಮಾ ಪುಟ್ಟಿ ರುಕ್ಮಿಣಿ ವಸಂತ್ ಈಗ 'ಕಾಂತಾರ-1'ನಲ್ಲಿ ರಾಣಿ ಕನಕಾವತಿ
ಕಾಂತಾರ ಚಾಪ್ಟರ್-1ನಲ್ಲಿ ರುಕ್ಮಿಣಿ ವಸಂತ್ ನಾಯಕಿ ಅನ್ನೊ ವಿಷ್ಯನ ಈ ಹಿಂದೇನೆ ಸಿನಿಮಾ ಹಂಗಾಮದಲ್ಲಿ ಹೇಳಿದ್ವಿ. ಇದೀಗ ಖುದ್ದು ಕಾಂತಾರ ಟೀಮ್ ನಾಯಕಿಯ ಫಸ್ಟ್ ಲುಕ್ನ ರಿವೀಲ್ ಮಾಡಿದೆ. ಸಪ್ತಸಾಗರದ ಪುಟ್ಟಿ ಕಾಂತಾರನಲ್ಲಿ ರಾಣಿ ಕನಕಾವತಿ ಆಗಿದ್ದಾರೆ.
ಕಾಂತಾರ ಚಾಪ್ಟರ್-1ನಲ್ಲಿ ನಾಯಕಿ ಯಾರು ಅನ್ನೋದನ್ನ ಇಷ್ಟು ದಿನ ಗುಟ್ಟಾಗೇ ಇಟ್ಟಿದ್ದ ತಂಡ, ಫೈನಲಿ ನಾಯಕಿ ಯಾರು ಅನ್ನೋದನ್ನ ರಿವೀಲ್ ಮಾಡಿದೆ. ವರ್ಲ್ಡ್ ವೈಡ್ ನಿರೀಕ್ಷೆ ಮೂಡಿಸಿರೋ ಈ ಸಿನಿಮಾದಲ್ಲಿ ನಾಯಕಿ ಚಾನ್ಸ್ ಗಿಟ್ಟಿಸಿರೋ ಲಕ್ಕಿ ಗರ್ಲ್ಟ್ ಬೇರ್ಯಾರೂ ಅಲ್ಲ ರುಕ್ಮಿಣಿ ವಸಂತ್.
ಸಪ್ತಸಾಗರದ ಪುಟ್ಟಿ ಕಾಂತಾರ-1ನಲ್ಲಿ ರಾಣಿ ಕನಕಾವತಿ ಆಗಿದ್ದಾರೆ. ಭರ್ಜರಿ ಸೀರೆಯುಟ್ಟು, ಒಡವೆ ತೊಟ್ಟು ಪೋಸ್ ಕೊಟ್ಟಿರೋ ಪೋಸ್ಟರ್ನ ರಿವೀಲ್ ಮಾಡಿರೋ ತಂಡ ರುಕ್ಕು ಪಾತ್ರದ ಹೆಸರು ಕನಕಾವತಿ ಅನ್ನೋದನ್ನೂ ಅನೌನ್ಸ್ ಮಾಡಿದೆ.