ಆ್ಯಕ್ಷನ್‌ ಪ್ರಿನ್ಸ್ 'KD' ಪ್ರಪಂಚಕ್ಕೆ ಧರ್ಮನ ಎಂಟ್ರಿ! ಕೆಡಿಗೂ ಧರ್ಮನಿಗೂ ಏನು ಸಂಬಂಧ ?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ದಿ ಶೋ ಮ್ಯಾನ್ ಜೋಗಿ ಪ್ರೇಮ್ ಇಬ್ರು ಸೇರ್ಕೊಂಡು ಕೆಡಿ ಅಡ್ಡದಲ್ಲಿ ಅಡ್ಡಾಡುತ್ತಿರೋದು ನಿಮ್ಗೆ ಗೊತ್ತೇ ಇದೆ. ಈ ಜೋಡಿ ಕೆಡಿ ಖದರ್ ಹೇಗಿರುತ್ತೆ ಅಂತ ಚಿಕ್ಕ ಚಿಕ್ಕ ಸ್ಯಾಂಪಲ್ಸ್ಗಳೇ ಹೇಳಿವೆ. ಕೆಡಿ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸೌಂಡ್ ಮಾಡೋ ಸಿನಿಮಾ ಅನ್ನೋದು ಗೊತ್ತಾಗಿದೆ. ಈಗ ಕನ್ನಡ ರಾಜ್ಯೋತ್ಸವಕ್ಕೆ ಕೆಡಿ ಟೀಂ ಬಿಗ್ ಸರ್ಪ್ರೈಸ್ ಒಂದನ್ನ ರಿವೀಲ್ ಮಾಡಿದೆ. 

First Published Nov 2, 2023, 12:28 PM IST | Last Updated Nov 2, 2023, 12:28 PM IST

ಕೆಡಿ ಅಂದ್ರೆ ಧ್ರುವ ಸರ್ಜಾ. ಇದು 1980ರ ದಶಕದ ಕಥೆಯ ಸಿನಿಮಾ. ಹೀಗಾಗಿ ಧ್ರುವನ(Druva sarja) ಮಾಸ್ ರೆಟ್ರೋ ಅವತಾರ ಸಿಕ್ಕಾಪಟ್ಟೆ ಕ್ರೇಜ್ ಸೃಸ್ಟಿಸಿದೆ. ಈದ ಅದೇ ರೆಟ್ರೋ ಸ್ಟೈಲ್ನಲ್ಲೇ ಆಕ್ಷನ್ ಪ್ರಿನ್ಸ್ ಕೆಡಿ(KD Movie) ಪ್ರಪಂಚಕ್ಕೆ ಧರ್ಮನ ಎಂಟ್ರಿ ಆಗಿದೆ. ರಮೇಶ್ ಅರವಿಂದ್ ಸ್ಯಾಂಡಲ್‌ವುಡ್‌ನ(Sandalwood) ಆ್ಯಂಗ್ರಿ ಯಂಗ್ ಮ್ಯಾನ್. ಸ್ಯಾಂಡಲ್‌ವುಡ್‌ನಲ್ಲಿ ಸಹಜ ನಟ ಅಂತಲೇ ಫೇಮಸ್. ಯಾಕಂದ್ರೆ ರಮೇಶ್ ಅರವಿಂದ್(Ramesh Aravind) ಫ್ಯಾಮಿಲಿ ಪ್ರೇಕ್ಷಕರ ಫೇವರಿಟ್ ಹೀರೋ. ಆದ್ರೆ ಈಗ ಕೆಡಿ ಧ್ರುವನ ಜೊತೆ ಧರ್ಮನ ಅವತಾರ ಎತ್ತಿದ್ದಾರೆ. ಧರ್ಮ ಅಂದ್ರೆ ಸಾಫ್ಟ್ ಕ್ಯಾರೆಕ್ಟರ್ ಅಂದುಕೊಳ್ಳಬೇಡಿ. ಕೈಯಲ್ಲಿ ರಕ್ತ ಸಿಕ್ತ ಲಾಂಗ್ ಹಿಡಿದು ಬರೋ ಧರ್ಮ ಇವ್ನು. ಕೆಡಿ ಕಿಂಗ್ಡಮ್ಗೆ ರಮೇಶ್ ಅರವಿಂದ್ ಎಂಟ್ರಿ ದೊಡ್ಡ ಕುತೂಹಲ ಹುಟ್ಟಿಸಿದೆ. ಯಾಕಂದ್ರೆ ಧರ್ಮನಾಗಿರೋ ರಮೇಶ್ಗೂ ಕೆಡಿ ಒಂದು ಘಟ್ಟಿಯಾದ ಸಂಬಂಧ ಇದೆ. ಅದೇನ್ ಗೊತ್ತಾ.? KDಯ ಅಣ್ಣ ಧರ್ಮ ಅಂತೆ. ಅಂದ್ರೆ ಧ್ರುವ ಸರ್ಜಾಗೆ ಅಣ್ಣನ ಪಾತ್ರದಲ್ಲಿ ರಮೇಶ್ ಅರವಿಂದ್ ನಟಿಸುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  ಕನ್ನಡ ರಾಜ್ಯೋತ್ಸವಕ್ಕೂ ಅನೌನ್ಸ್ ಆಗಿಲ್ಲ ಯಶ್-19: ಯಶ್‌ ಅಭಿಮಾನಿಗಳು ಬಯಸುತ್ತಿರೋದೇ ಬೇರೆ..!