ಬಳ್ಳಾರಿ ಜೈಲ್ ಹೆಸರು ಕೇಳಿ ಬೆಚ್ಚಿ ಬಿದ್ದ Darshan Thoogudeepa; ನರಕ ‘ದರ್ಶನ’ ಮಾಡಿಸಿದ್ದ ಬಳ್ಳಾರಿ ಜೈಲು!

ಬೇಲ್ ರದ್ದಾಗಿ ಪರಪ್ಪನ ಅಗ್ರಹಾರ ಸೇರಿದುವ ದರ್ಶನ್​ನ ಬಳ್ಳಾರಿ ಜೈಲ್​ಗೆ ಶಿಫ್ಟ್ ಮಾಡೋ ತಯಾರಿ ನಡೀತಾ ಇದೆ. ಬಳ್ಳಾರಿ ಜೈಲ್ ಹೆಸರು ಕೇಳಿಯೇ ಬೆಚ್ಚಿಬೀಳ್ತಾ ಇರುವ ದಾಸ, ದಯವಿಟ್ಟು ಅಲ್ಲಿಗೆ ಮಾತ್ರ ಕಳಿಸಬೇಡಿ ಸ್ವಾಮಿ ಅಲವತ್ತುಕೊಳ್ತಾ ಇದ್ದಾನೆ. ಹಾಗಾದ್ರೆ ಏನಾಗಲಿದೆ ದಾಸನ ಬಳ್ಳಾರಿ ಭವಿಷ್ಯ..?

Share this Video
  • FB
  • Linkdin
  • Whatsapp

ದರ್ಶನ್​​​ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ತಯಾರಿ ನಡೀತಾ ಇದೆ. ಈ ಬಗ್ಗೆ ಸಿಟಿ ಸಿವಿಲ್ ಕೋರ್ಟ್​ಗೆ SPP ಅರ್ಜಿ ಸಲ್ಲಿಕೆ ಮಾಡಿದೆ. ಇದರ ಬಗ್ಗೆ ನಿಮಗೇನಾದ್ರೂ ಆಕ್ಷೇಪಣೆ ಇದ್ರೆ ತಿಳಿಸಿ ಅಂತ ದರ್ಶನ್ ಪರ ವಕೀಲರಿಗೆ ಸೂಚಿಸಿರುವ ಕೋರ್ಟ್ ಆಗಸ್ಟ್ 23ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದೆ. ದರ್ಶನ್ ಬಳ್ಳಾರಿ ಜೈಲ್ ಹೆಸರು ಕೇಳ್ತಾನೇ ಬೆಚ್ಚಿ ಬಿದ್ದಿದ್ದಾನಂತೆ. ಏನಾದ್ರೂ ಮಾಡಿ ನನ್ನನ್ನ ಶಿಫ್ಟ್ ಮಾಡದಂತೆ ಕೋರ್ಟ್​ಗೆ ಮನವರಿಕೆ ಮಾಡಿ ತನ್ನ ವಕೀಲರನ್ನ ಬೇಡಿಕೊಂಡಿದ್ದಾನಂತೆ. ಬಳ್ಳಾರಿ ಜೈಲಿಗೆ ಹೋಗೋದು ಒಂದೇ.. ನರಕಕ್ಕೆ ಹೋಗೋದೂ ಒಂದೇ.. ಅಂತ ಪರದಾಡ್ತಾ ಇದ್ದಾರಂತೆ.

Related Video