ರಶ್ಮಿಕಾ ಮಂದಣ್ಣ ಮೊದಲ ಸಿನಿಮಾ 'ಕಿರಿಕ್ ಪಾರ್ಟಿ' ಅಲ್ಲ: ಮತ್ಯಾವುದು ನೋಡಿ
ನಟಿ ರಶ್ಮಿಕಾ ಮಂದಣ್ಣ ಮೊದಲ ಸಿನಿಮಾ ಕಿರಿಕ್ ಪಾರ್ಟಿ ಅಲ್ಲ ಎನ್ನುವ ವಿಚಾರ ಬಹಿರಂಗವಾಗಿದೆ.
ನಟಿ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಹುಭಾಷ ನಟಿ ರಶ್ಮಿಕಾ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ರಶ್ಮಿಕಾ ಅವರ ಮೊದಲ ಸಿನಿಮಾ ಕಿರಿಕ್ ಪಾರ್ಟಿ ಅಲ್ವಂತೆ. ಬೇರೆ ಸಿನಿಮಾ ಅಂತೆ. ಆದರೆ ಆ ಸಿನಿಮಾ ಮಧ್ಯದಲ್ಲೇ ನಿಂತು ಹೋಗಿದೆಯಂತೆ. ಆ ಸಿನಿಮಾದ ಹೆಸರು ಗೆಳೆಯರೇ ಗೆಳತಿಯರೇ. ಆ ಸಿನಿಮಾಗೆ ಆಡಿಷನ್ ನೀಡಿ, ಸೆಲೆಕ್ಟ್ ಆಗಿದ್ದರು. ಆದರೆ ಆ ಸಿನಿಮಾ ಮಧ್ಯದಲ್ಲೇ ನಿಂತು ಹೋಗಿದೆ.