
Rishab Shetty Kantara Chapter 1: ಕದಂಬ ರಾಜರು Vs ಕರಾವಳಿ ವೀರರು, ರಕ್ತಸಿಕ್ತ ಸಂಘರ್ಷದ ಮಧ್ಯೆ ಪ್ರೇಮಕಥೆ
ಸಿನಿಪ್ರಿಯರು ದೊಡ್ಡ ನಿರೀಕ್ಷೆಯೊಂದಿಗೆ ಕಾಯ್ತಾ ಇದ್ದ ಕಾಂತಾರ ಚಾಪ್ಟರ್-1 ಟ್ರೈಲರ್ ರಿಲೀಸ್ ಆಗಿದೆ. 5 ಬಾಷೆಗಳಲ್ಲಿ ಬಿಡುಗಡೆ ಆಗಿರೋ ಟ್ರೈಲರ್ ಎಲ್ಲೆಡೆ ಟ್ರೆಂಡಿಂಗ್ನಲ್ಲಿದೆ.
2022ರಲ್ಲಿ ಬಂದ ಕಾಂತಾರದ ಪ್ರೀಕ್ವೆಲ್ ಕಥೆ ಇಲ್ಲಿದ್ದು ಬನವಾಸಿ ಕದಂಬ ರಾಜಮನೆತನ ಮತ್ತು ತುಳುನಾಡಿನ ದೈವದ ಕಥೆಯನ್ನ ರಿಷಬ್ ಹೇಳಲಿಕ್ಕೆ ಹೊರಟಿದ್ದಾರೆ. ಯೆಸ್ ಸಿನಿಪ್ರಿಯರು ಬಹುನಿರೀಕ್ಷೆಯೊಂದಿಗೆ ಕಾಯ್ತಾ ಇದ್ದ ಕಾಂತಾರ ಚಾಪ್ಟರ್-1 ಟ್ರೈಲರ್ ರಿಲೀಸ್ ಆಗಿದೆ. ಪಂಚಭಾಷೆಗಳಲ್ಲಿ ಸಿನಿಮಾ ಟ್ರೈಲರ್ ಹೊರಬಂದಿದ್ದು ಹಿಂದಿ ಭಾಷೆಯ ಟ್ರೈಲರ್ನ ಹೃತಿಕ್ ರೋಷನ್, ತೆಲುಗು ಟ್ರೈಲರ್ನ ಪ್ರಭಾಸ್, ಮಲಯಾಳಂ ಟ್ರೈಲರ್ನ ಪ್ರಥ್ವಿರಾಜ್ ಸುಕುಮಾರನ್, ತಮಿಳು ಟ್ರೈಲರ್ನ ಶಿವಕಾರ್ತಿಕೇಯನ್ ತಮ್ಮ ಸೋಷಿಯಲ್ ಮಿಡಿಯಾ ಖಾತೆಗಳಲ್ಲಿ ಹಂಚಿಕೊಂಡು ರಿಲೀಸ್ ಮಾಡಿದ್ದಾರೆ. ಇನ್ನೂ ಕನ್ನಡ ಟ್ರೈಲರ್ನ ವಿನೂತನವಾಗಿ ಕನ್ನಡಿಗರಿಂದಲೇ ರಿಲೀಸ್ ಮಾಡಿಸಿದೆ ಕಾಂತಾರ ಟೀಂ.