ಪೂಜಾ ಹೆಗ್ಡೆಯನ್ನ ಹಿಂದಿಕ್ಕಿದ ರಶ್ಮಿಕಾ, ಅರೆರೆ... ಸಂಭಾವನೆ ಇಷ್ಟೊಂದಾ..?

ಕೊಡಗಿನ ಕುವರಿ, ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಬಿಗ್ ಸ್ಟಾರ್ ಗಳ ಜೊತೆ ತೆರೆ ಹಂಚಿಕೊಳ್ತಿರೋ ರಶ್ಮಿಕಾ ತಮ್ಮ ಸಂಭಾವನೆಯನ್ನ ಒಂದೊಂದು ಸ್ಟಾರ್ ಜೊತೆ ಆಕ್ಟ್ ಮಾಡಿದಾಗಲೂ ಹೆಚ್ಚಿಗೆ ಮಾಡಿಕೊಳ್ತಿದ್ದಾರೆ. 

First Published Jun 27, 2022, 4:25 PM IST | Last Updated Jun 27, 2022, 4:25 PM IST

ಕೊಡಗಿನ ಕುವರಿ, ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಈಗ ಬಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಬಿಗ್ ಸ್ಟಾರ್ ಗಳ ಜೊತೆ ತೆರೆ ಹಂಚಿಕೊಳ್ತಿರೋ ರಶ್ಮಿಕಾ ತಮ್ಮ ಸಂಭಾವನೆಯನ್ನ ಒಂದೊಂದು ಸ್ಟಾರ್ ಜೊತೆ ಆಕ್ಟ್ ಮಾಡಿದಾಗಲೂ ಹೆಚ್ಚಿಗೆ ಮಾಡಿಕೊಳ್ತಿದ್ದಾರೆ. ಸದ್ಯ ಕಾಲಿವುಡ್ ಸ್ಟಾರ್ ವಿಜಯ್ ಜೊತೆ ರಶ್ಮಿಕಾ ಆಕ್ಟ್ ಮಾಡ್ತಿದ್ದು ಅದಕ್ಕೆ ರಶ್ಮಿಕಾ ಪಡೆದ ಸಂಭಾವನೆ ಕೇಳಿದ್ರೆ ಆಶ್ಚರ್ಯ ಆಗುತ್ತೆ!

ರಾಕಿ ಭಾಯ್‌ಗೆ 100 ಕೋಟಿ ಸಂಭಾವನೆ ಆಫರ್! ಒಪ್ತಾರಾ ಯಶ್.? 

ನಟಿ ರಶ್ಮಿಕಾ ಮಂದಣ್ಣ ತಮಿಳಿನ ವಾರಿಸು ಸಿನಿಮಾದಲ್ಲಿ ಆಕ್ಟ್ ಮಾಡ್ತಿದ್ದಾರೆ. ಅದಕ್ಕಾಗಿ ರಶ್ಮಿಕಾ 5 ಕೋಟಿ ಸಂಭಾವನೆಯನ್ನ ಪಡೆದಿದ್ದಾರಂತೆ. ಈ ಮೂಲಕ ರಶ್ಮಿಕಾ ಸೌತ್ ನಲ್ಲಿ ಕಡಿಮೆ ಸಮಯದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯೋ ಮೊದಲ ನಟಿಯಾಗಿದ್ದಾರೆ.. 

ಕಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯೋ ನಟಿ ಪೂಜಾ ಹೆಗ್ಡೆ ಆಗಿದ್ರು. ಬೀಸ್ಟ್ ಸಿನಿಮಾಗೆ ಪೂಜಾ 3.5 ಕೋಟಿ ಸಂಭಾವನೆ ಪಡೆದಿದ್ರಂತೆ, ಆದ್ರೆ ಈಗ ರಶ್ಮಿಕಾ 5 ಕೊಟಿ ಸಂಭಾವನೆ ಪಡೆಯೋ ಮೂಲಕ ಪೂಜಾ ಹೆಗ್ಡೆ ಅವ್ರನ್ನ ಹಿಂದಿಕ್ಕಿದ್ದಾರೆ...ಒಟ್ಟಾರೆ  ಕಾಲಿವುಡ್ ಇಂಡಷ್ಟ್ರಿಯಲ್ಲಿ ಕನ್ನಡತಿಯರ ದರ್ಬಾರ್ ಜೋರಾಗಿದೆ.