ಕನ್ನಡ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸಕ್ಸಸ್ ಆಗಲು ಕನ್ನಡಿಗರೇ ಕಾರಣ: ರಿಷಬ್‌ ಶೆಟ್ಟಿ

ನನ್ನ ಜೀವಮಾನ ಸಂಪಾದನೆ ಅಭಿಮಾನಿಗಳು. ಅವರಿಗೆ ನಾನು ಯಾವಗಲೂ ಚಿರಋಣಿಯಾಗಿರುತ್ತೇನೆ ಎಂದು ನಟ ರಿಷಬ್‌ ಶೆಟ್ಟಿ ಹೇಳಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು: ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಬ್‌ ಶೆಟ್ಟಿ( Rishab Shetty) ಅವರು ಅಭಿಮಾನಿಗಳ ಜತೆಗೆ ಶುಕ್ರವಾರ ತಮ್ಮ ಹುಟ್ಟುಹಬ್ಬವನ್ನು(Birthday) ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಬೆಂಗಳೂರಿನ (Bengaluru) ಹೊಸಕೆರೆಹಳ್ಳಿ ಬಳಿ ಇರುವ ನಂದಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಅಭಿಮಾನಿಗಳು (Fans) ಸೇರಿದ್ದರು. ಈ ವೇಳೆ ಮಾತನಾಡಿದ ನಟ, ನಮಗೆ ಗಾಂಧಿ ನಗರದಲ್ಲಿ ಥಿಯೇಟರ್‌ಗಳು ಎಲ್ಲಿವೆ ಎಂದು ಗೊತ್ತಿರಲಿಲ್ಲ. ಅಣ್ಣಾವ್ರು ಅಭಿಮಾನಿಗಳು ದೇವರು ಅಂದಿದ್ದಾರೆ. ಈ ದೇವರನ್ನು ಸಂಪಾದಿಸಿದ್ದೇನೆ. ಇದು ನನ್ನ ಜೀವಮಾನ ಸಂಪಾದನೆಯಾಗಿದೆ ಎಂದು ರಿಷಬ್ ಶೆಟ್ಟಿ ಹೇಳಿದರು. ಈ ದೇವರುಗಳಿಗೆ ನಾನು ಚಿರಋಣಿಯಾಗಿದ್ದೇನೆ. ಇದಕ್ಕಿಂತ ಹೆಚ್ಚಿದ್ದನ್ನು ನನ್ನ ಜೀವನದಲ್ಲಿ ನಾನು ಕೇಳುವುದಿಲ್ಲ. ನೀವು ಇದ್ದೀರಾ ಎಂದು ಗೊತ್ತಾಗಿದ್ದೆ, ನನಗೆ ಕಾಂತಾರ (Kantara) ಬಂದ ಮೇಲೆ. ಕನ್ನಡ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸಕ್ಸಸ್‌ ಆಗಲು ಕಾರಣ ಕನ್ನಡಿಗರು ಎಂದು ನಿರ್ದೇಶಕ ರಿಷಬ್‌ ಶೆಟ್ಟಿ ಹೇಳಿದರು. 

ಇದನ್ನೂ ವೀಕ್ಷಿಸಿ: Rishab Shetty: ಹುಲಿ ವೇಷಧಾರಿಗಳ ಜೊತೆ ಮಸ್ತ್‌ ಡ್ಯಾನ್ಸ್‌ ಮಾಡಿದ ರಿಷಬ್‌ ಶೆಟ್ಟಿ

Related Video