Asianet Suvarna News Asianet Suvarna News

ರಿಷಬ್ ಶೆಟ್ಟಿ ಈ ವರ್ಷ ಕಾಂತಾರ 2 ಶೂಟಿಂಗ್ ಹೋಗಲ್ಲ: ಹೊಸ ವರ್ಷಕ್ಕೆ ಹೊಸ ಯೋಜನೆ ಜತೆ ಬರ್ತಾರೆ ಶಿವ..!

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಎಲ್ಲಿದ್ದಾರೆ..? ಏನ್ ಮಾಡ್ತಿದ್ದಾರೆ..? ಮೊನ್ನೆ ಮೊನ್ನೆಯಷ್ಟೆ ಉಡುಪಿಯ ಕಾರ್ಯಕ್ರಮ ಒಂದರಲ್ಲಿ ಇನ್ಮುಂದೆ ನನ್ನ ಯಾರು ಯಾವ್ ಕಾರ್ಯಕ್ರಮಕ್ಕೂ ಕರಿಬೇಡಿ ಅಂದಿದ್ರು. ಇದರ ಮಧ್ಯೆ ಇರುವ ರಿಷಬ್ ಬದಲಾದ ಹೇರ್ ಸ್ಟೈಲ್ ನಲ್ಲಿದ್ದ ಫೋಟೋ ಒಂದು ವೈರಲ್ ಆಗಿತ್ತು.
 

First Published Nov 19, 2023, 9:18 AM IST | Last Updated Nov 19, 2023, 9:18 AM IST

ರಿಷಬ್ ಶೆಟ್ಟಿ ಕಾಂತಾರ 2 (Kantara 2) ಕೆತ್ತನೆಯಲ್ಲಿ ಫುಲ್ ಬ್ಯುಸಿ. ಹಾಗಂದ ಮಾತ್ರಕ್ಕೆ ಶೆಟ್ರು ಕಾಂತಾರ 2 ಶೂಟಿಂಗ್ ಹೋಗಿದ್ದಾರೆ. ಇನ್ನೇನು ಸಿನಿಮಾ ಬಂದೇ ಬಿಡುತ್ತೆ ಅಂತ ಅದ್ಕೊಳ್ಳಬೇಡಿ. ಆ ಕೆಲಸಕ್ಕೆ ಇನ್ನೂ ಟೈಂ ಬೇಕೇ ಬೇಕು. ಕೆರಾಡಿ ಹುಡುಗನ ಕಡೆಯಿಂದ ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಒಂದಿಷ್ಟು ಎಕ್ಸ್ಲ್ಯೂಸೀವ್ ಮಾಹಿತಿ ಸಿಕ್ಕಿದೆ. ಕಾಂತಾರದ ದೈವ ಪಂಜುರ್ಲಿ ಹಾಗೂ ಗುಳಿಗ ರಿಷಬ್ ಶೆಟ್ಟಿ‌ ಮೈ ಮೇಲೆ ಮತ್ತೆ ಬರೋದು ಯಾವಾಗ.? ಈ ವರ್ಷವಂತೂ ಅದು ಸಾಧ್ಯ ಇಲ್ಲ. ಇದೇ ನವೆಂಬರ್‌ನಲ್ಲಿ ಕಾಂತಾರ 2 ಶೂಟಿಂಗ್ ಹೋಗ್ತಾರೆ ರಿಷಬ್(Rishab Shetty) ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ ಅದು ಈ ವರ್ಷ ಸಾಧ್ಯವಿಲ್ಲ. ಕಾಂತಾರ 2 ಶೂಟಿಂಗ್(Shooting) ಶುರುವಾಗೋದು ಹೊಸ ವರ್ಷಕ್ಕೆ. ಹೊಸ ಆಲೋಚನೆ ಹೊಸ ಯೋಜನೆ ಜೊತೆ ಸಿನಿಮಾದ ವರ್ಕ್ ಶುರು ಮಾಡ್ತಾರಂತೆ ರಿಷಬ್. ಕಾಂತಾರ ಪ್ರೀಕ್ಚೆಲ್ ಶೂಟಿಂಗ್ ಶುರು ಮಾಡೋಕೆ ಟೈಂ ಹಿಡೀತಿರೋದು ಯಾಕೆ ಗೊತ್ತಾ ..? ಒಂದು ಕಾಂತಾರ 2 ಕ್ಲೈಮ್ಯಾಕ್ಸ್.. ಮತ್ತೊಂದು‌ ಈ‌ ಸಿನಿಮಾಗೆ ರಿಷಬ್ ಶೆಟ್ಟಿ ಇನ್ನೂ ಸಜ್ಜುಗೊಳ್ಳದೇ ಇರೋದು. ರಿಷಬ್ ಕಾಂತಾರ 2 ಕ್ಲೈಮ್ಯಾಕ್ಸ್ ಇನ್ನು ಸಿದ್ಧವಾಗಿಲ್ವಂತೆ. ರಿಷಬ್ ಕಟ್ಟಿದ್ದ 20 ಜನರ ತಂಡ  ಕ್ಲೈಮ್ಯಾಕ್ಸ್ ಪ್ಲಾಮಿಂಗ್ ಮಾಡಿದ್ದಾರೆ. ಆದ್ರೆ ಇದು ರಿಷಬ್ ಗೆ ನೆಮ್ಮದಿ ನೀಡಿಲ್ಲ. ಯಾಕಂದ್ರೆ ಕಾಂತಾರ ಪಾರ್ಟ್ ಒಂದರ ಕ್ಲೈಮ್ಯಾಕ್ಸ್ ಆ ಸಿನಿಮಾದ ಶಕ್ತಿ. ಅದಕ್ಕಿಂತೂ ದೊಡ್ಡ ಶಕ್ತಿ ಕಾಂತಾರ ಪಾರ್ಟ್ 2 ಕ್ಲೈಮ್ಯಾಕ್ಸ್ ನಲ್ಲಿ ಇರಬೇಕು ಅಂತ ರಿಷಬ್ ಯೋಚ್ನೆ ಮತ್ತು ಯೋಚನೆ ಹೀಗಾಗಿ ಕಾಂತಾರ ಪಾರ್ಟ್ 2 ಕ್ಲೈಮ್ಯಾಕ್ಸ್ ಅನ್ನ ಮತ್ತೊಮ್ಮೆ ಸಿದ್ಧಪಡಿಸುತ್ತಿದ್ದಾರೆ ರಿಷಬ್.

ಇದನ್ನೂ ವೀಕ್ಷಿಸಿ:  ಬಾಲ ಹನುಮಾನ್ ಥೀಮ್‌ನಲ್ಲಿ ಯಶ್ ಮಗನ ಬರ್ತ್ ಡೇ! ಯಥರ್ವ್ ಹುಟ್ಟುಹಬ್ಬದ ವಿಡಿಯೋ ಹಂಚಿಕೊಂಡ ರಾಧಿಕಾ!