UI ಸೌಂಡ್ ಟ್ರ್ಯಾಕ್‌ನಲ್ಲೂ ತಲೆಗೆ ಹುಳ ಬಿಟ್ಟ 'ಬುದ್ಧಿವಂತ': ಹೇಗಿದೆ ಉಪೇಂದ್ರ ಮೂವಿ ಹವಾ!
ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್ ಉಪೇಂದ್ರ ನಟನೆ ಹಾಗೂ ನಿರ್ದೇಶನದ ಯುಐ ಚಿತ್ರ ಆರಂಭದಿಂದಲೂ ಕುತೂಹಲ ಹುಟ್ಟಿಸಿರುವ ಚಿತ್ರ. ಇತ್ತೀಚೆಗೆ ಈ ಚಿತ್ರದ ಮ್ಯೂಸಿಕಲ್ ಜರ್ನಿಯ ಮೊದಲ ಝಲಕ್ ಸೌಂಡ್ ಆಫ್ ಯುಐ ರಿಲೀಸ್ ಆಗಿದೆ.
ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್ ಉಪೇಂದ್ರ ನಟನೆ ಹಾಗೂ ನಿರ್ದೇಶನದ ಯುಐ ಚಿತ್ರ ಆರಂಭದಿಂದಲೂ ಕುತೂಹಲ ಹುಟ್ಟಿಸಿರುವ ಚಿತ್ರ. ಇತ್ತೀಚೆಗೆ ಈ ಚಿತ್ರದ ಮ್ಯೂಸಿಕಲ್ ಜರ್ನಿಯ ಮೊದಲ ಝಲಕ್ ಸೌಂಡ್ ಆಫ್ ಯುಐ ರಿಲೀಸ್ ಆಗಿದೆ. 1 ನಿಮಿಷ 24 ಸೆಕೆಂಡ್‌ಗಳ ಈ ಮ್ಯೂಸಿಕ್ ಝಲಕ್ ನಲ್ಲಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮೋಡಿ ಮಾಡಿದ್ದಾರೆ. ಯುಐ ಚಿತ್ರದ ಮ್ಯೂಸಿಕ್‌ಗೆ ಸಂಬಂಧ ಪಟ್ಟ ಕೆಲಸಗಳು ಅಜನೀಶ್ ಲೋಕನಾಥ್, ಸಿ.ಆರ್ ಬಾಬಿ ಹಾಗೂ ಉಪೇಂದ್ರ ಅವರ ಸಾರಥ್ಯದಲ್ಲಿ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆದಿದೆ. ಚಿತ್ರದಲ್ಲಿ ಬಿಜಿಎಂ ಪ್ರಮುಖಪಾತ್ರ ವಹಿಸಿದೆ. ಹಂಗೇರಿಯಲ್ಲಿ ನಡೆದ ಈ ಮ್ಯೂಸಿಕ್ ಜರ್ನಿಯ ಒಂದು ಝಲಕ್ ಅನ್ನು ಚಿಕ್ಕ ಪ್ರೋಮೊ ಮೂಲಕ ಸೌಂಡ್ ಆಫ್ ಯುಐ ಹೆಸರಿನಲ್ಲಿ ಚಿತ್ರತಂಡ ರಿಲೀಸ್ ಮಾಡಿದೆ. ರೀಷ್ಮಾ ನಾಣಯ್ಯ ನಾಯಕಿಯಾಗಿರುವ ಈ ಸಿನಿಮಾವನ್ನು ಜಿ ಮನೋಹರನ್, ಶ್ರೀಕಾಂತ್ ಕೆ ಪಿ ನಿರ್ಮಾಣ ಮಾಡಿದ್ದಾರೆ.